ಮಧುಪಾನದ ಮತ್ತಿನಲ್ಲಿ ಗಲಾಟೆ ಯುವತಿಯ ಬಂಧನ

ಭೋಪಾಲ್: 

             ಮಧುಪಾನದ ಮತ್ತಿನಲ್ಲಿ ಗಲಾಟೆ ಮಾಡುವವರ ಸಂಖ್ಯೆ ದಿನೇದಿನೆ ಎಲ್ಲಾ ಕಡೆ ಹೆಚ್ಚಾಗುತ್ತಿದ್ದು, ಇದಕ್ಕೆ ಹಿಂಬುಕೊಡುವುದಕ್ಕೆ ಈಗ ಯುವತಿಯೊಬ್ಬಳು ಕುಡಿದ ಮತ್ತಿನಲ್ಲಿ ಹೆದ್ದಾರಿಯಲ್ಲಿಯೇ ತನ್ನ ಸ್ನೇಹಿತರ ಜೊತೆ ರಾದ್ದಾಂತ ಮಾಡಿದ್ದಾಳೆ.

            ಸಿಹೋಲ್ ಹೆದ್ದಾರಿಯಲ್ಲಿ ಈ ಯುವತಿ ಕುಡಿದು ತನ್ನ ಸ್ನೇಹಿತರ ಜೊತೆ ರಾದ್ದಾಂತ ಮಾಡಿದ್ದಾಳೆ. ನಂತರ ಬಂದ ಪೊಲೀಸರ ಜೋತೆಗೂ ಯುವತಿ ವಾಗ್ವಾದ ಮಾಡಿ  ಹೆದ್ದಾರಿಯಲ್ಲಿ ಹೈಡ್ರಾಮಾ ಮಾಡಿದ್ದಾಳೆ.

                 ಹೈದರಾಬಾದ್-ಮಧ್ಯಪ್ರದೇಶ ಹೆದ್ದಾರಿಯಲ್ಲಿ ನಾಲ್ಕು ಹುಡುಗರ ಜೊತೆ ಕಾರಿನಲ್ಲಿ ಮದ್ಯ ಸೇವನೆ ಮಾಡಿ ಗಲಾಟೆ ಮಾಡುತ್ತಿದ್ದಳು. ಈ ಕುರಿತು ಮಾಹಿತಿ ತಿಳಿದ ಕೂಡಲೆ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವತಿಯನ್ನು ಬಂಧಿಸಲು ಮುಂದಾಗಿದ್ದಾರೆ. ಬಂಧನದ ವೇಳೆಯಲ್ಲಿ ನಶೆಯಲ್ಲಿ ಪ್ರಜ್ಞೆ ಕಳೆದುಕೊಂಡು ಯುವತಿ ಪೊಲೀಸರ ಮೇಲೆ ಹರಿಹಾಯ್ದಿದ್ದಾಳೆ. ಅಷ್ಟೇ ಅಲ್ಲದೇ ಪೊಲೀಸರನ್ನು ಅವಾಚ್ಯವಾಗಿ ಬೈದಿದಿದ್ದಾಳೆ.

                   ಪೊಲೀಸರು ಎಷ್ಟೆ ಪ್ರಯತ್ನ ಮಾಡಿದರು ಯುವತಿಯನ್ನು ಸುಧಾರಿಸಲು ಸಾಧ್ಯವಾಗಿಲ್ಲ. ಯುವತಿಯನ್ನು ಮನವೊಲಿಸಲು ಪೊಲೀಸರು ಮುಂದಾಗಿದ್ದಾರೆ. ಯುವತಿಯ ಈ ಹೈಡ್ರಾಮಾ ಸುಮಾರು 40 ನಿಮಿಷಗಳ ಕಾಲ ನಡೆದಿದೆ. ಈ ಹೈಡ್ರಾಮಾವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

        ಕೊನೆಗೆ ಪೊಲೀಸರು ಯುವತಿಯನ್ನು ಬಲವಂತವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

 

Recent Articles

spot_img

Related Stories

Share via
Copy link