ಹಾವೇರಿ:
ಮಹದಾಯಿ ಯೋಜನೆ ಜಾರಿಗೆ ಸಂಬಂಧ ಕೇಂದ್ರ ಸರಕಾರ ಅಧೀಸೂಚನೆ ಹೊರಡಿಸಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಎಚ್.ಕೋನರೆಡ್ಡಿ ಒತ್ತಾಯಿಸಿದರು.
ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹದಾಯಿಗೆ ಸಂಬಂಧ ಕೇಂದ್ರ ನಿರ್ಲಕ್ಷ ಭಾವನೆ ಹೊಂದಿದೆ. ಕೇಂದ್ರ ಸರಕಾರ ಅಧೀಸೂಚನೆ ಹೊರಡಿಸಿದ ಹೊರತು ಅಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳುವಂತಿಲ್ಲ. ಮಹದಾಯಿ ವಿಚಾರಕ್ಕೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳು ಪ್ರಧಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಶೀಘ್ರದಲ್ಲಿ ಅಧೀಸೂಚನೆ ಹೊರಡಿಸುವಂತೆ ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ತಿಳಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರ ಬಗ್ಗೆ ಮಾತನಾಡುವಾಗ ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆತ್ಮಾವಲೋಕನ ಮಾಡಿಕೊಳ್ಳಬೇಕು. ದೇವೆಗೌಡ್ರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಜೀವನವನ್ನು ರೈತರ ಏಳೀಗೆಗಾಗಿ ಮೀಸಲು ಇಟ್ಟಿದ್ದಾರೆ.ಅವರ ಬಗ್ಗೆ ಲಘುವಾಗಿ ಮಾತನಾಡುವದು ಬಿಎಸ್‍ವೈ ಶೋಭೆ ತರುವುದಿಲ್ಲ ಎಂದು ತಿಳಿಸಿದರು.
ಅಧಿಕಾರಕ್ಕೆ ಬಂದು ರೈತರ ಮೇಲೆ ಗೋಲಿಬಾರ ಮಾಡಿದ ಬಿಎಸ್‍ವೈ ಅವರಿಗೆ ದೇವೆಗೌಡರ ಕುರಿತು ಮಾತನಾಡುವ ನೈತಿಕ ಹಕ್ಕಿಲ್ಲ. ಮುಖ್ಯಮಂತ್ರಿಗಳು ಪ್ರಣಾಳಿಕೆಯಲ್ಲಿ ಮಾತು ಕೊಟ್ಟಂತೆ ರೈತರ ಸಾಲ ಮನ್ನಾ ಮಾಡೇ ತಿರುತ್ತಾರೆ. ಆದರೆ, ಬಿಎಸ್‍ವೈ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಾಲ್ಕುವರೆ ವರ್ಷಗಳಲ್ಲಿ ಏಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ ಎಂದು ಜನತೆಗೆ ತಳಿಸಲಿ ಎಂದು ಒತ್ತಾಯಿಸಿದರು.
ಬರಿ ಜೆಡಿಎಸ್‍ನಲ್ಲಿ ಮಾತ್ರ ಕುಟುಂಬ ರಾಜಕಾರಣವಿಲ್ಲ. ಎಲ್ಲ ರಾಜಕೀಯ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಸಕ್ರೀಯವಾಗಿದೆ. ಬಿಜೆಪಿ ಅವರಿಗೆ ಬರಿ ದೇವೆಗೌಡ್ರ ಕುಟುಂಬದವರ ಮೇಲೆ ಮಾತ್ರ ಕಣ್ಣು ಬಿದ್ದಿದೆ. ಯಾಕೆ ಸ್ವಾಮೀ ಬಿಎಸ್‍ವೈ ಪುತ್ರರು, ಉದಾಸಿ ಪುತ್ರ ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ ಎಂದು ತರಾಟೆ ತೆಗೆದುಕೊಂಡರು.
ಬಿಜೆಪಿ ಅವರಿಗೆ ಅಧಿಕಾರ ದುರಾಶ ಹೆಚ್ಚಾಗಿದೆ. ಹೇಗಾದರು ಮಾಡಿ ಅಧಿಕಾರಕ್ಕೆ ಬರಬೇಕು ಎಂಬ ಹುಂಬುತನದಿಂದ ಇಲ್ಲ-ಸಲ್ಲದ ಸುಳ್ಳುಗಳನ್ನು ಹೇಳಿಕೊಂಡು ತಿರುಗುತ್ತಿದ್ದಾರೆ. ಆಪರೇಷನ್ ಕಮಲ ಮಾಡಲ್ಲ ಎಂದವರು, ಪ್ರಧಾನಿ ಸಮಾವೇಶದಲ್ಲಿ ಜಾದವ್ ಅವರನ್ನು ಆಪರೇಷನ್ ಮಾಡಿ, ಪಕ್ಷಕ್ಕೆ ಸೇರಿಸಿಕೊಂಡರು. ಬಿಜೆಪಿ ಅವರಿಗೆ ಯಾವ ನೈತೀಕತೆ ಇದೆ ಎಂದು ರಾಜ್ಯ ಸರಕಾರ ವಿರುದ್ಧ ಮಾತನಾಡುತ್ತಾರೆ ಎಂದು ತರಾಟೆ ತೆಗೆದುಕೊಂಡರು.
ಈ ಸಮಯದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಶೋಕ ಬೇವಿನಮರ, ಡಾ. ಸಂಜಯ ಡಾಂಗೆ, ಶ್ರೀಪಾದ ಸಾಹುಕಾರ, ಉಮೇಶ ತಳವಾರ, ಮಾಲತೇಶ ಬೇವಿನಹಿಂಡಿ ಸೇರಿದಂತೆ ಮುಂತಾದವರು ಹಾಜರಿದ್ದರು.