ಇಂದು ಬೆಳಗ್ಗೆ 6 ಗಂಟೆಯಿಂದ ಪ್ರಯೋಗಿಕವಾಗಿ ಜಾರಿ
ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಬಿಬಿಎಂಪಿ ಆಯುಕ್ತರು, ಪೊಲೀಸರ ಜಂಟಿ ಆಯುಕ್ತರು ಸೇರಿದಂತೆ ಹಲವು ಇಲಾಖೆಗಳ ಸಹಕಾರದಲ್ಲಿ ಜಂಟಿ ಪರಿಶೀಲನೆ ಮಾಡಿ ಟ್ರಾಫಿಕ್ ನಿಯಂತ್ರಿಸಲು ಮಾಸ್ಟರ್ ಪ್ಲಾನ್ ಸಿದ್ದಪಡಿಸಿದ್ದಾರೆ. ಶುಕ್ರವಾರ ಬೆಳಗ್ಗೆ 6ಗಂಟೆಯಿಂದ ಪ್ರಾಯೋಗಿಕವಾಗಿ ಆರಂಭಮಾಡಲು ಮುಂದಾಗಿದ್ದಾರೆ.
ಟ್ರಾಫಿಕ್ ಕಂಟ್ರೋಲ್ ಮಾಡಲು ಹೊಸ ತಂತ್ರಜ್ಞಾನ ಹಾಗೂ ನಿಯಮಗಳು ಬೆಂಗಳೂರಿಗೆ ಅವಶ್ಯಕತೆ ಇದೆ ಎಂದು ಪ್ರಜಾಪ್ರಗತಿ ಪತ್ರಿಕೆಯಲ್ಲಿ ಸಂಕ್ಷೇಪವಾಗಿ ವರದಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಅಧಿಕಾರಿಗಳು ಹೊಸ ಸಂಚಾರಿ ಸೂಚನೆಗಳನ್ನು ಹೊರಡಿಸಿದ್ದಾರೆ.
ನಗರದಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡುವಂತೆ ಪ್ರಧಾನಿ ಮೋದಿ ಸೂಚಿಸಿದ ಹಿನ್ನೆಲೆಯಲ್ಲಿ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೆಗೌಡ ಅವರು ಬುಧವಾರ ಹೆಬ್ಬಾಳ ಟ್ರಾಫಿಕ್ ಜಂಕ್ಷನ್ ಬಳಿ ಪರಿಶೀಲನೆ ನಡೆಸಿ, ಸಂಬಂಧ ಪಟ್ಟ ಅಧಿಕಾರಿಗಳ ಉನ್ನತ ಮಟ್ಟದ ಅಧಿಕಾರಿಗಳ ಸಭೆಯ ಮಾಡಿ ಟ್ರಾಫಿಕ್ ಕಂಟ್ರೋಲ್ ಗೆ ಹೊಸ ಪ್ಲಾನ್ ರೂಪಿಸಿದ್ದಾರೆ.
ಟ್ರಾಫಿಕ್ ಕಂಟ್ರೋಲ್ ಗೆ ಕೈಗೊಂಡ ಕ್ರಮಗಳು :
1. ಯಲಹಂಕ/ಕೊಡಿಗೇಹಳ್ಳಿ/ಕೆಂಪಾಪುರ/ಜಕ್ಕೂರು ಇತ್ಯಾದಿ ಕಡೆಗಳಿಂದ ಸರ್ವಿಸ್ ರಸ್ತೆಯ ಮೂಲಕ ನಗರಕ್ಕೆ
ಹೋಗುವ ವಾಹನಗಳು ಹೆಬ್ಬಾಳ ಫ್ಲೈ ಓವರ್ ಮೂಲಕ ನೇರವಾಗಿ ಪ್ರವೇಶಿಸುವಂತಿಲ್ಲ. ಹೆಬ್ಬಾಳ ಸರ್ಕಲ್ ನಲ್ಲಿರುವ ಲೂಪ್ ರ‍್ಯಾಂಪ್ ಅನ್ನು ಬಳಸಿ, ನಗರಕ್ಕೆಬರಲು ಅವಕಾಶ..
2 ) ಏರ್‌ಪೋರ್ಟ್ ನ ಏಲಿವೇಟೆಡ್ ಕಾರಿಡಾರ್‌ನಿಂದ ಬೆಂಗಳೂರು ನಗರದ ಕಡೆಗೆಬರುವ ಬಸ್‌ಗಳು ಹೆಬ್ಬಾಳ
ಸರ್ಕಲ್ ನಲ್ಲಿ ಬಸ್ ಪ್ರಯಾಣಿಕರನ್ನು ನಿಗದಿಪಡಿಸಿದ ಬಸ್ ಬೇ ನಲ್ಲಿ ಲೂಪ್ರ‍್ಯಾಂಪ್ ಗಿಂತ ಮುಂಚೆ ಹತ್ತಿಸಿಕೊಳ್ಳಬೇಕು.
3) ಏರ್‌ಪೋರ್ಟ್ ಎಕ್ಸ್ಪ್ರೆಸ್ ಹೆದ್ದಾರಿಯಿಂದ ನಗರಕ್ಕೆ ಬರೋ ವಾಹನಗಳು ಮೊದಲಿನಂತೆ ಹೆಬ್ಬಾಳ ಪ್ಲೈ ಓವರ್ ಮೂಲಕ ನಗರ ಪ್ರವೇಶಿಸಲು ಅವಕಾಶ.
4) ಏರ್‌ಪೋರ್ಟ್ ಎಕ್ಸ್ಪ್ರೆಸ್ ಹೆದ್ದಾರಿಯಿಂದ ಕೆ. ಆರ್ ಪುರಂ, ತುಮಕೂರು ಕಡೆಗೆ ಚಲಿಸುವವರಿಗೆ ಮೊದಲಿನಂತೆ ಸರ್ವಿಸ್ ರಸ್ತೆ ಮೂಲಕ ಹೋಗಲು ಅವಕಾಶ.
5) ಏರ್‌ಪೋರ್ಟ್ ಎಕ್ಸ್ಪ್ರೆಸ್ ಹೆದ್ದಾರಿ ಮೂಲಕ ಕೆಂಪಾಪುರಂ ಕಡೆ ಹೋಗುವವರು ವಿದ್ಯಾಶಿಲ್ಪ/ಯಲಹಂಕ ಬೈಪಾಸ್ ಬಳಿ ಸರ್ವಿಸ್ ರಸ್ತೆ ಯನ್ನು ಬಳಸಬಹುದು.
6) ವಾಹನ ಸವಾರರಿಗೆ ಡೈವರ್ಷನ್ ಹೇಳೋಕೆ ಸಿಬ್ಬಂದಿಯನ್ನ ನಿಯೋಜನೆ ಮಾಡಲಿರೋ ಹಿರಿಯ ಅಧಿಕಾರಿಗಳು.
ಅಲ್ಲದೇ ಎಲ್ಲೆಲ್ಲಿ ಯಾವ ಮಾರ್ಗದ ಮೂಲಕ ಹೋಗಬೇಕು ಅನ್ನುವುದರ ಬಗ್ಗೆ ಸೂಚನಾ ಫಲಕವನ್ನು ಸಿಬ್ಬಂದಿಗಳು ಅಳವಡಿಸಲಿದ್ದಾರೆ
ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹೊಸ ಮಾರ್ಗಸೂಚಿ ಹೊರಡಿಸಿದ್ದೇವೆ. ಈ ಎಲ್ಲ ಮಾರ್ಗ ಸೂಚಿಗಳು ಜುಲೈ 08 ರ ಶುಕ್ರವಾರ ಬೆಳಗ್ಗೆ 6-00 ಗಂಟೆಯಿಂದ ಜಾರಿಗೆ ಬರಲಿವೆ ಎಂದು ಅವರು ತಿಳಿಸಿದ್ದಾರೆ.
– ರವಿಕಾಂತ ಗೌಡ, ಸಂಚಾರಿ ಜಂಟಿ ಪೊಲೀಸ್ ಆಯುಕ್ತರು.