ಭ್ರಷ್ಟರನ್ನು ಪಾಲನೆ ಮಾಡುತ್ತಿರುವ ಕಾಂಗ್ರೇಸ್:ಸಿ.ಎಂ.ಉದಾಸಿ

ಹಾವೇರಿ :

           ಭ್ರಷ್ಟರನ್ನು ಪಾಲನೆ ಪೋಷಣೆ ಮಾಡುತ್ತಿರುವ ಕಾಂಗ್ರೇಸ್ ನಾಯಕರು ಕ್ಷೇತ್ರದ ಆಭಿವೃದ್ಧಿಯನ್ನು ಬಿಟ್ಟು ಅಪಪ್ರಚಾರದ ಮೂಲಕ ಗೆಲ್ಲುವ ಹುನ್ನಾರ ಸಫಲವಾಗದು ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.

           ಹಾನಗಲ್ಲಿನಲ್ಲಿ ಪುರಸಭೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಹಾನಗಲ್ಲ ಪುರಸಭೆ ಎರಡು ಅವಧಿಯಲ್ಲಿ ಇಡೀ ನಗರದ ಜನರ ಹಿತಾಸಕ್ತಿ ಕಾಯುವಲ್ಲಿ ಸಫಲವಾಗಿದೆ. ಹೀಗಾಗಿಯೇ ಎರಡು ಬಾರಿ ಬಿಜೆಪಿ ಬೆಂಬಲಿಸಿದ ಇಲ್ಲಿನ ಮತದಾರರು ಈ ಬಾರಿಯೂ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಾವುದೇ ಸಂಶಯವಿಲ್ಲ. ಕಾಂಗ್ರೇಸ್ಸಿಗರ ಯಾವುದೇ ಅಪ್ರಚಾರ ಬಿಜೆಪಿ ಗೆಲುವನ್ನು ತಡೆಯದು. ನಗರದ ಮತದಾರರು ಇಲ್ಲಿನ ಅಭಿವೃದ್ಧಿಯನ್ನು ಗಮನಿಸಿದ್ದಾರೆ ಎಂದರು.

             ಕಾಂಗ್ರೇಸ್ ಭ್ರಷ್ಟಾಚಾರದ ಕೂಪವಾಗಿದೆ. ಅವರ ಎಲ್ಲ ಆಡಳಿತ ಜನವಿರೋಧಿಯಾಗಿದೆ. ಅಭಿವೃದ್ಧಿಯಲ್ಲಿ ಅವರದು ಶೂನ್ಯ ಸಂಪಾದನೆ. ಕಾಂಗ್ರೇಸ್ ಅಧಿಕಾರದ ಅವಧಿಯಲ್ಲಿ ಹಾನಗಲ್ಲ ಪುರಸಭೆಗೆ ಅನುದಾನವನ್ನೇ ನೀಡಲಿಲ್ಲ. ವಿಶೇಷ ಯೋಜನೆಗಳಂತೂ ಮರೀಚಿಕೆಯಾದವು. ಜನಪ್ರತಿನಿಧಿಗಳ ನಿರಾಸಕ್ತಿಯೇ ಇದಕ್ಕೆ ಕಾರಣ ಎಂದ ಅವರು, ನ್ಯಾಯ ಸಮ್ಮತವಾಗಿ ಕೆಲಸ ಮಾಡುವ ಆದಿಕಾರಿಗಳನ್ನು ಇಲ್ಲಿ ನೇಮಿಸಿಕೊಳ್ಳುವ ಬದಲು ಹಲವು ಭ್ರಷ್ಟ ಅಧಿಕಾರಿಗಳನ್ನು ಇಲ್ಲಿಟ್ಟುಕೊಂಡು ಸಾರ್ವಜನಿಕರ ಶೋಷಣೆಗೆ ಮುಂದಾಗಿದ್ದಾರೆ. ಇದನ್ನೆಲ್ಲ ಗಮನಿಸಿದ ಹಾನಗಲ್ಲ ನಗರದ ಜನತೆ ಕಾಂಗ್ರೇಸ್ ಪಕ್ಷಕ್ಕೆ ಸರಿಯಾಗಿ ಈ ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ ಎಂದರು.
             ಹಾವೇರಿ ಜಿಲ್ಲೆಯ ಎಲ್ಲ ಪುರಸಭೆ ಪಟ್ಟಣ ಪಂಚಾಯತಿಗಳಲ್ಲಿ ಬಿಜೆಪಿ ಜಯ ಗಳಿಸಲಿದೆ. ಕಾಂಗ್ರೇಸ್ ಆಡಳಿತಕ್ಕೆ ಬೇಸತ್ತ ಜನತೆ ಬಿಜೆಪಿಯತ್ತ ಒಲವು ತೋರಿದ್ದಾರೆ. ಪ್ರಾಮಾಣಿಕ ಆಡಳಿತ ಈಗ ಎಲ್ಲರ ಆದ್ಯತೆಯಾಗಿದೆ. ಇಂಥ ಸ್ಥಿತಿಯಲ್ಲಿ ಬಿಜೆಪಿಯೇ ಮತದಾರರ ಆಯ್ಕೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಜಾಫರಸಾಬ ಖೇಣಿ, ತಾಲೂಕು ಬಿಜೆಪಿ ಆದ್ಯಕ್ಷ ನಿಂಗಪ್ಪ ಗೊಬ್ಬೇರ, ವಾಸುದೇವ ಮೂಡಿ, ರಾಮಚಂದ್ರ ಚಿಕ್ಕಣ್ಣನವರ, ಆಶಾ ಚಿಕ್ಕಣ್ಣವರ, ಗುರು ಕಲಾಲ, ರವಿ ಕಲಾಲ ಮೊದಲಾದವರು ಈ ಸಂದರ್ಭದಲ್ಲಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link