ಮಂಗಳಮುಖಿಯರಿಗೆ ಸೌಲಭ್ಯ ಹೆಚ್ಚಿಸಬೇಕು

 ಚಿತ್ರದುರ್ಗ :

      ಸಮಾಜ ನಮ್ಮನ್ನು ಒಪ್ಪಿಕೊಂಡರು ಸಹಾ ಸಮಾಜದಲ್ಲಿನ ಜನತೆ ನಮ್ಮನ್ನು ಒಪ್ಪಿಕೊಳ್ಳುತ್ತಿಲ್ಲ, ಇದರಿಂದ ನಾವುಗಳು ಸಮಾಜಕ್ಕೂ ಬೇಕಾಗದೆ ಸರ್ಕಾರಕ್ಕೂ ಬೇಕಾಗದೆ ತ್ರಿಶಂಕು ಸ್ಥಿತಿಯನ್ನು ಅನುಭವಿಸುತ್ತಿದ್ದೇವೆ ಎಂದು ಮಂಗಳಮುಖಿಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

     ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಂಗಳಮುಖಿ ವೀಣಾ ನಮಗೆ ಯಾವುದೇ ರೀತಿಯ ಶಿಕ್ಷಣ ಇಲ್ಲ, ಇದರಿಂದ ಸರ್ಕಾರಿ ಕೆಲಸ ಸಿಗುವುದಿಲ್ಲ ಸ್ವಯಂ ಆಗಿ ದುಡಿಮೆ ಮಾಡಲು ಮುಂದಾದರೂ ಸಹಾ ಸರ್ಕಾರವಾಗಲಿ ಸಮಾಜವಾಗಲಿ ಸಹಾಯ ಮಾಡುತ್ತಿಲ್ಲ ನೀಡಿದರು ಸಹಾ ಆದು ಕೆಲವರಿಗೆ ಮಾತ್ರವೆ ಸಿಗುತ್ತಿದೆ ಇದರಿಂದ ಯಾರೂ ಸಹಾ ನೆಮ್ಮದಿಯಾಗಿಲ್ಲ ಎಂದು ನೊಂದು ನುಡಿದರು.

      ನಮ್ಮ ಮನೆಯವರು ಒಪ್ಪಿಕೊಂಡರು ಸಹಾ ಅಕ್ಕ-ಪಕ್ಕದ ಮನೆಯವರು ನಮ್ಮನ್ನು ತಿರಸ್ಕಾರ ಮನೋಭಾವದಿಂದ ನೋಡುತ್ತಾರೆ, ಅಲ್ಲದೆ ನಮಗೆ ಮನೆ ಬಾಡಿಗೆಯನ್ನು ನೀಡಲು ಸಹಾ ಕೆಲವರು ಅಡ್ಡಿ ಮಾಡುತ್ತಿದ್ದಾರೆ, ಮಾಲಿಕರು ಒಪ್ಪಿದರೂ ಸಹಾ ನೆರೆ-ಹೊರೆಯವರು ಸಮ್ಮತಿಸುತ್ತಿಲ್ಲ ಎಂದು ಆರೋಪಿಸಿ ಸರ್ಕಾರ ನಮ್ಮಂತಹರಿಗೆ ಸಹಾಯ ಮಾಡುತ್ತಿದೆ ಅದರೆ ಅದರ ಪ್ರಮಾಣ ತುಂಬಾ ಕಡಿಮೆ ಇದೆ ಇದರಿಂದ ಬೇರೆಯವರಿಗೆ ಸೌಲಭ್ಯ ಸಿಗದೇ ವಂಚಿತರಾಗುತ್ತಿದ್ಧಾರೆ ಇದರ ಬದಲಾಗಿ ಸರ್ಕಾರ ವರ್ಷಕ್ಕೆ ನೀಡುವ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

      ಸ್ವಾಗತ ; ನ್ಯಾಯಾಲಯ ಇತ್ತಿಚೇಗೆ ಸಲಿಂಗಕಾಮದ ಬಗ್ಗೆ ನೀಡಿರುವ ತೀರ್ಪನ್ನು ಸ್ವಾಗತ ಮಾಡಿದ್ದು, ಇದು ನಮಗೆ ಸಂತೋಷವನ್ನು ಉಂಟು ಮಾಡಿದೆ ಇದುವರೆವಿಗೂ ಹೆದರಿಕೊಂಡು ಪ್ರೀತಿ ಮಾಡುತ್ತಿದ್ದವು ಈಗ ನ್ಯಾಯಾಲಯ ನಮ್ಮ ಪರವಾಗಿ ಇರುವುದರಿಂದ ಯಾವುದೇ ಭಯ ಇಲ್ಲದೆ ನೆಮ್ಮದಿಯಾಗಿ ಇರಬಹುದಾಗಿದೆ ಎಂದರು.

     ಮತ್ತೋರ್ವ ಚಂದ್ರಮುಖಿ ಚಂದ್ರಕಲಾ ಮಾತನಾಡಿ ಸರ್ಕಾರದಿಂದ ನಮಗೆ ಯಾವುದೇ ರೀತಿಯ ಸೌಲಭ್ಯಗಳು ಸಿಗುತ್ತಿಲ್ಲ, ಸರ್ಕಾರದ ವಿವಿಧ ರೀತಿಯ ಯೋಜನೆಗಳಲ್ಲಿ ನಮಗೆ ಮನೆಗಳನ್ನು ಸಹಾ ನೀಡಿಲ್ಲ, ಚಿತ್ರದುರ್ಗದಲ್ಲಿ ಸುಮಾರು 600 ರಿಂದ 700 ಜನ ವಿವಿಧ ಲೈಂಗಿಕ ಅಲ್ಪಸಂಖ್ಯಾತರು ಇದ್ದಾರೆ ಅವರಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯಗಳು ಸಿಕ್ಕಿಲ್ಲ ಎಂದು ಹೇಳಿದರು.

      ಸರ್ಕಾರ ನಮಂತಹರಿಗಾಗಿ ಮೃತ್ರಿ ಯೋಜನೆಯನ್ನು ಜಾರಿ ಮಾಡಿದೆ ಆದರೆ ಅಧಿಕಾರಿಗಳು ಇದಕ್ಕೆ ಸರಿಯಾದ ಸ್ಫಂದಿಸುತ್ತಿಲ್ಲ ಯೋಜನೆ ಫಲಾನುಭವಿಗಳಾಗಲು ಹೋದರೆ ದಾಖಲಾತಿಗಳನ್ನು ಕೇಳುತ್ತಾರೆ ಆದರೆ ಅವರು ಕೇಳುವ ದಾಖಲಾತಿಗಳು ನಮ್ಮಲ್ಲಿರದೇ ನಮ್ಮ ಪೋಷಕರ ಮನೆಯಲ್ಲಿದೆ ಅಲ್ಲಿ ಹೋಗಲು ಆಗದೆ ಸೌಲಭ್ಯ ಪಡೆಯಲಾಗಿದ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ, ಅಲ್ಲದೆ ಆಗ ಇರುವ ದಾಖಲಾತಿಯಲ್ಲಿ ಇದ್ದ ಹೆಸರು ಈಗ ಇರುವ ಹೆಸರು ಬೇರೆಯಾಗಿರುವುದರಿಂದ ಅಧಿಕಾರಿಗಳು ಸೌಲಭ್ಯವನ್ನು ನೀಡದೇ ತಿರಸ್ಕಾರ ಮಾಡುತ್ತಿದ್ದಾರೆ ಎಂದು ಚಂದ್ರಕಲಾ ತಿಳಿಸಿದರು. ಗೋಷ್ಟಿಯಲ್ಲಿ ವಾಹಿನಿ ಸಮೂಹ ಸಂಸ್ಥೆ ಮತ್ತು ಸಂಗಮದ ವ್ಯವಸ್ಥಾಪಕರಾದ ಈರಣ್ಣ, ಮಹೇಶ ಭಾಗವಹಿಸಿದ್ದರು.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link