ಹಾವೇರಿ
ಚುನಾವಣೆಯ ಕಾವು ಒಳಒಳಗೆ ಆಂತರಿಕ ಪ್ರಚಾರ ಜೋರಾಗಿದ್ದು, ಹಾವೇರಿ-ಗದಗ ಲೋಕಸಭಾ ಚುನಾವಣೆಯ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳ ನೇರಾನೇರ ಹಣಾಹಣಿ ಸ್ಪರ್ಧೆಯಾಗಲಿದೆ. ಬಿಜೆಪಿ ಪಕ್ಷದಿಂದ ಶಿವಕುಮಾರ ಉದಾಸಿ : ಕಳೆದ ಎರಡು ಬಾರಿ ಗೆಲವು ಸಾಧಿಸಿ ಹ್ಯಾಟ್ರಿಕ್ ಜಯದ ಕನಸಿನಲ್ಲಿ ಅಭ್ಯರ್ಥಿ ಎಸ್,ಸಿ,ಯು ಶಥ ಪ್ರಯತ್ನ ಮಾಡುತ್ತಿದ್ದಾರೆ.
ಈಗಾಗಲೇ 8 ವಿಧಾನಸಭಾ ವ್ಯಾಪ್ತಿಯಲ್ಲಿ ಹೆಚ್ಚಿನ ಮತ ಬರುವಂತೆ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಪ್ರಚಾರ ಮಾಡಲು ಮುಂದಾಗಿದ್ದಾರೆ. ಕಾಂಗ್ರೇಸ್(ಮೈತ್ರಿ) ಅಭ್ಯರ್ಥಿ ಡಿಆರ್ ಪಾಟೀಲ ಎಂಟ್ರಿ : ಬಾರಿ ಕುತೂಹಲ ಮೂಡಿಸಿದ ಕಾಂಗ್ರೇಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಗದಗ ಜಿಲ್ಲೆಯ ಮಾಜಿ ಶಾಸಕ ಡಿಆರ್ ಪಾಟೀಲರನ್ನು ಹೈಕಮಾಂಡ್ ಘೋಷಣೆ ಮಾಡಿದೆ. ಹಾವೇರಿ ಲೋಕಸಭಾ ಕ್ಷೇತ್ರ ಅಲ್ಪಸಂಖ್ಯಾತರ ಅಭ್ಯರ್ಥಿಗೆ ಕಳೆದೆರಡು ಬಾರಿ ಮಣೆ ಹಾಕಿ ಈಗ ಲಿಂಗಾಯತ್ ಸಮುದಾಯದ ಪ್ರಬಲ ಅಭ್ಯರ್ಥಿಯನ್ನು ಕ್ಷಾಣಾಕ್ಷತನದಿಂದ ಹೈಕಮಾಂಡ್ ಕಣಕಿಳಿಸಿದೆ.
ನೇರಾನೇರ ಹಣಾಹಣಿಗೆ ಅಖಾಡ ಸಿದ್ದ : ಒಂದು ಲೋಕಸಭಾ ಕ್ಷೇತ್ರ ಯಾವ ಪಕ್ಷ ಗೆದ್ದರೆ ಆ ಜಿಲ್ಲೆಯ ಗೆದ್ದ ಪಕ್ಷದ ಭದ್ರಕೋಟೆ ಎಂದು ಕರೆಯುವುದುಂಟು. ಅದಕ್ಕಾಗಿ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳು ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಹರಸಾಹಸಕ್ಕೆ ಉಭಯ ಪಕ್ಷಗಳು ಮುಖಂಡರು ಹಾಗೂ ಕಾರ್ಯಕರ್ತರು ಕಾರ್ಯಶೀಲರಾಗಿದ್ದಾರೆ. ಈ ಲೋಕಸಭಾ ಕ್ಷೇತ್ರವನ್ನು ಗೆದ್ದು ತಮ್ಮತನ ಮುಂದುವರಿಸುವ ಹಾಗೂ ಕಳೆದೆರಡು ಬಾರಿ ಕ್ಷೇತ್ರ ಕಳೆದುಕೊಂಡ ಕಾಂಗ್ರೇಸ್ ಶತಾಯಗತಾಯವಾಗಿ ಗೆದ್ದು ತಮ್ಮ ಅಭ್ಯರ್ಥಿ ಗೆಲ್ಲಿಸಲು ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ಒಟ್ಟಾರೆ ಉಭಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಸಜ್ಜಾಗಿದ್ದಾರೆ. ಆದರೆ ಮತದಾರ ಪ್ರಭು ಯಾರಿಗೆ ಯಾಲಕ್ಕಿ ಮಾಲೆಯನ್ನು ಹಾಕುವಂತೆ ಮಾಡಿ,ಸಂಸತ್ತಿಗೆ ಯಾರನ್ನು ಕಳಿಸುತ್ತಾರೋ ಕಾದು ನೋಡಬೇಕಾಗಿದೆ.