ಬಿಜೆಪಿ ಪಕ್ಷವು ಬರೀ ಸುಳ್ಳು ಹೇಳುವ ಪಕ್ಷ: ದಿನೇಶ ಗುಂಡುರಾವ್

ರಾಣಿಬೆನ್ನೂರು:

                ಬಿಜೆಪಿ ಪಕ್ಷವು ಬರೀ ಸುಳ್ಳು ಹೇಳುವುದರಲ್ಲಿ ಕಾಲ ಹರಣ ಮಾಡುವ ಮೂಲಕ ದೇಶದ ಅಭಿವೃದ್ಧಿ ಯಾವ ರೀತಿಯಲ್ಲೂ ಕಾಣದಂತಾಗಿದೆ, ಮತದಾರರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್ ಹೇಳಿದರು.

                ಸೋಮವಾರ ಇಲ್ಲಿನ ನೆಹರು ಮಾರುಕಟ್ಟೆ ಬಳಿ ಇರುವ ವರ್ತಕರ ಸಭಾಭವನದಲ್ಲಿ ಏರ್ಪಡಿಸಿದ್ದ ಸ್ಥಳೀಯ ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಕಾಂಗೇಸ್ ಪಕ್ಷದ 35 ಅಭ್ಯರ್ಥಿಗಳ ಪರ ಬಹಿರಂಗ ಚುನಾವಣಾ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

                 ಕಾಂಗ್ರೇಸ್ ಪಕ್ಷವು ಅಧಿಕಾರಕ್ಕಾಗಿ ಜನ್ಮತಾಳಿದ ಪಕ್ಷವಲ್ಲ, ಭಾರತೀಯರನ್ನು ಪರಕೀಯರಿಂದ ಬಿಡುಗಡೆಗೊಳಿಸಲು ಹುಟ್ಟಿದ ಪಕ್ಷವಾಗಿದ್ದು, ತ್ಯಾಗ, ಬಲಿದಾನಗಳ ಮೂಲಕ ಹೋರಾಡಿ ದೇಶವನ್ನು ಕಟ್ಟಲಾಗಿದೆ, ಬಿಜೆಪಿಯವರು ಯಾರು ತ್ಯಾಗ ಮತ್ತು ಬಲಿದಾನ ಮಾಡಿದ್ದಾರೆ ಎದೆತಟ್ಟಿ ಹೇಳಲಿ ಎಂದು ಪ್ರಶ್ನಿಸಿದ ಅವರು, ಮಹಿಳೆಯರಿಗೆ 33% ರಷ್ಟು ಮೀಸಲಾತಿ ನೀಡಿದ್ದು ಕಾಂಗ್ರೇಸ್ ಪಕ್ಷ ಎಂದರು.

                  ಭಾರತೀಯ ಪ್ರತಿಯೊಬ್ಬ ಪ್ರಜೆಗಳು ಸಮಪಾಲು, ಸಮಬಾಳು ಮತ್ತು ಸಮಾನತೆಯ ಮುಖ್ಯ ಉದ್ದೇಶದಿಂದ ಆಡಳಿತ ನಡೆಸಿದ ಪಕ್ಷ ಕಾಂಗ್ರೇಸ ಪಕ್ಷ, ಪಕ್ಷದ ಉದ್ದೇಶ ಈಡೇರಲು ಸ್ಥಳೀಯ ನಗರಸಭೆಯ ಚುನಾವಣೆಯಲ್ಲಿ ಕಾಂಗೇಸ್ ಪಕ್ಷದ ಎಲ್ಲ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಮಾಜಿ ವಿಧಾನಸಭಾ ಅಧ್ಯಕ್ಷ ಕೆ.ಬಿ.ಕೋಳಿವಾಡರಿಗೆ ಶಕ್ತಿ ನೀಡಬೇಕು ಎಂದರು.

                  ಮಾಜಿ ವಿಧಾನಸಭಾ ಅಧ್ಯಕ್ಷ ಕೆ.ಬಿ.ಕೋಳಿವಾಡ ಮಾತನಾಡಿ, ಈ ಹಿಂದಿನ ಕಾಂಗ್ರೇಸ್ ಸರ್ಕಾರದ ಆಡಳಿತದಲ್ಲಿ 160 ಭರವಸೆಗಳನ್ನು ಈಡೇರಿಸಿದ ಸಂತೃಪ್ತಿ ನನಗಿದ್ದು, ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ, ಮತ್ತಷ್ಟು ಸುಂದರ ನಗರವನ್ನಾಗಿಸಲು ಕಾಂಗೇಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

                   ಎಐಸಿಸಿ ವಕ್ತಾರ ಶಕಿಲಹ್ಮದ್, ಕೆಪಿಸಿಸಿ ಕಾರ್ಯದರ್ಶಿಗಳಾದ ಡಿ.ಬಸವರಾಜ, ಪ್ರಕಾಶ ಕೋಳಿವಾಡ, ಪ್ರೊ| ಐ.ಜಿ.ಸನದಿ, ಬಸವನಗೌಡ ಮರದ ಸೇರಿದಂತೆ ಕಾಂಗೇಸ್ ಪಕ್ಷದ ಅಭ್ಯರ್ಥಿಗಳು ಇದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link