ಬೆಂಗಳೂರು : ದರ್ಶನ್‌ ಬಂಧನದ ನಂತರ ಊರು ಬಿಡ್ತಾ ಇದ್ದಾರೆ ರೌಡಿಗಳು…!

ಬೆಂಗಳೂರು :  

   ದರ್ಶನ್ ವಿರುದ್ಧ ಕೇಳಿಬಂದ ಕೊಲೆ ಆರೋಪದ ಕೇಸ್ ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲೇ ಸೌಂಡ್ ಮಾಡಿದೆ. ಅದ್ರಲ್ಲೂ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ‘ಡಿ-ಗ್ಯಾಂಗ್’ ಭಯಾನಕ ರೂಪದಲ್ಲಿ ಕೊಲೆ ಮಾಡಿದೆ ಎಂಬ ಆರೋಪ ಸಂಚಲನ ಸೃಷ್ಟಿಸಿದೆ. ಕಿವಿ ಕತ್ತರಿಸಿ, ತಲೆಗೆ ತೂತು ಮಾಡಿ, ಮೈಗೆ ಬರೆ ಹಾಕಿ, ಮರ್ಮಾಂಗದ ಚರ್ಮ ಸುಲಿದು, ಕೈಗೆ ಸಿಗರೇಟ್ ಮೂಲಕ ಸುಟ್ಟು ಹೀಗೆ ವಿಕೃತವಾಗಿ ದರ್ಶನ್ & ಗ್ಯಾಂಗ್ ಕೊಲೆಯನ್ನ ಮಾಡಿದೆ ಎಂಬ ಸುದ್ದಿ ಸಂಚಲನವನ್ನೇ ಸೃಷ್ಟಿ ಮಾಡಿದೆ.

   ಹೀಗಾಗಿ ದರ್ಶನ್ & ಗ್ಯಾಂಗ್‌ಗೆ ಸರಿಯಾಗಿ ರುಬ್ಬಿದ್ದ ಕರ್ನಾಟಕ ಪೊಲೀಸರು ಇದೀಗ ಇಡೀ ಗ್ಯಾಂಗ್‌ನ ಪರಪ್ಪನ ಅಗ್ರಹಾರ ಜೈಲಿಗೆ ಬಿಟ್ಟು ಬಂದಿದೆ. ಹೀಗಿದ್ದಾಗಲೇ ಬೆಂಗಳೂರಿನಲ್ಲಿ ರೌಡಿಗಳಿಗೆ ಭಯ ಶುರುವಾಗಿದೆ. ದರ್ಶನ್ & ಗ್ಯಾಂಗ್ ಜೈಲಿಗೆ ಹೋಗಿದ್ದಕ್ಕೂ, ರೌಡಿಗಳಿಗೆ ಈಗ ಭಯ ಶುರುವಾಗಿದ್ದಕ್ಕೂ ಕಾರಣ ಏನಿರಬಹುದು?  .

   ಬೆಂಗಳೂರಲ್ಲಿ ರೌಡಿಸಮ್ ಜೋರಾಗಿದೆ. ಕರ್ನಾಟಕದ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ರೌಡಿಗಳ ಹಾವಳಿ ಜಾಸ್ತಿ. ಹೀಗಿದ್ದಾಗ ದರ್ಶನ್ & ಗ್ಯಾಂಗ್ ವಿರುದ್ಧ ಕೇಳಿಬಂದ ಕೊಲೆ ಆರೋಪದ ವೇಳೆ, ದರ್ಶನ್ ಮೊಬೈಲ್ ಫೋನ್‌ನಲ್ಲಿ ಭಾರಿ ಆಘಾತಕಾರಿ ಮಾಹಿತಿ ಸಿಕ್ಕಿತ್ತು.

   ದರ್ಶನ್ ರೌಡಿಗಳ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಆರೋಪ ಕೇಳಿಬಂದಿತ್ತು ಹೀಗಾಗಿ ಅಲರ್ಟ್ ಆಗಿರುವ ಕರ್ನಾಟಕ ಪೊಲೀಸರು ರೌಡಿಗಳ ಹೆಡೆಮುರಿ ಕಟ್ಟಲು ಸಜ್ಜಾಗಿದ್ದಾರೆ. ಮತ್ತೊಂದು ಕಡೆ ರಣಹೇಡಿ ರೌಡಿಪಡೆ ಪೊಲೀಸರ ಗುಂಡಿನಿಂದ ಜೀವ ಉಳಿಸಿಕೊಳ್ಳಲು ಊರು ಬಿಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಸುದ್ದಿ ಈಗ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಓಡಾಡುತ್ತಿದೆ. ಕರ್ನಾಟಕ ಪೊಲೀಸರ ಖದರ್ ಮತ್ತೊಮ್ಮೆ ಸದ್ದು ಮಾಡ್ತಿದೆ. 

   2011ರಲ್ಲಿ ಹೆಂಡತಿ ಮೇಲೆಯೇ ದರ್ಶನ್ ರಾಕ್ಷಸನ ರೀತಿ ಹಲ್ಲೆ ಮಾಡಿರುವುದು ಸೇರಿದಂತೆ, ಪದೇ ಪದೇ ದರ್ಶನ್ & ಗ್ಯಾಂಗ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಹೀಗೆ ಕನ್ನಡ ನಾಡಲ್ಲಿ ಪಟಾಲಂ ಕಟ್ಟಿಕೊಂಡು ದರ್ಶನ್ & ಗ್ಯಾಂಗ್ ಜನರಿಗೆ ಮತ್ತು ಹಲವು ನಿರ್ಮಾಪಕ ನಿರ್ದೇಶಕರಿಗೆ ಟಾರ್ಚರ್ ಮಾಡಿದೆ ಎಂಬ ಆರೋಪ ಇದೆ. ಹೀಗಾಗಿಯೇ ಇದೀಗ ದರ್ಶನ್ ಮತ್ತು ಆತನ ಸಹಚರರ ವಿರುದ್ಧ ರೌಡಿಶೀಟ್ ತೆರೆಯಲು ಪೊಲೀಸರು ಅಂತಿಮ ಸಿದ್ಧತೆಗಳ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ದರ್ಶನ್‌ಗೆ ಮತ್ತೊಂದು ಕಂಟಕ ಎದುರಾಗುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link