ಮಳೆಯ ಆರ್ಭಟಕ್ಕೆ ಧರೆಗುರುಳಿದ ಮರಗಳು.

ಕೊಟ್ಟೂರು:

    ತಾಲ್ಲೂಕಿನದ್ಯಾಂತ ಶನಿವಾರ ಸಂಜೆ ಬಿರುಗಾಳಿ ಮತ್ತು ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಗೆ, ಪಟ್ಟಣದಲ್ಲಿ ಕೆಲವೆಡೆ ಬೃಹತ್ ಗಾತ್ರದ ಮರಗಳು ನೆಲಕ್ಕುರಿಳಿ ಬಿದ್ದಿವೆ.

     ಬಿರುಗಾಳಿ ಆರ್ಭಟಕ್ಕೆ ಮಳೆಯ ರಬ್ಬಸಕ್ಕೆ ಪಟ್ಟಣದ ಕೂಡ್ಲಿಗಿ ರಸ್ತೆಯ ಅಂಬೇಡ್ಕರ್ ನಗರದಲ್ಲಿರುವ ಸುಮಾರು ಎರಡು ತಲೆಮಾರಿ ಹಳೆಯ ಬಸಲಿ ಮರದ ಕೊಂಬೆಗಳು ಮುರಿದು ಬಿದ್ದ ಪರಿಣಾಮ ವಿದ್ಯುತ್ ತಂತಿಗಳು ತುಂಡಾಗಿವೆ.ಆದರೆ ಯಾವುದೇ ಅನಾಹುತಗಳು ಸಂಭವಿಸಿಲ್ಲ.

    ಪಟ್ಟಣದ ಹ್ಯಾಳ್ಯಾ ರಸ್ತೆ ಮತ್ತು ಕೂಡ್ಲಿಗಿ ರಸ್ತೆಯ ಅಂಬೇಡ್ಕರ್ ನಗರದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಗಳು ಕಿತ್ತು ಹೋಗಿದ್ದು, ಅಡುಗೆ ಸಾಮಾನುಗಳು ಜಖಂ ಗೊಂಡಿವೆ. ಭಾಗ್ಯಮ್ಮ ಎಂಬ ಮಹಿಳೆಗೆ ತಗಡು ತಗುಲಿ ಗಾಯಗೊಂಡಿದ್ದಾರೆ.ವಿಷಯ ತಿಳಿಯುತ್ತದಂತೆ ಸ್ಥಳಕ್ಕಾಗಮಿಸಿದ ತಹಶಿಲ್ದಾರ್ ಅನಿಲ್ ಕುಮಾರ್,ಪಿ.ಎಸ್.ಐ ಕಾಳಿಂಗ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹೆಚ್.ಎಫ್ ಬಿದಿರಿ, ಕಾಲೋನಿ ಯುವಕರ ಸಹಾಯದಿಂದ ಬಿದ್ದ ಮರಗಳ ತೆರವು ಕಾರ್ಯಚರಣೆ ರಾತ್ರಿ ಇಡಿ ಮುಂದುವರಿಸಿದರು.

     ಕೊರೊನಾ ವೈರಸ್ ಲಾಕ್ ಡೌನ್ನಿಂದ ಸಂಕಷ್ಟಕಿಡಗಿರುವ ಕಾಲೋನಿಯ ಬಡ ಕೂಲಿಕಾರ ಜನರ ಬದುಕಿನ ಮೇಲೆ ಮಳೆರಾಯನ ವಕ್ರ ದೃಷ್ಟಿ ಬೀರಿದಂತಾಗಿ ಅವರನ್ನು ನಿದ್ದೆಗೆಡಿಸಿ ಮತ್ತಷ್ಟು ಚಿಂತೆಗೆಡುಮಾಡಿದೆ. ದಯವಿಟ್ಟ ಸಹಾಯ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದರು.

     ನಂತರ ತಹಶಿಲ್ದಾರ್ ಜಿ.ಅನಿಲ್ ಕುಮಾರ್ ಮಾತನಾಡಿ ನಿಮ್ಮ ಪರಿಸ್ಥಿತಿ ಅರ್ಥ ಅಗುತ್ತೆ. ಪಟ್ಟಣ ಸೇರಿ ತಾಲೂಕು ವ್ಯಾಪ್ತಿಯಲ್ಲಿ ಯಾರೆಲ್ಲಾ ಮನೆಗಳು ಹಾನಿಯಾಗಿವೆ ಅವರಿಗೆ ಸಕಾಲದಲ್ಲಿ ಸರ್ಕಾರದಿಂದ ಪರಿಹಾರವನ್ನು ನೀಡುತ್ತೇವೆ. ಯಾರು ಭಯ ಪಡುವ ಅವಶ್ಯಕತೆ ಎಂದು ಭರವಸೆ ನೀಡಿದರು.

     ಇನ್ನು ಪಟ್ಟಣದ ಗಾಂಧಿ ಸರ್ಕಲ್ ಬಳಿಯ ಬ್ಯಾರಿಕೇಟ್‍ಗಳು ದಿಕ್ಕಿಗೊಂದು ಮಲಗಿವೆ,ಇಟಗಿ ರಸ್ತೆಯಲ್ಲಿ ಶೆಡ್‍ಗಳ ಮುಂದಿನ ನರಳು ವದಿಕೆಗಳು ಗಾಳಿ ಕಿತ್ತುಹೋಗಿವೆ. ತೇರುಬಯಲು, ಸರ್ಕಾರಿ ಬದ್ ನಿಲ್ದಾಣ, ಬಯಲು ಬಸವೇಶ್ವರ ದೇವಸ್ಥಾನದ ಆವರಣ ಜಲಾವೃತಗೊಂಡಿದೆ.

    ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಹಾಲಸ್ವಾಮಿ, ಗ್ರಾಲೆಕ್ಕಾಧಿಕಾರಿ ಮಲ್ಲೇಶ, ಆರೋಗ್ಯ ನಿರೀಕ್ಷಕಿ ಅನುಷ, ಹೇಮನಗೌಡ, ಅಯ್ಯನಳ್ಳಿ ಪರುಸಪ್ಪ ತೆರವು ಕಾರ್ಯದಲ್ಲಿ ಜೊತೆಗಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link