ಬೆಳಗ್ಗೆ 10 ಗಂಟೆಯೊಳಗೆ ಕೊಟ್ಟೂರು ಪ.ಪಂ. ಚುನಾವಣಾ ಫಲಿತಾಂಶ

 ಕೊಟ್ಟೂರು :

      ಪಟ್ಟಣ ಪಂಚಾಯ್ತಿ ಚುನಾವಣೆಯ ಮತ ಏಣಿಕೆ ಸೋಮವಾರ ಬೆಳಗ್ಗೆ ತಾಲೂಕು ಕಚೇರಿಯಲ್ಲಿ ಎಂಟು ಗಂಟೆಗೆ ಆರಂಭವಾಗಿ, ಹತ್ತು ಗಂಟೆಯೊಳಗೆ 20 ವಾರ್ಡಗಳ ಫಲಿತಾಂಶ ಹೊರಬೀಳಲಿದೆ ಎಂದು ತಹಶೀಲ್ದಾರ ಕೆ. ಮಂಜುನಾಥ ಹೇಳಿದರು.

      ತಹಶೀಲ್ದಾರ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದು ಮತಯಂತ್ರದ ಏಣಿಕೆ ಕೇವಲ ಐದು ನಿಮಿಷದೊಳಗೆ ಮುಗಿಯಲಿದ್ದು, 20 ವಾರ್ಡಗಳ ಫಲಿತಾಂಶ ಬೆಳಗ್ಗೆ 10 ಗಂಟೆಯೊಳಗೆ ಮುಗಿಯಲಿದೆ ಎಂದರು.

      ಮತ ಏಣಿಕೆ ಕೇಂದ್ರದಲ್ಲಿ ಅಭ್ಯರ್ಥಿಯೊಂದಿಗೆ ಒಬ್ಬ ಸಹಾಯಕ ಮಾತ್ರ ಒಳಗೆ ಬರಬಲು ಅವಕಾಶವಿದೆ. ಮೊಬೈಲ್, ಕ್ಯಾಮಾರ, ಎಲೆಕ್ಟ್ರಾನಿಕ್ ಉಪಕರಣಗಳನ್ನು ಒಳ ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದರು.

      ಮತ ಏಣಿಕೆ ಕೇಂದ್ರದ ಒಳಗೆ ತಹಶೀಲ್ದಾರರಿಂದ ಪಾಸ್ ಪಡೆದವರು ಎಂಟು ಗಂಟೆಯೊಳಗೆ ಹಾಜರಿರಬೇಕು. ಎಂಟು ಗಂಟೆಯ ನಂತರ ಬಂದವರನ್ನು ಒಳಗೆ ಬಿಡುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದರು. ಚುನಾವಣೆಯಲ್ಲಿ ಗೆದ್ದವರು ಪಟಾಕಿ ಸಿಡಿಸುವಂತ್ತಿಲ್ಲ. ವಾದ್ಯದೊಂದಿಗೆ ಮೆರವಣಿಗೆ ಮಾಡುವಂತ್ತಿಲ್ಲ ಎಂದರು.

      ಸೋತ ಅಭ್ಯರ್ಥಿಯ ಮುಂದೆ ಗೆದ್ದವರು ಪಟಾಕಿ ಸಿಡಿಸುವುದು. ಕೇಕೆ ಹಾಕುವುದು. ಜಯಘೋಷ ಮಾಡುವುದು ಮುಂತಾದ ಅನುಚಿತವಾಗಿ ವರ್ತಿಸಿದವರ ವಿರುದ್ದ ದೂರು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link