ತುರುವೇಕೆರೆ:
ರಾಜ್ಯದ ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ನಿರಾಶ್ರಿತ ಜನರಿಗೆ ಆಹಾರ ಮತ್ತು ಇನ್ನಿತರ ಮೂಲಭೂತ ವಸ್ತುಗಳನ್ನು ಕಳುಹಿಸಿಕೊಡಲು ತುರುವೇಕೆರೆ ಘಟಕದ ಭಾರತೀಯ ಕಿಸಾನ್ ಸಂಘ ಹಾಗು ಆರ್‍ಎಸ್‍ಎಸ್ ನ ಸಹಕಾರದೊಂದಿಗೆ ವಿವಿದೆಡೆ ಪಾದಯಾತ್ರೆ ನಡೆಸಿ ಪರಿಹಾರ ನಿಧಿ ಹಣ ಸಂಗ್ರಹಿಸಿದರು.
ತಾಲ್ಲೂಕಿನ ಸಂಪಿಗೆ, ಕಲ್ಲೂರು ಕ್ರಾಸ್, ಮಾಯಸಂದ್ರ ಹಾಗು ತುರುವೇಕೆರೆ ಪಟ್ಟಣ ಸೇರಿದಂತೆ ವಿವಿದೆಡೆಯಿಂದ ಒಟ್ಟು 78,623 ರೂ. ಹಾಗು ಸುಮಾರು 30,000 ಕ್ಕು ಹೆಚ್ಚು ಬೆಲೆ ಬಾಳುವ ಬಟ್ಟೆಗಳನ್ನು ಸಂಗ್ರಹಿಸುವ ಮೂಲಕ ಸಂತ್ರಸ್ತರ ನೆರವಿಗೆ ಕೈಜೋಡಿಸಿದರು.
ದೇಣಿಗೆಯಿಂದ ಬಂದಂತ ನಿಧಿಯನ್ನು ಜಿಲ್ಲಾ ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಮುಖಾಂತರ ರಾಜ್ಯಪ್ರಧಾನ ಕಾರ್ಯದರ್ಶಿಗಳಾದ ಗಂಗಾದರ ಕಾಸರಘಟ ಅವರಿಗೆ ತಲುಪಿಸಿ ಅವರ ಮುಖಾಂತರ ಕೊಡಗು ಜಿಲ್ಲೆಯ ನಿರಾಶ್ರಿತ ಜನರಿಗೆ ತಲುಪಿಸಲಾಗುವುದು ಎಂದು ತಾಲ್ಲೋಕ್ ಅಧ್ಯಕ್ಷ ಗಂಗಾಧರಯ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ದಿವಿತ್, ತಾ|| ಉಪಾಧ್ಯಕ್ಷ ಮಹದೇವಯ್ಯ, ಕಾರ್ಯದರ್ಶಿ ಜಗದೀಶ್, ಪದಾಧಿಕಾರಿಗಳಾದ ಗಂಗಣ್ಣ, ಗಂಗಾದರಸ್ವಾಮಿ, ಬಸವಲಿಂಗಯ್ಯ, ತೊಂಟರಾಜ್, ರಾಮಚಂದ್ರೇಗೌಡ, ಸತೀಶ್, ಆರ್‍ಎಸ್‍ಎಸ್ ನ ರವಿಕುಮಾರ್, ಸುರೇಶ್, ಶ್ರೀನಿವಾಸ್, ಸಿದ್ದಲಿಂಗಪ್ಪ ಸೇರಿದಂತೆ ಭಾರತೀಯ ಕಿಸಾನ್ ಸಂಘದ ಅನೇಕ ಸದಸ್ಯರುಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








