ಹಾನಗಲ್ಲ :
ಒಂದು ಸಮಾಜ ಅಥವಾ ದೇಶ ಅಭಿವೃದ್ಧಿ ಹೊಂದಬೇಕಾದರೆ ಮೊದಲು ಮಕ್ಕಳು ಅಭಿವೃಧ್ಧಿ ಹೊಂದಬೇಕು ಅಂದರೆ ಮಕ್ಕಳು ತಮ್ಮ ಹಕ್ಕುಗಳನ್ನು ಅರಿತು ಅವುಗಳನ್ನು ಚಲಾಯಿಸುವಂತಾಗಬೇಕು ಎಂದು ಗ್ರಾಮ ಪಂಚಾಯತ ಅಧ್ಯಕ್ಷ ಜಗದೀಶ ಚಂದಣ್ಣನವರ ನುಡಿದರು.
ಹಾನಗಲ್ಲ ತಾಲೂಕಿನ ಹೊಂಕಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆಯು ಆಯೋಜಿಸಿದ ತೆರೆದ ಮನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಸಾಮಾಜಿಕ ಒತ್ತಡದಿಂದಾಗಿ ತಮ್ಮ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಆದ್ದರಿಂದ ಮಕ್ಕಳ ಸಮಸ್ಯೆಗಳನ್ನು ಅರಿತು ಆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡುವುದು ನಮ್ಮ ಹೊಣೆಯಾಗಿದೆ ಎಂದರು.
ಮುಖ್ಯ ಅಥಿತಿಯಾಗಿ ಮಾತನಾಡಿದ ರೋಶನಿ ಸಮಾಜ ಸೇವಾ ಸಂಸ್ಥೆಯ ಸಂಯೋಜಕಿ ನಿರ್ಮಲಾ ಮಡಿವಾಳರ ಮಾತನಾಡಿ ತೆರೆದ ಮನೆ ಕಾರ್ಯಕ್ರಮ ಎಂಬುದು ಮಕ್ಕಳ ಸಹಾಯವಾಣಿ ಕಾರ್ಯಕ್ರಮವಾಗಿದ್ದು, ಇದರಲ್ಲಿ ಮಕ್ಕಳ ಸಮಸ್ಯೆಗಳನ್ನು ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳೊಂದಿಗೆ ಮುಕ್ತವಾಗಿ ಚರ್ಚಿಸುವುದಾಗಿದೆ ಮತ್ತು ಪರಿಹಾರವನ್ನು ಕಂಡುಕೊಳ್ಳುವುದಾಗಿದೆ. ಮಕ್ಕಳಿಗೆ ತಮ್ಮ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲು ಅನುವು ಮಾಡಿಕೊಡಬೇಕು ಎಂದರು.
ಹೊಂಕಣ, ಇನಾಂ ಲಕಮಾಪೂರ, ಶೇಷಗಿರಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು ಹಾಗೂ ಶಾಲೆಯ ಮಕ್ಕಳು ಭಾಗವಹಿಸಿ ಹಲವಾರು ಸಮಸ್ಯೆಗಳನ್ನು ವ್ಯಕ್ತಪಡಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಂಕಣದಲ್ಲಿ ಆಟವಾಡಲು ಮೈದಾನವನ್ನು ಸ್ವಚ್ಚತೆಗೊಳಿಸಬೇಕು. ಮತ್ತು ಅಡುಗೆ ಮನೆ ಮಳೆಗಾಲದಲ್ಲಿ ಸೋರುತ್ತದೆ ಸರಿಪಡಿಸಬೇಕು. ಶೌಚಾಲಯಕ್ಕೆ ನಳದ ನೀರಿನ ವ್ಯವಸ್ಥೆ ಬೇಕು. ಹೊಂಕಣ, ಶೇಷಗಿರಿ ಅಂಗನವಾಡಿ 1 ಕ್ಕೆ ಕಂಪೌಂಡ ಮತ್ತು ವಿದ್ಯುತ್ ವ್ಯವಸ್ಥೆ ಬೇಕು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶೇಷಗಿರಿಯಲ್ಲಿ ಕೊಠಡಿ ವ್ಯವಸ್ಥೆ, ಮೇಲ್ಛಾವಣಿ ವ್ಯವಸ್ಥೆ, ನೀರು ಹೋಗಲು ಕಾಲುವೆ ಸಮಸ್ಯೆ ಇರುತ್ತದೆ. ಶೇಷಗಿರಿಯ ಅಂಗನವಾಡಿ 1 ರಲ್ಲಿ ಶೌಚಾಲಯ ತುಂಬಿದೆ ತೆರವುಗೊಳಿಸಬೇಕು. ಇನಾಂಲಕಮಾಪುರಕ್ಕೆ ಕಸದತೊಟ್ಟಿ, ನೀರು, ಕೊಠಡಿ, ಮೇಲ್ಛಾವಣಿ ದುರಸ್ತಿ, ಪಿನಾಯಲ್ ವ್ಯವಸ್ಥೆ ಒದಗಿಸಿಕೊಡಬೇಕೆಂದು ಕೇಳಿಕೊಂಡರು.
ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿಯಾದ ಶ್ರೀಯುತ ಪರಶುರಾಮ ಅಂಬಿಗೇರ ಮಾತನಾಡಿ ಮಕ್ಕಳ ಮೂಲಭೂತ ಸಮಸ್ಯೆಗಳನ್ನು ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ಶೀಘ್ರದಲ್ಲಿ ಪರಿಹಾರÀ ಕಲ್ಪಿಸಿ ಕೊಡುತ್ತೇವೆ ಮತ್ತು ಹೆಚ್ಚಿನ ಅನುದಾನದ ಸಮಸ್ಯೆಗಳಿಗೆ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸಂಬಂಧಪಟ್ಟ ಇಲಾಖೆಗಳ ಮುಖಾಂತರ ಪರಿಹಾರ ಕಲ್ಪಿಸಿಕೊಡಲಾಗುವುದು ಎಂದು ಮಕ್ಕಳಿಗೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶಂಕ್ರಗೌಡ ಬಿ ದಳವಾಯಿ, ಗುತ್ತೆಪ್ಪ ಅಂಬಿಗೇರ, ಶಿದ್ದಪ್ಪ ಕತ್ತಲೆನವರ. ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಿ, ಎನ್, ಬಿರಾದಾರ. ಎಸ್ ಎಚ್ ಕಾಡನವರ. ಹಾಗೂ ಸಹ ಶಿಕ್ಷಕರಾದ ಮೇನಕಾ ಕಾಳೆ, ಸಾವಿತ್ರಿ ಬಳ್ಳಾರಿ. ಬಿ ಜಿ ಪದಕಿ. ಪೂರ್ಣಿಮಾ ಕೆರೊಡಿ. ಜಯಮ್ಮ ಭರಮಗೌಡರ, ಎಸ್ ಎ ಚಿಕ್ಕಬಾಸುರ. ಎಸ್ ಡಿ ಎಮ್ ಸಿ ಅಧ್ಯಕ್ಷರು ಮೂಕೇಶ ಭಂಗಿ. ಮತ್ತು ರೋಶನಿ ಸಮಾಜ ಸೇವಾ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು
ಮೈಲಾರಪ್ಪ ಕಾರ್ಯಕ್ರಮ ನಿರೂಪಣೆ ಮಾಡಿದರು, ಸಾಧಿಕ ಸ್ವಾಗತಿಸಿದರು, ನಿರ್ಮಲಾ ವಂದಿಸಿದರು.