ತಿಪಟೂರು:
ತೈಲಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಸೆಪ್ಟಂಬರ್ 10ರಂದು ಕರೆನೀಡಿರುವ ಭಾರತ್ ಬಂದ್ಗೆ ತಿಪಟೂರು ಜೆ.ಡಿ.ಎಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿದೆ ಎಂದು ತಾಲ್ಲೂಕು ಜೆ.ಡಿ.ಎಸ್ ಮುಖಂಡ ಲೋಕೇಶ್ವರ ಹಾಗೂ ತಾಲ್ಲೂಕು ಅಧ್ಯಕ್ಷ ಸೊಪ್ಪು ಗಣೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೆಟ್ರೋಲ್, ಡಿಸೇಲ್, ಅಡುಗೆ ಅನಿಗ ದರಗಳ ಏರಿಕೆಯಿಂದ ಜನ ಸಾಮಾನ್ಯರು ಜೀವನ ನಡೆಸಲು ದುಸ್ತರವಾಗಿರುವ ಕಾರಣ ತೈಲ ಬೆಳೆಗಳ ದರ ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಬಂದ್ಗೆ ಕರೆನೀಡಲಾಗಿದೆ. ಆದ್ದರಿಂದ ನಗರದ ಎಲ್ಲಾ ಅಂಗಡಿಗಳು, ಹೋಟೆಲ್, ಚಿತ್ರಮಂದಿರ, ಎ.ಪಿ.ಎಂ.ಸಿ ಮಾರುಕಟ್ಟೆ ಸೇರಿದಂತೆ ಎಲ್ಲಾ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಭಾರತ್ ಬಂದ್ ಯಶಸ್ಸಿಗೆ ಕೈಜೋಡಿಸಬೇಕೆಂದು ಲೋಕೇಶ್ವರ ಮನವಿ ಮಾಡಿದ್ದಾರೆ.