ಭೀಮಸಮುದ್ರ :
ಭೀಮಸಮುದ್ರ ಸಮೀಪ ಸಿಂಗಾಪೂರ ಗ್ರಾಮದಲ್ಲಿ ವಿದ್ಯುತ್ ಕಂಬವೊಂದು ಮಳೆ ಗಾಳಿ ಕಾರಣ 3-4 ದಿನದ ಹಿಂದೆ ಧರೆಗುಳಿದ್ದು ಸಿಂಗಾಪೂರ ,ಹುಲ್ಲೂರು, ಜಾನಕೊಂಡ ಓಡಾಡುವ ರಸ್ತೆ ಪಕ್ಕದಲ್ಲಿ ಉರುಳಿದ್ದು ಜನರಿಗೆ ಭಯ ಉಂಟು ಮಾಡಿದೆ, ಶಾಲಾ ಮಕ್ಕಳು , ಜಾನುವಾರುಗಳು ಈ ರಸ್ತೆಯಲ್ಲಿ ಸಂಚಾರಿಸುತ್ತಾರೆ, ಇದರ ಬಗ್ಗೆ ಕೆ.ಇ.ಬಿ ಮಾಹಿತಿ ನೀಡಿದರು ಇದರ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕಂಬ ಬಿದ್ದಿರುವ ಸಮೀಪ 4-5 ಮನೆಗಳಿದ್ದು ಸುಮಾರು 4-5 ದಿನಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ, ಶಾಲಾ ಮಕ್ಕಳಿಗೆ ಓದಲು ತೊಂದರೆಯಾಗುತ್ತಿದೆ ಇಂದು ಗ್ರಾಮಸ್ಥರು ತಿಳಿಸಿದ್ದಾರೆ, ಜಾನುಕೊಂಡದ ವಿದ್ಯುತ್ ಕೇಂದ್ರದ ಅಧಿಕಾರಿ ಎಸ್.ಓ ಜಯಣ್ಣನವರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು, ಇದರ ಬಗ್ಗೆ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಶೇಖರ್ ಮಾತನಾಡಿ ರಸ್ತೆಯ ಬದಿಯಲ್ಲಿ ಬಿದ್ದಿರುವ ಕಂಬ ಜನರಿಗೆ ಓಡಾಡಲು ಭಯ ಉಂಟುಮಾಡಿದೆ, ಇದರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಸಹ ನಿರ್ಲಕ್ಷಿಸಿದ್ದಾರೆ, ಊರಿನಲ್ಲಿ ಶುಧ್ದ ಕುಡಿಯವ ನೀರಿನ ಘಟಕ ಇದರ ಪಕ್ಕದಲ್ಲಿ ಇದ್ದು , ಶುದ್ದ ಕುಡಿಯವ ನೀರು ಘಟಕ್ಕೆ ತೊಂದರೆಯಾಗಿದೆ, ಇದರ ಬಗ್ಗೆ ಅಧಿಕಾರಿಗಳು ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
