ಚಿಕ್ಕನಾಯಕನಹಳ್ಳಿ
ಪಟ್ಟಣದ ಶುಕ್ರವಾರದ ಬಾಗಿಲು ಬಳಿ ಇರುವ ಶಕ್ತಿ ಮಾತೆ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಾಲಯಕ್ಕೆ ಚಲನಚಿತ್ರ ನಟ ಮೂಗೂರುಸುರೇಶ್ ಭೇಟಿ ನೀಡಿ ದೇವಿಗೆ ಪೂಜೆ ಸಲ್ಲಿಸಿದರು.
ದೇವಾಲಯದಲ್ಲಿ ಪ್ರತಿ ತಿಂಗಳು ಹುಣ್ಣಿಮೆಯಂದು ಶಕ್ತಿದೇವತೆ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ಹಾಗೂ ಧೂತರಾಯಸ್ವಾಮಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ನೂಲುಹುಣ್ಣಿಮೆ ಅಂಗವಾಗಿ ದೇವರಿಗೆ ಹೂವಿನ ಅಲಂಕಾರ ಹಾಗೂ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಅಂದು ಶಕ್ತಿ ದೇವಿಯ ದರ್ಶನ ಮಾಡಲು ಚಲನಚಿತ್ರ ನಟ ಮೂಗೂರುಸುರೇಶ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯಕ್ಕೆ ಆಗಮಿಸಿದ್ದ ಚಿತ್ರನಟರಿಗೆ ದೇವಾಲಯದ ಧರ್ಮದರ್ಶಿ ರಂಗಸ್ವಾಮಿ ಹಾಗೂ ಲಕ್ಷ್ಮೀಶ್ ದೇವಾಲಯದ ವತಿಯಿಂದ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ನೂಲುಹುಣ್ಣಿಮೆ ಅಂಗವಾಗಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಕ್ಷೀರಾಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ, ಅಷ್ಟಾವರ್ಧನಸೇವೆ ಹಾಗೂ ವಿಶೇಷ ಪೂಜೆಗೆ ತುಮಕೂರು, ಬೆಂಗಳೂರಿನಿಂದ ನೂರಾರು ಮಂದಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ