ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳ ಹಾವೇರಿ ಜಿಲ್ಲೆ ಎರಡನೇಸ್ಥಾನದಲ್ಲಿದೆ:ಎಸ್.ಜಿ.ಮಜೀದ್‍

ಬ್ಯಾಡಗಿ:

          ಪ್ರಸ್ತುತ ದಿನಗಳಲ್ಲಿ ಕರ್ನಾಟಕರಾಜ್ಯದಲ್ಲಿ ನಡೆಯುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಹಾವೇರಿ ಜಿಲ್ಲೆ ಎರಡನೇಸ್ಥಾನದಲ್ಲಿರುವುದು ವಿಷಾದದ ಸಂಗತಿಎಂದುಜಿಲ್ಲಾ ಮತ್ತು ಮಕ್ಕಳ ಕಲ್ಯಾಣ ಸಮಿತಿಅಧ್ಯಕ್ಷ ಎಸ್.ಜಿ.ಮಜೀದ್‍ ಖೇದ ವ್ಯಕ್ತಪಡಿಸಿದರು.
            ಮಂಗಳವಾರ ಪಟ್ಟಣದ ಕದರಮಂಡಲಗಿ ರಸ್ತೆಯಲ್ಲಿನ ಸೇಂಟ್ ವಿಯೆನ್ನಾ ಶಾಲೆಯ ಸ್ನೇಹ ಸದನದ ಆವರಣದಲ್ಲಿ ನಡೆದ ನಿರ್ಗತಿಕ ಮಕ್ಕಳ ಪಾಲಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
                 ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ನಿರಂತರವಾಗಿ ಮಾನವ ಹಕ್ಕುಗಳ ಉಲ್ಲಂ ಘನೆ ನಡೆಯುತ್ತಿರುವುದಕ್ಕೆ ಸಾರ್ವಜನಿಕರಲ್ಲಿ ಮಾನವ ಹಕ್ಕುಗಳ ಕುರಿತಂತೆ ಸಮಗ್ರ ಮಾಹಿತಿಇಲ್ಲದಿರುವುದೇಕಾರಣವಾಗಿದೆಎಂದರು.
ನಿಂತಿಲ್ಲ ಮಹಿಳೆಯರ ಮೇಲಿನ ದೌರ್ಜನ್ಯ:ಬಾಲ್ಯ ವಿವಾಹ, ಅತ್ತೆದೌರ್ಜನ್ಯ, ವರದಕ್ಷಿಣೆಕಿರುಕುಳ, ಆಸಿಡ್ ಎರಚುವುದು, ಹಾಗೂ ಉದ್ಯೋಗ ಮಾಡುವ ಕಛೇರಿಗಳಲ್ಲಿ ಮೇಲಾಧಿಕಾರಿಗಳಿಂದ ಮಹಿಳಾ ಅಧಿಕಾರಿಗಳಿಗೆ ಅನೇಕ ರೀತಿಯಲ್ಲಿ ದಬ್ಬಾಳಿಕೆ ಶೋಷಣೆ ನಡೆಸುವುದುಕೂಡಾ ಮಾವನ ಹಕ್ಕುಗಳ ಉಲ್ಲಂಘನೆಯಾಗುತ್ತದೆಎಂದರು..
               ಎಲ್ಲರೂ ಸುಶಿಕ್ಷಿತರಾಗಬೇಕಿದೆ:ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಭಾಗಿತ್ವಅತ್ಯಂತ ಪ್ರಮುಖವಾಗಿದೆ ಮಕ್ಕಳನ್ನು ಸುಶಿಕ್ಷರನ್ನಾಗಿ ಮಾಡುವುದಷ್ಟೆ ಪಾಲಕರ ಮತ್ತು ಪೋಷಕರಜವಾಬ್ದಾರಿಯಲ್ಲ ಬದಲಾಗಿ ಮಕ್ಕಳಲ್ಲಿ ಸಂಪ್ರದಾಯ ಸಂಸ್ಕøತಿಯನ್ನು ಬೆಳೆಸುವ ಪರಿಪಾಠ ಬೆಳೆಸಿಕೊಳ್ಳೇಕಿದೆ ಎಂದರು..
ವೇದಿಕೆಯಲ್ಲಿ ಸ್ನೇಹ ಸದನದಸಿಸ್ಟರ್ ಮಾರಿತೆರೆಸ್ ನಿರ್ದೇಶಕಿಸಿಸ್ಟರ್ ಗ್ಲೋರೀಯಾ ತೆರೆಸಿಟಾ, ಸಿಸ್ಟರ್ ಸಹನಾ ಸೇರಿದಂತೆಇನ್ನಿತರರು ಉಪಸ್ಥಿತರಿದ್ದರು.ತನುಜಾ ಸ್ವಾಗತಿಸಿದ ರುಸಾವಿತ್ರಾನಿರೂಪಿಸಿದರು ಮಂಜುಳಾ ವಂದಿಸಿದರು.

Recent Articles

spot_img

Related Stories

Share via
Copy link