ಡಾ.ಹಚ್.ಡಿ.ರಂಗನಾಥ್ ಎದುರಾಳಿಯಾಗಿ ಪತ್ನಿ ಸುಮಾ ರಂಗನಾಥ್‌ ನಾಮಪತ್ರ ಸಲ್ಲಿಕೆ

ಕುಣಿಗಲ್:-

      ಶಾಸಕ ಡಾ.ಹಚ್.ಡಿ.ರಂಗನಾಥ್ ಕಾಂಗ್ರೇಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರೆ. ಡಾ.ರಂಗನಾಥ್ ಅವರ ಪತ್ನಿ ಡಾ.ಸುಮಾ ರಂಗನಾಥ್ ಪಕ್ಷೇತ್ರರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದರು.

      ತಮ್ಮ ಮನೆ ದೇವರು ಗುಡ್ಡದ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಡಾ.ರಂಗನಾಥ್ ಹಾಗೂ ಪತ್ನಿ ಡಾ.ಸುಮಾ ರಂಗನಾಥ್ ಅವರ ಪಟ್ಟಣದ ಪ್ರವಾಸಿ ಮಂದಿರದಿಂದ ಕಾಂಗ್ರೇಸ್‌ನ ಸಾವಿರಾರು ಕಾರ್ಯರ್ತರೊಂದಿಗೆ ಮೆರವಣಿಗೆಯಲ್ಲಿ ಒಟ್ಟಿಗೇ ಅಗಮಿಸಿದ ದಂಪತಿಗಳು ತಾಲೂಕು ಕಚೇರಿಯ ಚುನಾವಣಾಧಿಕಾರಿ ಕಚೇರಿಯಲ್ಲಿ ಶಾಸಕ ಡಾ.ರಂಗನಾಥ್ ಕಾಂಗ್ರೇಸ್ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು ನಂತರ ಪತ್ನಿ ಡಾ. ಸುಮಾ ರಂಗನಾಥ್ ಪಕ್ಷೇತ್ರವಾಗಿ ನಾಮಪತ್ರ ಸಲ್ಲಿಸಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದರು.

     ನಾಮಪತ್ರ ಸಲ್ಲಿಕೆಯ ನಂತರ ಮಾತನಾಡಿದ ಶಾಸಕ ಡಾ.ರಂಗನಾಥ್ ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕೆಲಸ ಹಾಗೂ ಜನ ಸೇವೆಯನ್ನು ಜನ ಮನಗೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ಮಾಡಿರುವ ಕೆಲಸವನ್ನು ಪ್ರಚಾರಕ್ಕೆ ಹೋದ ಕಡೆಯೆಲ್ಲಾ ಜನರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಬಾರಿ ಮತ್ತೇ ನನ್ನನೇ ಶಾಸಕನಾಗಿ ಆಯ್ಕೆ ಮಾಡುತ್ತಾರೆ ಎಂಬ ಅಚಲವಾದ ನಂಬಿಕೆ ನನಗೆ ಇದೆ ಎಂದು ತಿಳಿಸಿದರು.

     ಕುಣಿಗಲ್ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಬೇಕಾಗಿದೆ ಬಹುಮುಖ್ಯವಾಗಿ ಶಾಸ್ವತ ನೀರಾವರಿ ಯೋಜನೆ ಜಾರಿ ಮಾಡಬೇಕಾಗಿದೆ ಇದಕ್ಕಾಗಿ ಲಿಂಕ್ ಕೆನಾಲ್ ಯೋಜನೆ ಮಂಜೂರಾಗಿದ್ದರು ಬಿಜೆಪಿ ಸರಕಾರ ತಡೆ ಮಾಡಿ ಕುಣಿಗಲ್ ತಾಲೂಕಿನ ರೈತರಿಗೆ ಅನ್ಯಾಯ ಮಾಡಿದೆ. ನೀರಾವರಿ ಯೋಜನೆ ಸೇರಿದಂತೆ ತಾಲೂಕಿನ ಸಮಗ್ರ ಅಭಿವೃದ್ದಿ ಮಾಡಲು ಮತ್ತೊಮ್ಮೆ ನನಗೆ ಅವಕಾಶ ಮಾಡಿಕೊಡಬೇಕೆಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿದರು.

     ಪತ್ನಿ ಡಾ. ಸುಮಾರಂಗನಾಥ್ ಪಕ್ಷೇತ್ರವಾಗಿ ನಾಮ ಪತ್ರ ಸಲ್ಲಿಸಿರುವುದಕ್ಕೆ ಪ್ರತಿಕ್ರೀಯಿಸಿದ ಅವರು ಹೌದು ನಾಮಪತ್ರ ಸಲ್ಲಿಸಿದ್ದಾರೆ ಎಂದಷ್ಟೇ ಉತ್ತರ ನೀಡಿದರು

    ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಂಗಣ್ಣಗೌಡ, ತಾ.ಪಂ ಮಾಜಿ ಸದಸ್ಯ ಐ.ಎ.ವಿಶ್ವನಾಥ್, ಕಾಂಗ್ರೇಸ್ ಮುಖಂಡರುಗಳಾದ ಕೋಘಟ್ಟ ರಾಜಣ್ಣ, ಜೆಸಿಬಿ ರಾಜಣ್ಣ, ಬೋರೇಗೌಡ, ರೇಹಮಾನ್ ಷರೀಫ್, ಪುರಸಭೆ ಅಧ್ಯಕ್ಷ ರಂಗಸ್ವಾಮಿ, ಮಾಜಿ ಅಧ್ಯಕ್ಷ ಎಸ್.ಕೆ.ನಾಗೇಂದ್ರ, ಮಹಿಳಾ ಕಾಂಗ್ರೇಸ್ ಮುಖಂಡರಾದ ಗಾಯಿತ್ರಿ ಬಲರಾಮ್ ರಾಜು ಸೇರಿದಂತೆ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap