ಶಿಗ್ಗಾವಿ
ಪಟ್ಟಣದ ಚೆನ್ನಿಗೇರಿ ಕೆರೆಯ ಪಕ್ಕದ ಜಮೀನುಗಳಲ್ಲಿ ಕುದುರೆಗಳು ಬೆಳೆಗಳನ್ನು ತಿಂದು ಹೊಲದಲ್ಲಿ ಅಡ್ಡಾದಿಡ್ಡಿ ಓಡಾಡಿ ಬೆಳೆ ನಾಶಪಡಿಸಿವೆ ಎಂದು ಜಮೀನುಗಳ ಮಾಲೀಕರು ಕುದುರೆಗಳನ್ನು ತಮ್ಮ ವಶಕ್ಕೆ ಪಡೆದು ಕುಡುಹಾಕಿದ್ದಾರೆ.
ಕುದುರೆಗಳು ತಮ್ಮ ಹೊಲಗಳಲ್ಲಿ ಬೆಳೆದ ಶೆಂಗಾ, ಸೊಯಾಬಿನ, ಅಲಸಂದಿ ಮತ್ತು ಹತ್ತಿ ಬೆಳೆಯನ್ನು ನಾಶಪಡಿಸಿವೆ ಆದರಿಂದ ಕುದುರೆಗಳನ್ನು ನಮ್ಮ ತಾಬಾ ಬಂದಿಸಲಾಗಿದೆ ಸಂಬಂಧ ಪಟ್ಟವರು ಸಂಪರ್ಕಿಸಿ ನಮಗಾದ ಹಾನಿಯನ್ನು ಭರಿಸಬೇಕು ಇಲ್ಲವಾದಲ್ಲಿ ಇನ್ನೆರೆಡು ದಿನಗಳಲ್ಲಿ ಎಲ್ಲ ಕುದುರೆಗಳನ್ನು ಹರಾಜು ಮಾಡಲಾಗುವದು ಎಂದು ತಿಳಿಸಿದ್ದಾರೆ.
ಕುದುರೆಗಳನ್ನು ವಶ ಪಡೆದ ರೈತರಾದ ಬಸವರಾಜ ಕಾರಡಗಿ, ಶಂಕ್ರಪ್ಪ ಯಲವಗಿ, ನಿಂಗಪ್ಪ ಯಲವಗಿ, ಬಸಣ್ಣ ಹಿತ್ತಲಮನಿ, ಶಂಬಣ್ಣ ಹಾವೇರಿ ಮಾಹಿತಿ ತಿಳಿಸಿ 9739016112 – 9739016077 ಸಂಖ್ಯೆಗೆ ಸಂಪರ್ಕಿಸಲು ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ