ಮರಗಳನ್ನು ಬೆಳಸಿ :ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು

ಶಿಗ್ಗಾವಿ 

          ಮರಗಳ ಬಗ್ಗೆ ಜನರಲ್ಲಿ ತಪ್ಪು ಭಾವನೆಗಳು ಮೂಡಿವೆ, ಯಾವ ಮರಗಳು ಕೆಡಕನ್ನಂಟು ಮಾಡುವದಿಲ್ಲ, ಪ್ರತಿಯೊಂದು ಮರವು ಮನುಷ್ಯನಿಗೆ ಅನುಕೂಲವನ್ನುಂಟು ಮಾಡುತ್ತವೆ, ಆದರಿಂದ ಹೆಚ್ಚು ಹೆಚ್ಚು ಮರಗಳನ್ನು ಬೆಳಸಬೇಕು ಎಂದು ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.

           ತಾಲೂಕಿನ ಚಿಕ್ಕಮಲ್ಲೂರ ಗ್ರಾಮದಲ್ಲಿ ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಸೇವಾ ಉಪಸ್ಥಿತಿಯಲ್ಲಿ ಜರುಗಿದ ಪರಿಸರ ಸಂರಕ್ಷಣೆ ಅಭಿಯಾನದ ನಿಮಿತ್ಯೆ “ಸಸ್ಯ ಶ್ರಾವಣ” ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ ಅವರು ಪರಿಸರ ಮನುಷ್ಯನಿಗೆ ಅನುಕುಲಕರ ವಾತಾವರಣ ಕಲ್ಪಿಸುತ್ತದೆ ಹಾಗೂ ಬದುಕಿಗೆ ಅವಶ್ಯವಾಗಿದೆ, ಆದರೆ ಇಂದು ಮನುಷ್ಯ ತನ್ನ ಸ್ವಾರ್ಥ ಸಾಧನೆಗೆ ಅರಣ್ಯಗಳನ್ನು ನಾಶ ಪಡಿಸಿ ನಿಸರ್ಗದ ವಿರುದ್ದ ಹೊಗುತ್ತಿದ್ದಾನೆ ಇದರಿಂದ ಮುಂದಿನ ದಿನಗಳಲ್ಲಿ ಬಹು ದೊಡ್ಡ ಪರಿಣಾಮವನ್ನು ಏದುರಿಸಬೇಕಾಗುತ್ತೆ, ಆದರಿಂದ ಇಂದೇ ನಾವೆಲ್ಲರೂ ಹೆಚ್ಚು ಮರಗಳನ್ನು ಬೆಳಸಿ ಮುಂದಿನ ಪೀಳಿಗೆಗೆ ಉತ್ತಮ ನಿಸರ್ಗವನ್ನು ನಿರ್ಮಿಸುವಂತ ಕೆಲಸ ಮಾಡಬೇಕಿದೆ ಅದನ್ನು ಅರಿತು ಶ್ರಾವಣದ ಮಾಸ ಉತ್ತಮ ದಿನಗಳಲ್ಲಿ ಇಂತಹ ಕಾರ್ಯವನ್ನು ಹಮ್ಮಿಕೊಂಡಿದ್ದೆವೆ, ಎಲ್ಲರೂ ಒಂದು ಸಸಿಯನ್ನು ಪಡೆದು ಅದರ ಜೋತೆ ತಾವು ಸಹ ಕನಿಷ್ಟ 5 ಮರಗಳನ್ನು ಬೆಳಸಬೇಕು ಎಂದು ಹೇಳಿದರು.

          ಕರ್ನಾಟಕ ಪತ್ರಕರ್ತರ ಸಂಘದ ತಾಲೂಕಾ ಅಧ್ಯಕ್ಷ ರವಿ ಉಡಪಿ ಮಾತನಾಡಿ ಇಂದು ಅರಣ್ಯ ನಾಶದಿಂದ ನಿಸರ್ಗದಲ್ಲಿ ಮನುಷ್ಯನ ಜೀವನದ ವಿರುದ್ದವಾದ ಚಟುವಟಿಕೆಗಳು ನಡೆಯುತ್ತಿವೆ, ಗಾಳಿ ಬಿಸುವ ದಿಕ್ಕನ್ನು ಬದಲಾಯಿಸಿದೆ ಭೂಕಂಪ, ಚಂಡಮಾರುತ, ಪ್ರವಾಹದಂತ ಘಟನೆಗಳು ಜರುಗುತ್ತಿವೆ ಇವೆಲ್ಲವುಗಳಿಂದ ಪಾರಾಗಲು ಒಂದೇ ಮಾರ್ಗ ಅದು ಗಿಡಗಳನ್ನು ಬೆಳೆಸುವದು ಪ್ರಕೃತಿಯನ್ನು ನಾವು ಸಂರಕ್ಷಿಸಿದರೆ ಮಾತ್ರ ಜೀವ ಸಂಕುಲ ಸಸ್ಯ ಸಂಕುಲ ನಮ್ಮನ್ನು ಸಂರಕ್ಷಿಸುತ್ತದೆ ಇಲ್ಲವಾದರೆ, ಈ ಭೂಮಿಯಿಂದ ಜೀವ ವೈವಿದ್ಯಗಳು ನಿಧಾನವಾಗಿ ಕಣ್ಮರೆಯಾಗುತ್ತವೆ ಎಂದರು.

               ಕಾರ್ಯಕ್ರಮದಲ್ಲಿ ಕೃಷಿ ಸಂಶೋಧಕ ಎಸ್ ಎಸ್ ದೇಸಾಯಿ, ಗ್ರಾಮದ ಮುಖಂಡರಾದ ಮುಪ್ಪಯ್ಯ ಹಿರೇಮಠ ಮಾತನಾಡಿದರು.ಹಿರಿಯ ವರದಿಗಾರ ಗೂಳಪ್ಪ ಅರಳಿಕಟಿ, ಕರ್ನಾಟಕ ಪತ್ರಕರ್ತರ ಸಂಘದ ತಾಲೂಕಾ ಉಪಾಧ್ಯಕ್ಷ ಬಸವರಾಜ ಹೊಣ್ಣನವರ, ಕಾರ್ಯದರ್ಶಿ ವಿಶ್ವನಾಥ ಬಂಡಿವಡ್ಡರ, ಸದಸ್ಯರಾದ ಮಂಜುನಾಥ ಕಮ್ಮಾರ, ಸುಧಾರಕ ದೈವಜ್ಞ ಗ್ರಾಪಂ ಸದಸ್ಯರಾದ ವೀರಭದ್ರಪ್ಪ ತೊಂಡೂರ, ಗ್ರಾಮದ ಮುಖಂಡರಾದ ದ್ಯಾಮನಗೌಡ ಹೊನ್ನಿಗೌಡ್ರ, ಶಿವಾನಂದಪ್ಪ ಗಂಜಿಗಟ್ಟಿ, ಈಶ್ವರಗೌಡ ಹೊನ್ನಿಗೌಡ್ರ, ನೀಲಕಂಟಗೌಡ ಕಂಕನವಾಡ, ಯಲ್ಲಪ್ಪ ನೀಲಮ್ಮನವರ, ಹಿರೆಗೌಡ ಪಾಟೀಲ್, ಬಸವರಾಜ ಕುಂದೂರ ಸೇರಿದಂತೆ ಗ್ರಾಮಸ್ಥರು ಹಾಗೂ ಮಠದ ಭಕ್ತಾಧಿಗಳು ಉಪಸ್ಥಿತರಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap