ಶೀಘ್ರದಲ್ಲಿಯೇ ವೈಫೈ ರೈಲ್ವೆ ನಿಲ್ದಾಣಗಳ ಸಂಖ್ಯೆ ಹೆಚ್ಚಳ: ಪಿಯೂಷ್ ಗೋಯಲ್

ಸ್ಟಾಕ್ಹೋಮ್:

     ಮುಂಬರುವ ದಿನಗಳಲ್ಲಿ ರೈಲುಗಳಲ್ಲಿ ವೈಫೈ ಸೇವೆ ಒದಗಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್  ತಿಳಿಸಿದ್ದಾರೆ.

     ಪ್ರಸ್ತುತ ವೈಫೈ ಸೇವೆ 5150 ರೈಲ್ವೆ ನಿಲ್ದಾಣಗಳಲ್ಲಿ ಸಿಗುತ್ತಿದ್ದು ಇದನ್ನು ಎಲ್ಲಾ 6500 ನಿಲ್ದಾಣಗಳಲ್ಲಿಯೂ ಮುಂದಿನ ವರ್ಷದ ವೇಳೆಗೆ ಒದಗಿಸಲು ನಾವು ಪ್ರಯತ್ನ ಮುಂದುವರೆಸಿದ್ದೇವೆ ಎಂದು ಹೇಳಿದರು.ರೈಲುಗಳಲ್ಲಿ ವೈಫೈ ಸೇವೆ ಲಭ್ಯವಾಗುವ ಬಗ್ಗೆ ಮಾತನಾಡಿದ ಅವರು, ಇದು ಹೆಚ್ಚು ಕ್ಷಿಷ್ಟಕರ ತಂತ್ರಜ್ಞಾನ ವಿಷಯ. ಚಲಿಸುತ್ತಿರುವ ರೈಲಿನಲ್ಲಿ ವೈಫೈ ಸೇವೆ ನೀಡುವುದಕ್ಕೆ ಸಾಕಷ್ಟು ಹೂಡಿಕೆ ಬೇಕಾಗುತ್ತದೆ. ಟವರ್ ಹಾಕಬೇಕು, ರೈಲುಗಳ ಒಳಗೆ ಉಪಕರಣಗಳ ಅವಶ್ಯಕತೆ ಇರುತ್ತದೆ . ಇದಕ್ಕಾಗಿ ವಿದೇಶಗಳಿಂದ ಹೂಡಿಕೆ ಮತ್ತು ತಂತ್ರಜ್ಞಾನ ತರಿಸಬೇಕಾಗಬಹುದು ಎಂದರು

   ಇನ್ನೂ ಕೆಲವೆ ವರ್ಷಗಳಲ್ಲಿ ರೈಲ್ವೆಗಳು ಸಂಪೂರ್ಣವಾಗಿ ವಿದ್ಯುದ್ದೀಕರಣವಾಗಲಿದೆ. ರೈಲ್ವೆ ಭೂಮಿಗಳಲ್ಲಿ ಇಂಡಸ್ಟ್ರಿಯಲ್ ಪಾರ್ಕ್ ಗಳನ್ನು ತರಲು ಯೋಜಿಸುತ್ತಿದ್ದೇವೆ. ರೈಲ್ವೆ ಭೂಮಿಗಳನ್ನು ಸೋಲಾರ್ ಸ್ಥಾಪನೆಗೆ ಬಳಸಿಕೊಳ್ಳಲು ಚಿಂತನೆ ನಡೆಯುತ್ತಿದೆ. ಭಾರತೀಯ ರೈಲ್ವೆಯನ್ನು ವಿಶ್ವದಲ್ಲಿಯೇ ಶೂನ್ಯ ವಾಯುಮಾಲಿನ್ಯ ರೈಲ್ವೆಯಾಗಿ ಪರಿವರ್ತಿಸಲು ಪ್ರಯತ್ನ ನಡೆಯುತ್ತಿವೆ ಎಂದಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap