ಬಿ.ಎಂ.ಸಿ ಘಟಕದ ಉದ್ಘಾಟನಾ ಸಮಾರಂಭ

ಗುಬ್ಬಿ:

             ಕಳೆದ ಹಲವು ವರ್ಷಗಳಿಂದಲೂ ವರ್ಷಗಳಿಂದಲೂ ಸಮರ್ಪಕವಾಗಿಮಳೆ ಬಾರದೆ ಅಂತರ್ಜಲ ಕುಸಿತಗೊಂಡಿದ್ದ ಈ ಭಾಗದಲ್ಲಿ ತೀವ್ರತರ ಬರಗಾಲ ಉಂಟಾಗಿದ್ದು ರೈತರು ಕೃಷಿ ಮಾಡಿ ಜೀವನ ಮಾಡಲು ಸಾಧ್ಯವಾಗಿಲ್ಲ ಆದರೆ ಹೈನುಗಾರಿಕೆಯಿಂದ ಜೀವನ ನಡೆಸುವ ಮೂಲಕ ಆರ್ಥಿಕವಾಗಿ ಬೆಳವಣಿಗೆಯಾಗಿದ್ದಾರೆ ಎಂದು ಶಾಸಕ ಮಸಾಲೆ ಜಯರಾಂ ತಿಳಿಸಿದರು.
            ತಾಲೂಕಿನ ಚಂದ್ರಶೇಖರಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದಿಂದ ಬಿ.ಎಂ.ಸಿ ಘಟಕದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು. ಈ ಭಾಗದ ಕೆರೆಗಳು ತುಂಬಿದರೆ ಮಾತ್ರ ಇಲ್ಲಿನ ರೈತರು ಜೀವನ ಮಾಡಲು ಸಾಧ್ಯವಾಗುತ್ತದೆ ಹಾಗಾಗಿ ಈ ಭಾಗದ ಕೆರೆಗಳನ್ನು ಎಲ್ಲಾ ಜನಪ್ರತಿನಿಧಿಗಳು ಮತ್ತು ರೈತರ ಸಹಕಾರದಿಂದ ಕೆರೆಯನ್ನು ತುಂಬಿಸುವಂತಹ ಕೆಲಸವನ್ನು ಮಾಡಲಾಗುತ್ತದೆ ಬುಧವಾರ ಸಂಜೆ 5 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೇಮಾವತಿ ನೀರು ಹರಿಸುವ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಕರೆಯಲಾಗಿದ್ದು ಅಲ್ಲಿ ಯಾವ ತೀರ್ಮಾನವಾಗುತ್ತದೆ ಅದರ ಮೇಲೆ ಮುಂದಿನ ಹೋರಾಟಕ್ಕೆ ಸಿದ್ದತೆ ಮಾಡಲಾಗುತ್ತದೆ ಎಂದು ತಿಳಿಸಿದರು.
            ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ತೆಂಗು, ಅಡಿಕೆ, ನಂಬಿ ಜೀವನ ಮಾಡಲು ಇಂದು ಸಾಧ್ಯವಾಗುತ್ತಿಲ್ಲ ಕಾರಣ ಅದಕ್ಕೆ ಬೆಂಬಲ ಬೆಲೆ ಸಿಕ್ಕಿಲ್ಲ ಹಾಗಾಗಿ ಈ ಮಳೆ ನಂಬಿಕೊಂಡು ಜೀವನ ಮಾಡುವುದು ಕಷ್ಟವಾಗುತ್ತದೆ ಬಹುತೇಕ ಈ ಭಾಗದಲ್ಲಿ ರೈತರು ಹೈನುಗಾರಿಕೆ ಮಾಡಿಕೊಂಡು ಜೀವನ ಮಾಡುತ್ತ ಬಂದಿದ್ದಾರೆ ಇಂದು ಆಧುನಿಕವಾದ ಶಿಥಲೀಕರಣ ವ್ಯವಸ್ಥೆ ಸಿದ್ದವಾಗಿದ್ದು ಇದರಿಂದ ಸಹಕಾರ ಸಂಘಕ್ಕೆ ಹಾಗೂ ರೈತರಿಗೆ ಅನುಕೂಲವಾಗುತ್ತದೆ ಪ್ರತಿಯೂಬ್ಬ ರೈತರು ಸಹ ಹಸುಗಳಿಗೆ ವಿಮೆಯನ್ನು ಮಾಡಿಸಬೇಕು ಇದು ರೈತರ ಹಿತವನ್ನು ಕಾಯುತ್ತದೆ ಎಂದರು.
            ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ ಪ್ರತಿವರ್ಷ ಸಿ.ಎಸ್ ಪುರ ಹಾಲು ಒಕ್ಕೂಟಕ್ಕೆ ಉತ್ತಮ ಡೈರಿ ಎಂದು ಬಹುಮಾನ ಬರುತ್ತದೆ ಇದನ್ನು ನೋಡಿದಾಗ ಇಲ್ಲಿ ಸಹಕಾರ ಸಂಘ ಚನ್ನಾಗಿ ನಡೆಯುತ್ತದೆ ಎಂದು ತಿಳಿಯುತ್ತದೆ. ದೇಶದಲ್ಲಿ ಗುಜರಾತ್ ರಾಜ್ಯ ಹಾಲು ಒಕ್ಕೂಟದಲ್ಲಿ ಪ್ರಥಮ ಸ್ಥಾನÀಗಳಿಸಿದೆ ಕಾರಣ ಅಲ್ಲಿ ಗುಣಮಟ್ಟದ ಹಾಲು ಸಿಗುತ್ತಿದ್ದು ಸಾಕಷ್ಟು ಆದಾಯಗಳಿಸುತ್ತಿದೆ ಕರ್ನಾಟಕ ಎರಡನೆ ಸ್ಥಾನದಲ್ಲಿದ್ದು ಇದನ್ನು ಮೊದಲ ಸ್ಥಾನಕ್ಕೆ ತರುವತ್ತ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ನೀವೆಲ್ಲರೂ ಸಹಕಾರ ನೀಡಿದರೆ ಉತ್ತಮವಾಗಿ ಒಕ್ಕೂಟಗಳು ಬೆಳೆಯುತ್ತವೆ ಎಂದರು
             ಹಾಲು ಒಕ್ಕೂಟದ ನಿರ್ದೆಶಕ ಜಿ.ಚಂದ್ರಶೇಖರ್ ಮಾತನಾಡಿ ಇಲ್ಲಿನ ಹಾಲು ಉತ್ಪಾದಕರ ಸಂಘದಲ್ಲಿ ಪ್ರತಿದಿನ 3800 ಲೀಟರ್ ನಷ್ಟು ಹಾಲು ಉತ್ಪಾದನೆಯಾಗುತ್ತಿರುವುದು ಸಂತೋಷ ತಂದಿದೆ. ಹಾಗಾಗಿ ಇಲ್ಲಿಗೆ ಬೇಕಾದಂತಹ ಎಲ್ಲಾ ರೀತಿಯ ಸೌಲಭ್ಯಗಳನ್ನು ಸಹ ನೀಡಲಾಗುತ್ತಿದೆ ಮುಂದಿನ ದಿನದಲ್ಲೂ ಸಹ ನೀಡಲಾಗುತ್ತದೆ 28 ಲಕ್ಷದಷ್ಟು ನಿವ್ವಳ ಲಾಭವನ್ನು ಕಳೆದ ವರ್ಷ ಗಳಿಸಿದೆ ಇದು ಎಲ್ಲರ ಸಹಕಾರದಿಂದ ಮುಂದಿನ ದಿನದಲ್ಲೂ ಹೀಗೆ ಮುಂದುವರಿಸಿ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಲು ಒಕ್ಕೂಟದ ಅಧ್ಯಕ್ಷ ವೈ.ರಮೇಶ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ರತ್ನಮ್ಮನಂಜೆಗೌಡ, ಎಪಿಎಂಸಿ ಸದಸ್ಯ ಲೊಕೇಶ್, ಗ್ರಾಪಂ ಅಧ್ಯಕ್ಷೆ ಗೀತಾ ರಾಮಕೃಷ್ಣಯ್ಯ, ಉಪಾಧ್ಯಕ್ಷ ಪಾಂಡುರಂಗಯ್ಯ, ತಾ.ಪಂ ಸದಸ್ಯ ತಿಮ್ಮೆಗೌಡ, ಹಾಲು ಒಕ್ಕೂಟದ ನಿರ್ದೆಶಕ ಮಹಾಲಿಂಗಯ್ಯ, ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೆಶಕ ಬಿ.ಮುನೆಗೌಡ, ಉಪವ್ಯವಸ್ಥಾಪಕ ಚಂದ್ರಪ್ಪ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶಿವಣ್ಣ ಹಾಗೂ ಸಹಕಾರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link