ಬಿ ಖಾತಾ ನೀಡಿಕೆಯಿಂದ ಸರ್ಕಾರಕ್ಕೆ 1100 ಕೋಟಿ ಆದಾಯ :ಭೈರತಿ ಸುರೇಶ್‌

ಬೆಂಗಳೂರು

    ರಾಜ್ಯದ ನಗರ ಪ್ರದೇಶಗಳಲ್ಲಿರುವ ಅನಧಿಕೃತ ನಿವೇಶನ ಮತ್ತು ಕಟ್ಟಡಗಳಿಗೆ ಬಿ ಖಾತಾ ನೀಡಲು ಸರ್ಕಾರ ನಿರ್ಧರಿಸಿದೆ. ವಿಧಾನಸೌಧದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಈ ರೀತಿ ಬಿ ಖಾತಾ ನೀಡಿದರೆ ಸರ್ಕಾರದ ಬೊಕ್ಕಸಕ್ಕೆ 1100 ಕೋಟಿ ರೂಪಾಯಿ ಆದಾಯ ಬರಲಿದೆ ಎಂದರು.

    ಬೆಂಗಳೂರು ಹೊರತುಪಡಿಸಿ ರಾಜ್ಯದ ಎಲ್ಲ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ನಿವೇಶನ ಮತ್ತು ಕಟ್ಟಡಗಳಿಗೆ ಬಿ ಖಾತಾ ನೀಡಿದರೆ,ಆಸ್ತಿದಾರರು ಸಾಲ ಪಡೆಯಲು,ಸ್ವತ್ತನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ. ಬಿ ಖಾತಾ ಇಲ್ಲದ ಪರಿಣಾಮವಾಗಿ ರಾಜ್ಯದ ನಗರ ಪ್ರದೇಶಗಳ ಲಕ್ಷಾಂತರ ಮಂದಿ ಪಡಿಪಾಟಲು ಪಡುತ್ತಿದ್ದಾರೆ.ಇದನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಬಿ ಖಾತಾ ನೀಡಲು ತೀರ್ಮಾನಿಸಲಾಗಿದೆ ಎಂದರು. ಇದೇ ರೀತಿ ರಾಜ್ಯದ ನಗರ ಪ್ರದೇಶಗಳಲ್ಲಿ ಆಕ್ರಮವಾಗಿ ಕಟ್ಟಿರುವ ಕಟ್ಟಡಗಳನ್ನು 94(ಸಿ) ಅಡಿ ಸಕ್ರಮಗೊಳಿಸುವ ಕಾರ್ಯ ನೆನೆಗುದಿಗೆ ಬಿದ್ದಿದ್ದು,ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ಹಾಗೆಯೇ ಉಳಿದಿದೆ.

     ಈ ಹಿನ್ನೆಲೆಯಲ್ಲಿ ರಚನೆಯಾಗಿರುವ ಸಮಿತಿಯಿಂದ ವರದಿ ಬಂದ ಕೂಡಲೇ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತರುತ್ತೇವೆ.ಅದು ನೀಡುವ ಆದೇಶವನ್ನು ಪಾಲಿಸುತ್ತೇವೆ ಎಂದು ಸ್ಪಷ್ಟ ಪಡಿಸಿದರು.

ಸ್ಮಾರ್ಟಿ ಸಿಟಿ ಆಕ್ರಮ ತನಿಖೆಗೆ

    ಇದೇ ರೀತಿ ರಾಜ್ಯದ ಹಲವು ನಗರಗಳಲ್ಲಿ ಕೈಗೆತ್ತಿಕೊಂಡಿರುವ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಕ್ರಮಗಳಾಗಿರುವ ಕುರಿತು ದೂರುಗಳಿದ್ದು,ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಯನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಅವರು ಪ್ರಕಟಿಸಿದರು. ಬೆಳಗಾವಿ ಮತ್ತು ತುಮಕೂರು ನಗರಗಳಲ್ಲಿ ಆಕ್ರಮ ನಡೆದಿರುವ ಕುರಿತು ದೂರುಗಳಿದ್ದು ಕಳಪೆ ಕಾಮಗಾರಿಗಳು ನಡೆದಿವೆ ಎಂಬ ಮಾಹಿತಿ ಇದೆ.ಹೀಗಾಗಿ ಇದನ್ನು ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

   ಸ್ಮಾರ್ಟ್ ಸಿಟಿ ಯೋಜನೆಯ ಲೋಪಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು,ಯೋಜನೆಯಲ್ಲಿ ಒಂದು ನಗರದ ಕೆಲವೇ ವಾರ್ಡುಗಳನ್ನು ಅಭಿವೃದ್ಧಿಪಡಿಸಲಾಗಿದೆ.ಆ ಮೂಲಕ ಅಭಿವೃದ್ಧಿಯಾದ ವಾರ್ಡುಗಳ ಪಕ್ಕದಲ್ಲೇ ಅಭಿವೃದ್ಧಿಯಾಗದ ವಾರ್ಡುಗಳು ಇವೆ.

   ಹೀಗೆ ಒಂದು ನಗರದ ಕೆಲವೇ ಭಾಗಗಳು ಅಭಿವೃದ್ಧಿಯಾಗಿ ಇನ್ನೂ ಹಲ ಭಾಗಗಳು ಅಭಿವೃದ್ಧಿಯಾಗದೆ ಹೋದರೆ ಹೇಗೆ?ಎಂದು ಪ್ರಶ್ನಿಸಿದ ಅವರು,ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜ್ಯದ ಹಲವು ನಗರಗಳಲ್ಲಿ ಕಾಮಗಾರಿ ಮುಗಿಯುತ್ತಾ ಬಂದಿದ್ದು ಬಹುತೇಕ ಕೆಲಸ ಪೂರ್ಣವಾಗಿದೆ ಎಂದು ಬಿಲ್ಲು ಪಡೆಯಲಾಗಿದೆ ಎಂದು ನುಡಿದರು. ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಸರ್ಕಾರ ಸೂಚನೆ ನೀಡಿದೆ ಎಂಬ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಈ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದ ಆರೋಪಗಳು ಕೇಳಿ ಬಂದಿರುವುದರಿAದ ಸ್ಥಗಿತಕ್ಕೆ ಸೂಚನೆ ನೀಡಲಾಗಿದೆ.

    ಯೋಜನೆಯಡಿ ಎಲ್ಲೆಲ್ಲಿ ಅವ್ಯವಹಾರ ನಡೆದಿದೆಯೋ?ಅದನ್ನು ಮಾತ್ರ ಹೆಚ್ಚಿನ ತನಿಖೆಗೆ ವಹಿಸಿ,ಉಳಿದಂತೆ ಎಲ್ಲ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದರು. ಹಲವು ಕಡೆ ಕೆಲಸ ಮಾಡದೆ ಬಿಲ್ಲು ಮಂಜೂರು ಮಾಡಿಕೊಂಡ ಉದಾಹರಣೆಗಳಿವೆ.ಹೀಗಾಗಿ ಅದನ್ನು ಪರಿಶೀಲಿಸಲೇಬೇಕಲ್ಲ?ಯಾರು ತಪ್ಪು  ಮಾಡಿದ್ದಾರೋ?ಅವರು ಶಿಕ್ಷೆ ಅನುಭವಿಸಲೇಬೇಕು ಎಂದು ಸ್ಪಷ್ಟ ಪಡಿಸಿದರು. ತಪ್ಪು ಮಾಡಿದ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುತ್ತದೆ.

    ಅದೇ ರೀತಿ ಅಂತವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ನುಡಿದರು.ಅಂದ ಹಾಗೆ ಸರ್ಕಾರದ ಯಾವುದೇ ಇಲಾಖೆಗಳಲ್ಲಿ ಆಗಿರುವ ತಪ್ಪುಗಳ ಬಗ್ಗೆ ತನಿಖೆ ಮಾಡಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದ ಅವರು,ನಾವು ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆ ನೀಡುತ್ತೇವೆ.ಆದರೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬಿದ್ದ ನಂತರ ಅಸ್ತಿತ್ವಕ್ಕೆ ಬಂದ ನಂತರ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ,ಹಿಂದಿನ ಸರ್ಕಾರದ ಹಲವು ಯೋಜನಗಳನ್ನು ರದ್ದುಪಡಿಸಿ ಬಿಜೆಪಿ ಶಾಸಕರಿಗೆ ಅನುಕೂಲ ಮಾಡಿಕೊಟ್ಟಿತ್ತು ಎಂದರು.

ನಾವು ಆ ತರ ಮಾಡುವುದಿಲ್ಲ.ಯೋಜನೆಗಳನ್ನು ರದ್ದುಪಡಿಸಿ ನಮ್ಮ ಪಕ್ಷದ ಶಾಸಕರಿಗೆ ಹಂಚುವ ಕೆಲಸ ಮಾಡುವುದಿಲ್ಲ ಎಂದರು.

ಕುಡಿಯುವ ನೀರಿಗೆ ಸಮಸ್ಯೆಯಿಲ್ಲ

     ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದ್ದು,ಇದನ್ನು ಪರಿಹರಿಸಲು ಖಾಸಗಿ ಬೋರ್ ವೆಲ್ ಗಳನ್ನು ವಶಕ್ಕೆ ಪಡೆಯುವುದಲ್ಲದೆ, ಕೊರತೆ ಇರುವ ಕಡೆ ಟ್ಯಾಂಕರುಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದರು.ರಾಜ್ಯದ ಏಳು ಪಟ್ಟಣಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು ಅದನ್ನು ಇದೇ ಮಾರ್ಗದ ಮೂಲಕ ಪರಿಹರಿಸಲಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap