ಭಿಕ್ಷಾಟನೆ ಹೆಚ್ಚಳ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಜನರಿಂದ ಛೀಮಾರಿ

ಕೊಟ್ಟೂರು:

ಗುರುವಾರ ಸೋಮವಾರ ಮತ್ತು ಹಬ್ಬ ಹರಿದಿನಗಳು ಬಂದರೆ ಸಾಕು ಬಸ್ ನಿಲ್ದಾಣ ಮತ್ತು ತಳ್ಳುಗಾಡಿ ಹೋಟೆಲ್‍ಗಳ ಮುಂದೆ ರಸ್ತೆ ಮಧ್ಯೆ ಹಾಗೂ ಸಂತೆಯಲ್ಲಿ ಚಿಕ್ಕ ಚಿಕ್ಕ ಹುಡುಗಿಯರು ಮತ್ತು ಎಳೆ ಕಂದಮ್ಮಗಳನ್ನು ಹೆತ್ತಿಕೊಂಡ ಮಹಿಳೆಯರ ಬಿಕ್ಷೆ ಬೇಡುವಿಕೆಯ ಹಾವಳಿ ಪಟ್ಟಣದಲ್ಲಿ ಹೆಚ್ಚಾಗಿದೆ.

ಎಳೆ ಕಂದಮ್ಮಗಳನ್ನು ಹೆತ್ತಿಕೊಂಡ ಮಹಿಳೆಯರ ಬಿಕ್ಷಾಟನೆ ಮತ್ತು ಸಣ್ಣ ಸಣ್ಣ ಕಂದಮ್ಮಗಳು ಬಿಕ್ಷೆ ಬೇಡುವುದನ್ನ ನೋಡಿದರೆ ಸಾಕು ಎಂತವರಿಗೂ ಕರುಳ ಚುರುಕ್ ಎನ್ನದೆ ಇರಲಾರದು ಹಾಗಾಗಿ ಕೆಲವರು ತಮ್ಮ ಕೈಯಲ್ಲಿದ್ದಷ್ಟು ಅಷ್ಟು ಇಷ್ಟು ಎನ್ನದೆ ಹಣ ಕೊಟ್ಟು ಕರುಣೆ ತೊರಿಸುವುರು

ಇನ್ನೂ ಕೆಲವರು ದಾನಕ್ಕೆ ಅನ್ನ ಪ್ರಸಾದಕ್ಕೆ ಹೆಸರಾದ ಇಂತಹ ಪುಣ್ಯ ಕ್ಷೇತ್ರದಲ್ಲಿ ಈ ರೀತಿ ಕಂದಮ್ಮಗಳನ್ನು ಹೆತ್ತಿಕೊಂಡ ಮಹಿಳೆಯರು ಹಾಗೂ ಪುಟ್ಟ ಪುಟ್ಟ ಮಕ್ಕಳು ಬಿಕ್ಷೆ ಬೇಡುವುದನ್ನು ನೋಡಿ ಇಲ್ಲಿನ ಶಾಸಕರು ಸಂಸದರು ಮತ್ತು ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿಯವರು ಮಹಿಳಾ ಮತ್ತು ಮಕ್ಕಳ ರಕ್ಷಣಾ ಅಯೋಗ ಇವರ ಹಸಿವನ್ನು ನೀಗಿಸಲರದ ಅಸಮರ್ಥರಾಗಿ ಇಲ್ಲಿರುವರೇ ಎಂದು ಬಾಯಿಗೆ ಬಂದಂತೆ ಚಾಡಿಸುವರು.

ಪಾಪ ಆ ವ್ಯಕ್ತಿಗಳಿಗೇನು ಗೊತ್ತ ಈ ಊರಿನಲ್ಲಿ ಇಂತವರು ಬಿಕ್ಷೆ ಬೇಡುವುದನ್ನು ಕಂಡು ಇವರು ಇಲ್ಲಯವರೇ ಇರಬಹುದು ಎಂದುಕೊಂಡು ಆ ರೀತಿ ಬೈದಿರುವರು ಆದರೆ ಇಲ್ಲಿ ಈ ರೀತಿ ಬಿಕ್ಷೆಬೇಡುವರು ಯಾರು ಇಲ್ಲಿಯವರಲ್ಲ ಇವರೆಲ್ಲ ಗದಗ ಹುಬ್ಬಳ್ಳಿ ಮತ್ತು ಆಂದ್ರ ಮತ್ತು ಇತರೆ ಬಾಗದವರು.

ಅಲ್ಲಿಂದ ಬಂದು ಸಮೀಪದ ಹಳ್ಳಿ ನಗರಗಳಲ್ಲಿ ನೆಲಸಿ ವಿಶೆಷ ದಿನಗಳಲ್ಲಿ ಎಳೆ ಕಂದಮ್ಮಗಳನ್ನು ಹೆತ್ತಿಕೊಂಡು ಸುಮಾರು ಎಂಟತ್ತು ಮಹಿಳೆಯರು ಹಾಗೂ ಪುಟ್ಟ ಪಟಟ್ ಹುಡುಗಿಯರು ಬಸ್ ಅಟೋ ಮೂಲಕ ಕೊಟ್ಟೂರಿಗೆ ಬಂದು ಬಿಕ್ಷೆ ಬೇಡುತ್ತಿರುವರು.

ಈ ತಾಯಿಯರನ್ನು ಸೂಕ್ಷ್ಮವಾಗಿ ಅವಲೋಕಿಸದರೆ ತಮ್ಮ ಕಂಕುಳದಲ್ಲಿನ ಮಗುವಿಗು ಮತ್ತು ಅವರ ವರ್ತನೆಗೂ ಅಜಗಜಾಂತರ ವ್ಯತ್ಯಾಸ ಇರುವಂತಹ ಲಕ್ಷಣಗಳು ಗೋಚರಿಸುತ್ತವೆ. ವೃದ್ದರು ಮತ್ತು ಅಸಮರ್ಥ ಅಂಗವಿಕಲರು ಬಿಕ್ಷ ಬೇಡಿದರೆ ಸಮಾಜಕ್ಕೆ ಯಾವುದೇ ಮಾರಕಗಳು ಸಂಭವಿಸುವಿದಿಲ್ಲ ಆದರೆ ಎಲ್ಲಾ ರೀತಿಯಿಂದ ಸಮರ್ಥರಿರುವವರು ಈ ರೀತಿ ಸದಾ ಎಳೆ ಕಂದಮ್ಮಗಳನ್ನು ಮತ್ತು ಪುಟ್ಟ ಪುಟ್ಟ ಹುಡುಗಿಯರನ್ನು ಬಂಡವಾಳ ಮಾಡಿಕೊಂಡ ಬಿಕ್ಷೆ ಬೇಡುವಂತಹದ್ದು ಸಮಾಜಕ್ಕೆ ಮಾರಕವಾಗಿ ಪರಿಣಮಿಸಬಹುದು ಅಲ್ಲದೆ ಈ ರೀತಿ ಸದಾ ಪಟ್ಟಣದಲ್ಲಿ ಬಿಕ್ಷೆ ಬೇಡುವಂತಹದ್ದು ಪಟ್ಟಣಃಕ್ಕೆಕ ಕಳಂಕವಾದದ್ದು ಸಂಬಂದ ಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ತಾಲೂಕ ಆಡಳಿತ ಹಾಗೂ ಪಟ್ಟಣ ಪಂಚಾಯಿತಯವರು ಇಂತಹವರನ್ನ ಪಟ್ಟಣದಿಂದ ದೂರ ವಿಟ್ಟು ಇವರ ಜೀವನಕ್ಕೆ ಬೇಕಾದ ಸವಲತ್ತುಗಳನ್ನು ಸಂಬಂದಪಟ್ಟ ಇಲಾಖೆ ಮತ್ತು ಸರ್ಕಾರ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.

ತಳ್ಳು ಗಾಡಿ ಬಳಿ ಮತ್ತು ಹೋಟೆಲ್ ಗಳಲ್ಲಿ ಉಪಹಾರ ಸೇವಿಸಲು ಬರುವ ಸೂಕ್ಷ್ಮ ಹೃದಯಗಳನ್ನು ಬಿಕ್ಷೆ ಕೇಳುವಂತಹದ್ದು ಇವರ ಟಾರ್ಗೇಟ್ ಒಂದು ವಏಳೆ ಬಿಕ್ಷೆ ಕೊಡಲಿಕ್ಕೆಕ ತಮ್ಮಲ್ಲಿ ಹಣವಿಲ್ಲವೆಂದು ಹೇಳಿ ದುಡಿದು ತಿನ್ನಿಯಮ್ಮ ಅಂದರೆ ಸಾಕು ಅವರಿಗೆ ಅನ್ನ ಬಾರದ ಮಾತುಗಳಿಂದ ಬೈದು ಸರ್ಕಲ್ ನಲ್ಲಿ ಮರೇದಿ ಹಾರಜು ಹಾಕುವರು ಇಂತಾವು ಸಾಕಾಷ್ಟು ಉದಾಹರಣೆಗಳು ಇಲ್ಲಿವೆ.
ಹೆಸರು ಬೇಡ ತಳ್ಳುಗಾಡಿ ಹೋಟೆಲ್ ಮಾಲಿಕ ಕೊಟ್ಟೂರು ನಿವಾಸಿ

ರಾಜ್ಯದಲ್ಲಿ ಬಿಕ್ಷಾಟನೆ ತಡೆಯಲು ಸರ್ಕಾರ ಹಲವು ಯೋಜನೆಗಳನ್ನು ಮತ್ತು ಇಲಾಖೆಗಳನ್ನು ನಿರ್ಮಿಸಿದೆ ಆದರೆ ಸಂಬಂದಪಟ್ಟ ಅಧಿಕಾರಿ ವರ್ಗದವರು ಹೆಸರಿಗೆ ಮಾತ್ರ ಇಲಾಖೆ ಹೆಸರು ಹೇಳಿಕೊಂಡ ಕಣ್ಮುಚ್ಚಿ ಕುಳಿತಿದ್ದಾರೆ ಇವರು ಎಚ್ಚೆತ್ತರೆ ಈ ರೀತಿಯ ಬಿಕ್ಷಾಟಣೆ ಯನ್ನ ಮತ್ತು ಸಮಾಜಕ್ಕೆ ಆಗುವ ಮಾರಕಗಳನ್ನು ತಡೆಬಹುದು ಇದರ ಜೊತೆಗೆ ಪ್ರಜ್ಞಾವಂತ ನಾಗರೀಕರು ಎಂತವರಿಗೆ ಬಿಕ್ಷೆ ಕೊಡಬೇಕೆಂದು ಹರಿತು ಬಿಕ್ಷೆ ಕೊಟ್ಟರೆ ಸಮಾಜಕ್ಕೆ ಮಾರಕ ಬಿಕ್ಷಿಕರ ಹಾವಳಿ ನಿಯಂತ್ರಿಸಬಹುದು
ಚಂದ್ರಶೇಖರ ಕೊಟ್ಟುರು ತಾಲುಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಕೊಟ್ಟೂರು

ಕೊಟ್ಟೂರು ಪಟ್ಟಣದಲ್ಲಿ ಗುರುವಾರ ಸೋಮವಾರ ಮತ್ತು ಹಬ್ಬ ಹರಿದಿನಗಳು ಬಂದರೆ ಸಾಕು ಬಸ್ ನಿಲ್ದಾಣ ಮತ್ತು ತಳ್ಳುಗಾಡಿ ಹೋಟೆಲ್‍ಗಳ ಮುಂದೆ ರಸ್ತೆ ಮಧ್ಯೆ ಹಾಗೂ ಸಂತೆಯಲ್ಲಿ ಚಿಕ್ಕ ಚಿಕ್ಕ ಹುಡುಗಿಯರು ಮತ್ತು ಎಳೆ ಕಂದಮ್ಮಗಳನ್ನು ಹೆತ್ತಿಕೊಂಡ ಮಹಿಳೆಯರ ಬಿಕ್ಷೆ ಬೇಡುತ್ತಿರುವುದು.

 

 

Recent Articles

spot_img

Related Stories

Share via
Copy link