ಚಳ್ಳಕೆರೆ
ನಗರದ ನಗರಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷ ಅತ್ಯಂತ ಸರಳ ಬಹುಮತದೊಂದಿಗೆ ನಗರಸಭೆ ಆಡಳಿತ ಚುಕ್ಕಾಣಿಯನ್ನು ಹಿಡಿಯಲಿದೆ. ನಗರದ ಮತದಾರ ಬಾಂಧವರು, ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರ ಅಭಿವೃದ್ಧಿ ಪರ ಯೋಜನೆಗಳಿಗೆ ಮತಗಳನ್ನು ನೀಡುವ ಮೂಲಕ ಶಹಬಾಶ್ಗಿರಿ ನೀಡಿದ್ದಾರೆ. ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ 16, ಜೆಡಿಎಸ್ 10, ಬಿಜೆಪಿ 4 ಹಾಗೂ ಪಕ್ಷೇತರ 1 ಒಟ್ಟು 31 ಜನರು ಜಯಗಳಿಸಿರುತ್ತಾರೆ.
ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 8 ಕ್ಕೆ ಅಭ್ಯರ್ಥಿಗಳು, ಅಭ್ಯರ್ಥಿಗಳ ಏಜೆಂಟರ, ಅಧಿಕಾರಿಗಳ ಸಮಕ್ಷಮದಲ್ಲಿ ಮತಗಳ ಏಣಿಕೆ ಕಾರ್ಯ ಪ್ರಾರಂಭವಾಯಿತು. ಇಂದು ನಡೆದ ಮತಗಳ ಏಣಿಕೆಯಲ್ಲಿ ಭಾರಿ ಅಚ್ಚರಿ ಫಲಿತಾಂಶವನ್ನು ಕಾಣುವಂತಾಯಿತು. ಕಾರಣ ವಾರ್ಡ್ 26ರ ಜೆಡಿಎಸ್ ಅಭ್ಯರ್ಥಿ ಸಿ.ಶ್ರೀನಿವಾಸ್ ಕೇವಲ ಎರಡು ಮತಗಳ ಅಂತದಿಂದ ಗೆಲುವು ಸಾಧಿಸಿದ್ದರು, ವಾರ್ಡ್ 30ರ ಬಿಜೆಪಿ ಅಭ್ಯರ್ಥಿ ಪಾಲಮ್ಮ ಕೇವಲ 8 ಮತಗಳಿಂದ ಗೆಲುವು ಸಾಧಿಸಿದ್ದು, ವಾರ್ಡ್ 12ರ ಜೆಡಿಎಸ್ ಅಭ್ಯರ್ಥಿ ವಿಶುಕುಮಾರ್ 30 ಮತಗಳ ಅಂತರಿಂದ ಗೆಲುವು ಸಾಧಿಸಿದ್ಧಾರೆ. 5ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ್ 1172 ಮತಗಳ ಅಂತರಿಂದ ಗೆಲುವು ಸಾಧಿಸಿದ್ದು ಇದು ನಗರಸಭೆ ಇತಿಹಾಸದಲ್ಲಿ ಅತಿ ಹೆಚ್ಚು ಗೆಲುವಿನ ಅಂತರದ ವಿಜಯವಾಗಿದೆ.
ನಗರಸಭೆಯ 30 ವಾರ್ಡ್ಗಳಿಗೆ ಮತದಾನ ನಡೆದಿದ್ದು, ಮತಗಳ ಏಣಿಕೆ ಪ್ರಾರಂಭವಾದ ಸಂದರ್ಭದಲ್ಲಿ ಎಲ್ಲರಲ್ಲೂ ಕುತೂಹಲ ಹೆಚ್ಚಾಗಿದ್ದು, ತಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿ ಎಂಬ ಭರವಸೆಯಿಂದಲೇ ಮತ ಏಣಿಕೆ ಕೇಂದ್ರಕ್ಕೆ ಆಗಮಿಸಿದ್ದರು. ಮತಗಳ ಏಣಿಕೆ ಪ್ರಾರಂಭವಾಗುತ್ತಿದ್ದಂತೆ ಫಲಿತಾಂಶಗಳು ಬೇಗ ಬೇಗನೆ ಬರಲು ಆರಂಭಿಸಿದವು. ಬೆಳಗ್ಗೆ 8 ಕ್ಕೆ ಆರಂಭವಾದ ಮತಗಳ ಏಣಿಕೆ ಕಾರ್ಯ 9.45ಕ್ಕೆ ಮುಕ್ತಾಯಗೊಂಡಿತ್ತು.
ನಗರಸಭೆಯ 30 ವಾರ್ಡ್ಗಳ ಫಲಿತಾಂಶ ಪ್ರಕಟಗೊಂಡ ನಂತರ ಕಾಂಗ್ರೆಸ್ ಪಕ್ಷವೇ ನಿರೀಕ್ಷೆಗೂ ಮೀರಿ ಹೆಚ್ಚಿನ ಸ್ಥಾನಗಳನ್ನು ಗಳಿಸಿತ್ತು. ಈ ಬಾರಿಯ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 16 ಸ್ಥಾನಗಳಲ್ಲಿ ಜಯಗಳಿಸಿ ನಗರಸಭೆ ಆಡಳಿತ ಚುಕ್ಕಾಣಿಯನ್ನು ಹಿಡಿಯುವ ನಿಟ್ಟಿನಲ್ಲಿ ಯಶಸ್ಸಿಯಾಗಿದೆ. ಜಾತ್ಯಾತೀತ ಜನತಾ ದಳ ಪ್ರಾರಂಭದ ಹಂತದಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸದೇ ಇದ್ದರೂ ಸಹ 9 ಗಂಟೆ ನಂತರ ನಡೆದ ಮತ ಏಣಿಕೆ ಕಾರ್ಯದಲ್ಲಿ ಜೆಡಿಎಸ್ನ ಗೆಲುವಿನ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಪ್ರಾರಂಭದಲ್ಲೇ 9ನೇ ವಾರ್ಡ್ನ ಮತಗಳ ಏಣಿಕೆ ನಡೆದಾಗ ಜೆಡಿಎಸ್ನ ಅಭ್ಯರ್ಥಿ ವಿ.ವೈ.ಪ್ರಮೋದ್ ಆಯ್ಕೆಯಾಗುವ ಮೂಲಕ ಮೊದಲ ಫಲಿತಾಂಶವನ್ನು ಪಕ್ಷಕ್ಕೆ ತಂದುಕೊಟ್ಟರು.
ಮೊದಲನೆ ವಾರ್ಡ್ನಲ್ಲಿ ಬಿಜೆಪಿಯ ಸಾಕಮ್ಮ 867 ಮತ, ಕಾಂಗ್ರೆಸ್ ನಾಗವೇಣಮ್ಮ 644 ಪಡೆದಿದ್ದು, ಸಾಕಮ್ಮ 223 ಮತಗಳಿಂದ ಗೆಲುವು ಸಾಧಿಸಿದ್ದಾರೆ.
2ನೇ ವಾರ್ಡ್ ಕಾಂಗ್ರೆಸ್ನ ವೈ.ಪ್ರಕಾಶ್ 1022, ಬಿಜೆಪಿಯ ಜೆ.ಕೆ.ರವಿ 516 ಮತ ಪಡೆದಿದ್ದು, 506 ಮತಗಳ ಅಂತರಿಂದ ಕಾಂಗ್ರೆಸ್ ಜಯಗಳಿಸಿದೆ.
3ನೇ ವಾರ್ಡ್ ಪಕ್ಷೇತರ ಅಭ್ಯರ್ಥಿ ಆರ್.ರುದ್ರನಾಯಕ 449 ಮತ, ಜೆಡಿಎಸ್ನ ಟಿ.ಜೆ.ವೆಂಕಟೇಶ್ 244 ಮತ, ಪಕ್ಷೇತರ ಅಭ್ಯರ್ಥಿ ಆರ್.ರುದ್ರನಾಯಕ 205 ಮತಗಳಿಂದ ಗೆಲುವುಸಾಧಿಸಿದ್ಧಾರೆ.
4ನೇ ವಾರ್ಡ್ ಜೆಡಿಎಸ್ನ ಕೆ.ಸಿ.ನಾಗರಾಜು 860 ಮತ, ಕಾಂಗ್ರೆಸ್ನ ಜಗದೀಶ್ 431 ಮತ ಪಡೆದಿದ್ದು, 431 ಮತಗಳ ಅಂತರದಿಂದ ಕೆ.ಸಿ.ನಾಗರಾಜು ಜಯಸಾಧಿಸಿದ್ದಾರೆ.
5ನೇ ವಾರ್ಡ್ ಕಾಂಗ್ರೆಸ್ ಟಿ.ಮಲ್ಲಿಕಾರ್ಜುನ 1304 ಮತ, ಜೆಡಿಎಸ್ನ ವರಲಕ್ಷ್ಮಿ 132 ಮತ ಪಡೆದಿದ್ದು, 1172 ಮತಗಳ ಅಂತರಿಂದ ಮಲ್ಲಿಕಾರ್ಜುನ್ ಆಯ್ಕೆಯಾಗಿದ್ಧಾರೆ.
6ನೇ ವಾರ್ಡ್ ಕಾಂಗ್ರೆಸ್ನ ಸಿ.ಕವಿತಾ 453 ಮತ, ಜೆಡಿಎಸ್ನ ಟಿ.ಪವಿತ್ರ 373 ಮತ, 80 ಮತಗಳ ಅಂತರಿಂದ ಸಿ.ಕವಿತಾ ಜಯಶಾಲಿಯಾಗಿದ್ಧಾರೆ.
7ನೇ ವಾರ್ಡ್ ಬಿಜೆಪಿಯ ಜೆ.ಶಿವಕುಮಾರ್ 543 ಮತ, ಕಾಂಗ್ರೆಸ್ನ ಬಿ.ಪಾಪಣ್ಣ 413 ಮತಗಳನ್ನು ಪಡೆದಿದ್ದು, 130 ಮತಗಳ ಅಂತರದಿಂದ ಜೆ.ಶಿವಕುಮಾರ್ ಜಯಶಾಲಿಯಾಗಿದ್ದಾರೆ.
8ನೇ ವಾರ್ಡ್ ಕಾಂಗ್ರೆಸ್ ಪಕ್ಷದ ಓ.ಸುಜಾತ 1171 ಮತ, ಜೆಡಿಎಸ್ನ ಶೈಲಜಾ 752 ಮತಗಳನ್ನು ಪಡೆದಿದ್ದು 419 ಮತಗಳಿಂದ ಸಿ.ಸುಜಾತ ಜಯಶಾಲಿಯಾಗಿದ್ಧಾರೆ.
9ನೇ ವಾರ್ಡ್ ಜೆಡಿಎಸ್ನ ವಿ.ವೈ.ಪ್ರಮೋದ್ 626 ಮತ, ಕಾಂಗ್ರೆಸ್ನ ಅತಿಕ್ರು ರೆಹಮಾನ್ 381 ಪಡೆದಿದ್ದು, 245 ಮತಗಳ ಅಂತರಿಂದ ಪ್ರಮೋದ್ ಜಯಶಾಲಿಯಾಗಿದ್ಧಾರೆ.
10ನೇ ವಾರ್ಡ್ ಕಾಂಗ್ರೆಸ್ನ ಸುವi 564 ಮತ, ಬಿಜೆಪಿಯ ಲತಾ 465 ಮತಗಳನ್ನು ಪಡೆದಿದ್ದು 99 ಮತಗಳ ಅಂತರರಿಂದ ಸುಮ ಜಯಶಾಲಿಯಾಗಿದ್ದಾರೆ.
11ನೇ ವಾರ್ಡ್ ಬಿಜೆಪಿ ಎಸ್.ಜಯಣ್ಣ 612 ಮತ, ಕಾಂಗ್ರೆಸ್ ಎಂ.ರಾಮು 434 ಮತಗಳನ್ನು ಗಳಿಸಿ 178 ಮತಗಳ ಅಂತರದಿಂದ ಜಯಣ್ಣ ಜಯಗಳಿಸಿದ್ಧಾರೆ.
12ನೇ ವಾರ್ಡ್ ಜೆಡಿಎಸ್ನ ಸಿ.ಎಂ.ವಿಶುಕುಮಾರ್ 261 ಮತ, ಕಾಂಗ್ರೆಸ್ ಮಂಜುನಾಥ 231 ಮತ ಪಡೆದಿದ್ದು 30 ಮತಗಳ ಅಂತರದಿಂದ ವಿಶುಕುಮಾರ್ ಜಯಗಳಿದ್ದಾರೆ.
13ನೇ ವಾರ್ಡ್ ಜೆಡಿಎಸ್ನ ಟಿ.ಕವಿತಾನಾಯಕಿ 545 ಮತ, ಕಾಂಗ್ರೆಸ್ ಕವಿತಾ 225 ಮತಗಳನ್ನು ಪಡೆದಿದ್ದು, 325 ಮತಗಳ ಅಂತರದಿಂದ ಕವಿತನಾಯಕಿ ಜಯಸಾಧಿಸಿದ್ದಾರೆ.
14ನೇ ವಾರ್ಡ್ನಲ್ಲಿ ಜೆಡಿಎಸ್ನ ಜಿ.ಗೋವಿಂದ 438 ಮತ, ಕಾಂಗ್ರೆಸ್ನ ಗೋವಿಂದರಾಜು 300 ಪಡೆದಿದ್ದು, ಜಿ.ಗೋವಿಂದ 138 ಮತಗಳ ಅಂತರದಿಂದ ಜಯ,
15ನೇ ವಾರ್ಡ್ನ ಕಾಂಗ್ರೆಸ್ನ ಸಿ.ಬಿ.ಜಯಲಕ್ಷ್ಮಿ 344 ಮತ, ಪಕ್ಷೇತರ ಅಭ್ಯರ್ಥಿ ಕಾವ್ಯಶ್ರೀ 143 ಮತ ಪಡೆದಿದ್ದು, 201 ಮತಗಳ ಅಂತರದಿಂದ ಜಯಲಕ್ಷ್ಮಿ ಜಯಸಾಧಿಸಿದ್ಧಾರೆ.
16ನೇ ವಾರ್ಡ್ನ ಜೆಡಿಎಸ್ ಎಂ.ನಾಗಮಣಿ 948 ಮತ, ಕಾಂಗ್ರೆಸ್ನ ಸುಜಾತ 662 ಮತ ಪಡೆದಿದ್ದು 286 ಮತಗಳ ಅಂತರದಿಂದ ನಾಗಮಣಿ ಜಯಶಾಲಿಯಾಗಿದ್ಧಾರೆ.
17ನೇ ವಾರ್ಡ್ನ ಕಾಂಗ್ರೆಸ್ನ ಸುಮಕ್ಕ 597 ಮತ, ಬಿಜೆಪಿಯ ಜೆ.ಅನಿತಲಕ್ಷ್ಮಿ 275 ಮತಗಳನ್ನು ಪಡೆದಿದ್ದು 322 ಮತಗಳ ಅಂತರದಿಂದ ಸುಮ್ಮಕ್ಕ ಜಯಸಾಧಿಸಿದ್ಧಾರೆ.
18ನೇ ವಾರ್ಡ್ ಕಾಂಗ್ರೆಸ್ನ ಎಂ.ಜೆ.ರಾಘವೇಂದ್ರ 315 ಮತ, ಜೆಡಿಎಸ್ನ ಆರ್.ರವಿಕುಮಾರ್ 263 ಮತ ಪಡೆದಿದು 52 ಮತಗಳಿಂದ ಎಂ.ಜೆ.ರಾಘವೇಂದ್ರ ಜಯಶೀಲರಾಗಿದ್ದಾರೆ.
19ನೇ ವಾರ್ಡ್ ಕಾಂಗ್ರೆಸ್ನ ಕವಿತಾ ಅವಿರೋಧ ಆಯ್ಕೆಯಾಗಿದೆ.
20ನೇ ವಾರ್ಡ್ ಜೆಡಿಎಸ್ನ ಡಿ.ನಿರ್ಮಲ 359 ಮತ, ಪಕ್ಷೇತರ ಅಭ್ಯರ್ಥಿ ಎಂ.ಕಲ್ಪನಾ 257 ಮತಗಳನ್ನು ಪಡೆದಿದ್ದು 102 ಮತಗಳ ಅಂತರದಿಂದ ನಿರ್ಮಲ ಜಯಶೀಲರಾಗಿದ್ಧಾರೆ.
21ನೇ ವಾರ್ಡ್ ಕಾಂಗ್ರೆಸ್ನ ಎಂ.ಸಾವಿತ್ರಿ 618 ಮತ, ಜೆಡಿಎಸ್ನ ಕೆ.ಎನ್.ಲಲಿತಾ 417 ಮತ ಪಡೆದಿದ್ದು 201 ಮತಗಳಿಂದ ಎಂ.ಸಾವಿತ್ರಿ ಜಯಶೀಲರಾಗಿರುತ್ತಾರೆ.
22ನೇ ವಾರ್ಡ್ನಲ್ಲಿ ಜೆಡಿಎಸ್ನ ತಿಪ್ಪಮ್ಮ 700 ಮತ, ಕಾಂಗ್ರೆಸ್ನ ಪರಿಮಳ 289 ಮತಗಳನ್ನು ಪಡೆದಿದ್ದು ತಿಪ್ಪಮ್ಮ 411 ಮತಗಳ ಅಂತರಿಂದ ಜಯಸಾಧಿಸಿದ್ಧಾರೆ.
23ನೇ ವಾರ್ಡ್ ಕಾಂಗ್ರೆಸ್ನ ಎಚ್.ಪಿ.ವಿರುಪಾಕ್ಷ 490 ಮತ, ಜೆಡಿಎಸ್ನ ಬಿ.ಪಾಪಣ್ಣ 444 ಮತಗಳನ್ನು ಪಡೆದಿದ್ದು 46 ಮತಗಳ ಅಂತರದಿಂದ ವಿರುಪಾಕ್ಷ ಜಯಸಾಧಿಸಿದ್ಧಾರೆ.
24ನೇ ವಾರ್ಡ್ ಕಾಂಗ್ರೆಸ್ನ ಆರ್.ಮಂಜುಳಾ 580 ಮತ, ಪಕ್ಷೇತರ ಲಕ್ಷ್ಮಿದೇವಿ ಸ507 ಮತಗಳ ಪಡೆದಿದ್ದು, 73 ಮತಗಳ ಅಂತರದಿಂದ ಆರ್.ಮಂಜುಳಾ ಜಯಸಾಧಿಸಿದ್ಧಾರೆ.
25ನೇ ವಾರ್ಡ್ನಲ್ಲಿ ಕಾಂಗ್ರೆಸ್ ಟಿ.ಚಳ್ಳಕೇರಪ್ಪ, 636 ಮತ, ಜೆಡಿಎಸ್ನ ಎ.ಉಜ್ಜಿನಪ್ಪ 207 ಮತಗಳ ಪಡೆದಿದ್ದು 429 ಮತಗಳ ಅಂತರದಲ್ಲಿ ಚಳ್ಳಕೇರಪ್ಪ ಜಯಶೀಲರಾಗಿದ್ಧಾರೆ.
26ನೇ ವಾರ್ಡ್ನಲ್ಲಿ ಜೆಡಿಎಸ್ನ ಸಿ.ಶ್ರೀನಿವಾಸ್ 365 ಮತ, ಕಾಂಗ್ರೆಸ್ನ ಡಿ.ಕೆ.ಕಾಟಯ್ಯ 363 ಮತಗಳನ್ನು ಪಡೆದ್ದು 2 ಮತಗಳ ಅಂತರದಿಂದ ಜೆಡಿಎಸ್ನ ಶ್ರೀನಿವಾಸ್ ಜಯಶೀಲರಾಗಿದ್ಧಾರೆ.
ವಾರ್ಡ್ 27ರಲ್ಲಿ ಜೆಡಿಎಸ್ನ ಬಿ.ಟಿ.ರಮೇಶ್ಗೌಡ 524 ಮತ, ಬಿಜೆಪಿಯ ವೀರಣ್ಣ 403 ಮತಗಳನ್ನು ಪಡೆದಿದ್ದು, 121 ಮತಗಳ ಅಂತರದಿಂದ ರಮೇಶ್ಗೌಡ ಜಯಶೀಲರಾಗಿದ್ಧಾರೆ.
28ನೇ ವಾರ್ಡ್ ಕಾಂಗ್ರೆಸ್ನ ಕೆ.ವೀರಭದ್ರಯ್ಯ 348 ಮತ, ಬಿಜೆಪಿಯ ಎಂ.ಇಂದ್ರೇಶ್ 273 ಮತಗಳನ್ನು ಪಡೆದಿದ್ದು, 75 ಮತಗಳ ಅಂತರದಿಂದ ಕೆ.ವೀರಭದ್ರಯ್ಯ ಜಯಶೀಲರಾಗಿದ್ಧಾರೆ.
29ನೇ ವಾರ್ಡ್ನಲ್ಲಿ ಜೆಡಿಎಸ್ನ ಎಚ್.ಪ್ರಶಾಂತ್ಕುಮಾರ್ 373 ಮತ, ಪಕ್ಷೇತರ ಅಭ್ಯರ್ಥಿ ಸಂತೋಷ್ ಸಿ.ನಾಯ್ಕ 202 ಮತಗಳನ್ನು ಪಡೆದಿದ್ದು, 171 ಮತಗಳ ಅಂತರದಿಂದ ಪ್ರಶಾಂತ್ಕುಮಾರ್ ಜಯಶೀಲರಾಗಿದ್ಧಾರೆ.
30ನೇ ವಾರ್ಡ್ ಬಿಜೆಪಿ ಪಾಲಮ್ಮ 533 ಮತ, ಕಾಂಗ್ರೆಸ್ ಎಸ್.ಮಂಜುಳಾ 525 ಮತಗಳನ್ನು ಪಡೆದಿದ್ದು 8 ಮತಗಳ ಅಂತರದಿಂದ ಪಾಲಮ್ಮ ಜಯಶೀಲರಾಗಿದ್ಧಾರೆ.
31ನೇ ವಾರ್ಡ್ನಲ್ಲಿ ಕಾಂಗ್ರೆಸ್ ಜೈತುಂಬಿ 392 ಮತ, ಪಕ್ಷೇತ್ರರ ಅಭ್ಯರ್ಥಿ ಸಣ್ಣ ಬೋರಮ್ಮ 274 ಮತಗಳನ್ನು ಪಡೆದಿದ್ದು 118 ಮತಗಳ ಅಂತರರಿಂದ ಜೈ ತುಂಬಿ ಜಯಶೀಲರಾಗಿದ್ಧಾರೆ.
