ಹಗರಿಬೊಮ್ಮನಹಳ್ಳಿ:
347ನೇ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀಗುರು ರಾಘವೇಂದ್ರ ಪಾದಯಾತ್ರಾ ಸೇವಾ ಸಮಿತಿ ತಾಲೂಕು ಘಟಕದಿಂದ ಪ್ರತಿವರ್ಷದಂತೆ ಈ ವರ್ಷ 39ನೇ ವರ್ಷದ ಪಾದಯಾತ್ರೆಯನ್ನು ಬುಧವಾರ ಕೈಗೊಂಡರು.
22ರಿಂದ 27ರವರೆಗೆ ಪಾದಯಾತ್ರೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಶ್ರಾವಣ ಮಾಸದಲ್ಲಿ ಈ ವ್ರತಕೈಗೊಂಡರೆ ಸಂಕಲ್ಪಕೈಗೂಡುತ್ತೆ ಎಂದು 39ವರ್ಷಗಳ ಪಾದಯಾತ್ರೆ ಕೈಗೊಂಡ ಜಿ.ಪಾಂಡುರಂಗರವರು ತಮ್ಮ ಅನುಭವವನ್ನು ಹೇಳುತ್ತಾರೆ.ಪಟ್ಟಣದ ಬನಶಂಕರಿ ದೇಗುಲ ಆವರಣದಿಂದ ಪಾದಯಾತ್ರೆ ಆರಂಭವಾಯಿತು. ಈ ಸಂದರ್ಭದಲ್ಲಿ ಎಸ್.ಪಿ.ನಾಗರಾಜ್, ಎನ್.ವಿರುಪಾಕ್ಷ, ಪ್ರತಾಪ, ಸುರೇಶ, ಪವನ್‍ಕುಮಾರ್, ಪ್ರಶಾಂತ, ಶಿವಕುಮಾರ್, ದರ್ಶನ, ಭೀಮಪ್ಪ, ಹೇಮರೆಡ್ಡಿ ಸೇರಿ ಅನೇಕರು ಪಾಲ್ಗೊಂಡಿದ್ದರು.
‘ವಿಶೇಷವಾಗಿ ಶ್ರಾವಣಮಾಸದಲ್ಲಿ ಶ್ರೀರಾಘವೇಂದ್ರ ಸ್ವಾಮಿಯವರ ಮಾಲಾಧರಿಸುವ ಮೂಲಕ ವ್ರತಕೈಗೊಂಡು ಒಂದುವಾರ ಪಾದಯಾತ್ರೆಯಲ್ಲಿ ತೊಡಗಿ ಸ್ವಾಮಿಯ ದರ್ಶನಮಾಡಿದರೆ ಮಾಡಿಕೊಂಡ ಸಂಕಲ್ಪಗಳು ಈಡೇರುತ್ತವೆ ಎನ್ನುವ ನಂಬಿಕೆ ಹಿನ್ನೆಲೆಯಲ್ಲಿ ಸ್ವಾಮಿಯ ಸೇವೆ ಮಾಡುತಿದ್ದೇವೆ.’-ಪಿ.ಹನುಂತರಾವ್.ಹ.ಬೊ.ಹಳ್ಳಿ.
