ಬಿಸಿಲಿನ ತಾಪ ತಣಿಸಿಕೊಳ್ಳಲು ಮಣ್ಣಿನ ಮಡಕೆಗಳಿಗೆ ಮೊರೆ

 ಹುಳಿಯಾರು:

      ಹುಳಿಯಾರಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿ ಬಿಸಿಲಿನ ಝಳಕ್ಕೆ ಜನ ಹೈರಾಣಾಗುತ್ತಿದ್ದು, ಜನರು ದಾಹ ತಣಿಸಿಕೊಳ್ಳಲು ತಣ್ಣನೆಯ ನೀರಿಗಾಗಿ `ಬಡವರ ಫ್ರಿಜ್’ ಖ್ಯಾತಿಯ ಮಣ್ಣಿನ ಮಡಕೆಗಳ ಮೊರೆ ಹೋಗುತ್ತಿದ್ದಾರೆ.

       ಹುಳಿಯಾರಿನಲ್ಲಿ ಪ್ರತಿದಿನ 37 ಡಿಗ್ರಿಯಷ್ಟು ಬಿಸಿಲಿನ ತಾಪಮಾನ ದಾಖಲಾಗುತ್ತಿದೆ. ಬೆಳಿಗ್ಗೆ ಎಂಟು ಗಂಟೆಯಿಂದಲೇ ಬಿಸಿಲಿನ ಝಳ ಆರಂಭಗೊಳ್ಳುತ್ತಿದ್ದು ಮಧ್ಯಾಹ್ನ 12 ಗಂಟೆ ವೇಳೆಗೆ ನೆತ್ತಿ ಸುಡುವಷ್ಟು ಬಿಸಿಲು ಹೆಚ್ಚಾಗುತ್ತಿದೆ. ಸಂಜೆ ಐದು ಗಂಟೆಯವರೆಗೂ ಉರಿಯುವ ಬಿಸಿಲಿನಿಂದ ಜನರು ಪರದಾಡುವಂತಾಗಿದೆ.

     ಬೇಸಿಗೆ ಆರಂಭದಲ್ಲೇ ಪ್ರಖರ ಬಿಸಿಲಿದೆ. ಏಪ್ರಿಲ್, ಮೇ ತಿಂಗಳಿನಲ್ಲಿ ಬಿಸಿಲಿನ ತಾಪಮಾನ ಮತ್ತಷ್ಟು ಹೆಚ್ಚಾಗಬಹುದು ಎಂಬ ಆತಂಕ ಜನರನ್ನು ಕಾಡುತ್ತಿದೆ. ದಾಹ ತೀರಿಸಿಕೊಳ್ಳಲು ಕಲ್ಲಂಗಡಿ, ಎಳನೀರು, ಜ್ಯೂಸ್, ಐಸ್‍ಕ್ರೀಮ್‍ಗಳ ಮೊರೆ ಹೋಗುತ್ತಿದ್ದಾರೆ. ಫ್ಯಾನ್, ಕೂಲರ್‍ಗಳ ಬೇಡಿಕೆ–ಬೆಲೆಯೂ ಹೆಚ್ಚಾಗಿದೆ.

     ಅಲ್ಲದೆ ಕೇವಲ ಹಳ್ಳಿಗೆ ಸೀಮಿತವಾಗಿ ಕಣ್ಮರೆಯಾಗುವ ಹಂತದಲ್ಲಿದ್ದ ಮಣ್ಣಿನ ಮಡಕೆಗಳ ವಹಿವಾಟು ಇಂದು ವಾರದ ಸಂತೆಯಲ್ಲಿ ಗರಿಗೆದರುತ್ತಿದೆ. ದಿನೇ ದಿನೇ ಹೆಚ್ಚಾಗುತ್ತಿರುವ ಬಿಸಿಲಿನ ಧಗೆಗೆ ಮನೆಯಲ್ಲಿರುವ ತಾಮ್ರ, ಸಿಲ್ವರ್, ಸ್ಟೀಲ್ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟ ಕುಡಿಯುವ ನೀರು ಬಿಸಿಯಾಗಿರುವುದರಿಂದ ಎಷ್ಟು ನೀರು ಕುಡಿದರೂ ದಾಹ ತೀರುತ್ತಿಲ್ಲ. ಪರಿಣಾಮ ಜನ ಮಣ್ಣಿನ ಮಡಕೆಯತ್ತ ಮುಖಮಾಡುತ್ತಿದ್ದಾರೆ.

      ಪಟ್ಟಣದ ವಾರದ ಸಂತೆ ಜೊತೆಗೆ ಆಂಜನೇಯಸ್ವಾಮಿ ದೇವಸ್ಥಾನದ ಎದುರಿಗೆ ಕಾಯಂ ಮಡಕೆ ವ್ಯಾಪಾರ ನಡೆಯುತ್ತದೆ. ಇಲ್ಲಿ ವಾಡಿಕೆಯ ವ್ಯಾಪಾರಕ್ಕಿಂದ ಈ ಬೇಸಿಗೆ ಝಳದಿಂದ ಮಡಕೆ ಮಾರಾಟ ಮತ್ತೊಷ್ಟು ಚುರುಕು ಪಡೆಯುತ್ತದೆ. 50 ರೂಗಳಿಂತ ನೂರೈವತ್ತು ರೂಗಳ ವರೆವಿಗೆ ವಿವಿಧ ಗಾತ್ರದ ಮಡಕೆಗಳು ವ್ಯಾಪಾರ ಆಗುತ್ತಿದ್ದು ಜನರ ಬೆಲೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಖರೀಧಿಯಲ್ಲಿ ಉತ್ಸಾಹ ತೋರುತ್ತಿರುವುದು ಮಡಿಕೆಯ ಅಗತ್ಯತೆ ಮತ್ತು ಪ್ರಾಮುಖ್ಯತೆಗೆ ಸಾಕ್ಷ್ಯಿಯಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap