ಬಿಜೆಪಿ ಸರ್ಕಾರವಿದೆ ಅಭಿವೃದ್ದಿಗಾಗಿ ಪಕ್ಷದ ಅಭ್ಯರ್ಥಿಗೆ ಮತ ನೀಡಿ

ಪಾವಗಡ :

  ಪಟ್ಟಣದ ಶ್ರಿ ಶಾಲಾ ಅವರಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ಮಾತನಾಡುತ್ತಿರುವ

          ರಾಜ್ಯದ ಹಿತಕಾಯುವವರು ಮುಖ್ಯಮಂತ್ರಿಯಾಗಬೇಕು, ದೇಶದ ಹಿತಕಾಯುವವರು ಪ್ರಧಾನಮಂತ್ರಿಯಾಗಬೇಕು, ಪಂಚಾುತಿ ಅಭಿವೃದ್ದಿ ಮಾಡುವವರು ಗ್ರಾ.ಪಂ. ಸದಸ್ಯರಾಗಬೇಕು ಎಂದು ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ತಿಳಿಸಿದರು.

ಶುಕ್ರವಾರ ಪಟ್ಟಣದ ಶ್ರೀಶಾಲಾ ಅವರಣದಲ್ಲಿ ತಾ. ಬಿಜೆಪಿ ವತಿುಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಮತ್ತು ಗ್ರಾಪಂ ಸದಸ್ಯರ ಸಭೆಯಲ್ಲಿ ಬಾಗವಹಿಸಿ ಮಾತನಾಡಿದ ಅವರು ಸಂಸ್ಕøತವಂತರ ಜೊತೆಯಲ್ಲಿದ್ದರೆ ದೇಶಕಟ್ಟಬಹುದು ಜನರ ಹೃದಯಲ್ಲಿ ಇದ್ದರೆ ಜನ ನಿಮ್ಮ ಹಿಂದೆ ಬರುತ್ತಾರೆ ಪ್ರತಿ ಗ್ರಾಪಂ ಸದಸ್ಯರು ಜನನಾಯಕರಾಗಬೇಕು ಪಂಚಾುತಿಯನ್ನು ಅಭಿವೃದ್ದಿಪಡಿಸಬೇಕು ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಸಹ ಜಿಲ್ಲೆಯ ಕೊರಟಗೆರೆ, ಮದುಗಿರಿ, ಪಾವಗಡ ತಾಲ್ಲೂಕುಗಳಲ್ಲಿ ಪಕ್ಷಕ್ಕೆ ನೆಲೆ ಇಲ್ಲಾ, ಗ್ರಾಮ ಪಂಚಾುತಿಯ ಅಭಿವೃದ್ದಿಗಾಗಿ ನರೇಂದ್ರ ಮೋದಿ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ, ಸಾಮಾನ್ಯ ಕಾರ್ಯಕರ್ತನಾಗಿರುವ ಲೋಕೇಶ್ ಗೌಡರನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಹೇಳಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಾವಗಡದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿ ಶಪಥ ಮಾಡಿದರು.

ಶಿರಾ ಶಾಸಕರಾದ ರಾಜೇಶ್ ಗೌಡ ಮಾತನಾಡಿ ಶಿರಾದ ಮದಲೂರು ಕೆರೆಗೆ ನೀರು ಹರಿಸುವುದಾಗಿ ಉಪಚುನಾವಣೆಯಲ್ಲಿ ಯಡಿಯೂರಪ್ಪ ಘೋಷಣೆ ಮಾಡಿದ್ದರು ಅದರಂತೆ ನಾನು ಶಾಸಕನಾಗಿ ಆಯ್ಕೆಯಾದ ನಂತರ ನೀರು ಹರಿಸಿದ್ದು, ಬಿ.ಜೆ.ಪಿ. ಪಕ್ಷಕ್ಕೆ ನೆಲೆ ಇಲ್ಲದ ಶಿರಾದಲ್ಲಿ ಬಿಜೆಪಿ ಬಾವುಟ ಹಾರಿಸಲಾಗಿದೆ, ತುಂಗಭÀದ್ರಾ ಯೋಜನೆಯಲ್ಲಿ ಕುಡಿಯುವ ನೀರು ಮತ್ತು ಭದ್ರಾಮೇಲ್ಧಂಡೆ ಯೋಜನೆಯಲ್ಲಿ ಹಾಗೂ ಎತ್ತಿನಹೊಳೆ ಯೋಜನೆಯಲ್ಲಿ ಪಾವಗಡ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಆದ್ದರಿಂದ ಈ ಚುನಾವಣೆಯಲ್ಲಿ ಲೋಕೇಶ್ ಗೌಡರ ಗೆಲುವು ಖಚಿತ ಎಂದು ತಿಳಿಸಿದರು.

ತಾ. ಬಿಜೆಪಿ ಅಧ್ಯಕ್ಷ ರವಿಶಂಕರ್ ನಾಯ್ಕ, ದಾವಣಗೆರೆ ಬಿಜೆಪಿ ಮುಖಂಡ ಲಕ್ಷ್ಮೀಶ, ಮಾಜಿ ವಿÁನಪರಿಷತ್ ಸದಸ್ಯ ಹುಲಿನಾಯ್ಕರ್, ಮುಖಂಡ ಡಾ. ಜಿ.ವೆಂಕಟರಾಮಯ್ಯ ಮಾತನಾಡಿದರು. ಜಿಲ್ಲಾ ಬಿಜೆಪಿ ಉಪಾದ್ಯಕ್ಷ ರವಿ, ಮುಖಂಡರಾದ ಕೃಷ್ಣನಾಯ್ಕ, ಕೊತ್ತೂರು ಹನುಮಂತರಾಯಪ್ಪ, ಶಿವಕುಮಾರ್ ಸಾಕೇಲ್, ಪಾಲಯ್ಯ, ಮದು ಪಾಳ್ಳೇಗಾರ್, ಬ್ಯಾಡನೂರು ಶಿವು, ಮಾಧವರೆಡ್ಡಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link