6 ರಾಷ್ಟ್ರಗಳಿಗೆ ಬ್ರಿಕ್ಸ್ ಖಾಯಂ ಸದಸ್ಯತ್ವ…!

ಜೋಹಾನ್ಸ್‌ಬರ್ಗ್:

   ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಅರ್ಜೆಂಟೀನಾ, ಈಜಿಪ್ಟ್, ಇರಾನ್, ಸೌದಿ ಅರೇಬಿಯಾ, ಇಥಿಯೋಪಿಯಾ ಮತ್ತು ಯುಎಇ ಬ್ರಿಕ್ಸ್ ಖಾಯಂ ಸದಸ್ಯರನ್ನಾಗಿ ಮಾಡಲು ಒಪ್ಪಿಕೊಂಡಿವೆ. ಇದನ್ನು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಘೋಷಿಸಿದರು.

    2001ರಲ್ಲಿ ಬ್ರಿಕ್ಸ್ ಕೂಟ ಅಸ್ತಿತ್ವಕ್ಕೆ ಬಂದಿತ್ತು. ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ಒಟ್ಟಾಗಿ ‘BRIC’ ಅನ್ನು ಸ್ಥಾಪಿಸಿಕೊಂಡಿದ್ದವು. ಭವಿಷ್ಯದ ಆರ್ಥಿಕ ಸಾಮರ್ಥ್ಯದೊಂದಿಗೆ ಉದಯೋನ್ಮುಖ ಮಾರುಕಟ್ಟೆಗಳ ಸಾಮೂಹಿಕ ಪ್ರಾತಿನಿಧ್ಯವಾಗಿ ಇದನ್ನು ಪ್ರಸ್ತುತಪಡಿಸಲಾಗಿದೆ. 2010ರಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ದಕ್ಷಿಣ ಆಫ್ರಿಕಾ ಕೂಟವನ್ನು ಸೇರಿಕೊಂಡಿತು. ಅಂದಿನಿಂದ ‘BRIC’ ಹೆಸರನ್ನು ‘BRICS’ ಆಗಿ ಬದಲಾಯಿತು.

     ಬ್ರಿಕ್ಸ್‌ನ ಮೊದಲ ಹಂತದ ವಿಸ್ತರಣೆಯಲ್ಲಿ ಅರ್ಜೆಂಟೀನಾ, ಈಜಿಪ್ಟ್, ಇರಾನ್, ಸೌದಿ ಅರೇಬಿಯಾ, ಇಥಿಯೋಪಿಯಾ ಮತ್ತು ಯುಎಇಗೆ ಸಂಸ್ಥೆಯ ಶಾಶ್ವತ ಸದಸ್ಯತ್ವ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link