ನವದೆಹಲಿ: 

2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಬಿಜಿಪಿ 200 ಸೀಟುಗಳನ್ನು ಗೆಲ್ಲಲು ಆಗುವುದಿಲ್ಲ ಎಂದು ಆರ್ ಜೆಡಿ ಮುಖಂಡ ಮತ್ತು ಲಾಲು ಪ್ರಸಾದ್ ಅವರ ಪುತ್ರ ತೇಜಸ್ವಿ ಯಾದವ್ ಹೇಳಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರುವುದಿಲ್ಲ ಆದ್ದರಿಂದ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರು ಪತ್ರಿಕೆಗಳಿಗೆ ಹೇಳಿದ್ದಾರೆ.2019ರ ಚುನಾವಣೆಯಲ್ಲಿ ಒಟ್ಟು134 ಕ್ಷೇತ್ರಗಳ ಪೈಕಿ 100 ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ, ಬಿಹಾರ, ಜಾರ್ಖಂಡ್, ಮತ್ತು ಉತ್ತರ ಪ್ರದೇಶಗಳಲ್ಲಿ ಒಟ್ಟು ಬಿಜೆಪಿ 115 ಕ್ಷೇತ್ರಗಳನ್ನು ಗೆದ್ದಿದೆ, ಮುಂದಿನ ಚುನಾವಣೆಯಲ್ಲಿ 100 ಸೀಟುಗಳನ್ನು ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ .








