ಬೈಕ್‍ಗೆ ಲಾರಿ ಡಿಕ್ಕಿ; ದಂಪತಿ ದುರ್ಮರಣ

ತುಮಕೂರು:

      ಬೈಕಿಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತುಮಕೂರಿನ ಬೆಳ್ಳಾವಿ ಕ್ರಾಸ್ ನ ವಿ.ಆರ್.ಎಲ್ ಹೋಟೆಲ್ ಬಳಿ ನಡೆದಿದೆ.

      ಜಗದೀಶ್(32) ಮತ್ತು ಪತ್ನಿ ಗಂಗಾದೇವಿ(28)  ದಂಪತಿಗಳು ಮೂಲತಃ ಹಿರಿಯೂರಿನವರು ಆದರೆ ವೃತಿ ದೃಷ್ಠಿಯಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ತಮ್ಮ ಮಗಳು ಚಿನ್ಮಯಿ(6) ಅವರೊಂದಿಗೆ ಬೈಕ್‍ನಲ್ಲಿ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಚಿನ್ಮಯಿ ಅವರು ಅಪಘಾತದಿಂದ ಬಚಾವಾಗಿದ್ದಾಳೆ. ಪ್ರಕರಣವು ಕೋರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. 

      ಅವರು ಬೆಂಗಳೂರಿನಿಂದ ಹಿರಿಯೂರಿಗೆ ಬೈಕಿನಲ್ಲಿ ಕುಟುಂಬ ಸಮೇತರಾಗಿ ಹೋಗುವಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬೈಕ್ ಬೆಳ್ಳಾವಿ ಕ್ರಾಸ್ ಬಳಿಯ ವಿ.ಆರ್.ಎಲ್ ಹೋಟೆಲ್ ಬಳಿ ಹೋಗುತ್ತಿದ್ದಂತೆ ಅತಿವೇಗದಿಂದ ಬಂದ ಲಾರಿ ಹಿಂದಿಬಯಿಂದ ಬೈಕಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಜಗದೀಶ್ ಮತ್ತು ಗಂಗಾದೇವಿ ಇಬ್ಬರೂ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಈ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link