ಮಹಾನ್ ವ್ಯಕ್ತಿಗಳ ಹಾದಿಯಲ್ಲಿ ನಡೆಯುವುದೇ ಅವರಿಗೆ ಸಲ್ಲಿಸುವ ಗೌರವ : ಎನ್.ಎಂ.ಸುರೇಶ್

ತಿಪಟೂರು :

              ತಾಲ್ಲೂಕು ಆಡಳಿತದ ವತಿಯಿಂದಿ ಇಂದು ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದ ತಾ.ಪಂ ಅಧ್ಯಕ್ಷರಾದ ಎನ್.ಎಂ. ಸುರೇಶ್ ಸರ್ಕಾರವು ಮಹಾನ್ ವ್ಯಕ್ತಿಗಳ ಜನ್ಮದಿನವನ್ನು ಆಚರಿಸುವ ಉದ್ದೇವೇ ಅವರ ಮಾರ್ಗದಲ್ಲಿ ಎಲ್ಲರೂ ನಡೆದು ಸಮಾಜದ ಒಳಿತಿಗಾಗಿ ಶ್ರಮಿಸುವುದಾಗಿದೆ ಎಂದು ತಿಳಿಸಿದರು.

               ಸಮಾರಂಭದಲ್ಲಿ ಮಾತನಾಡಿದ ಶಾಸಕ ಬಿ.ಸಿ.ನಾಗೇಶ್, ವಿಶ್ವದ ಅಣುರೇಣು ತೃಣಕಾಷ್ಟವನ್ನು ಸೃಷ್ಠಿಸಿದವರೇ ವಿಶ್ವಕರ್ಮರು. ಇಂದು ನಮ್ಮಲ್ಲಿರುವ ಸೃಜನಶೀಲತೆಯು ಬೆಳಕಿಗೆ ಬಂದಾಗ ಆಗುವ ಸಂತೋಷವೇ ಬೇರೆ. ಅದೇ ರೀತಿ ಇಂದು ಬದಲಾಗುತ್ತಿರುವ ವಿಶ್ವದಲ್ಲಿ ನಮಗೆ ಬೇಕಾದಂತಹ ವಸ್ತುಗಳನ್ನು ತಮ್ಮ ಸೃಜನಶೀಲತೆಯಿಂದ ವಿರ್ಶವಕರ್ಮ ಜನಾಂಗದವರು ಇಂದು ನಮ್ಮೆಲ್ಲರ ಅಗತ್ಯತೆಯನ್ನು ಪೂರೈಸುತ್ತಿದ್ದಾರೆ. ವಿಶ್ವದಲ್ಲಿರುವ ಎಲ್ಲಾವಿಷಯಗಳನ್ನು ನಾವು ತೆಗೆದುಕೊಂಡು ಒಳ್ಳೆಯ ವಿಷಯಗಳನ್ನು ಮಾತ್ರ ಪಸರಿಸಿದರೆ ಸದೃಡ ಸಮಾಜವು ನಿರ್ಮಾಣವಾಗುತ್ತದೆಂದರು.

                 ಸಮಾರಂಭದಲ್ಲಿ ಉಪನ್ಯಾಸ ನೀಡಿದ ಸತೀಶ್‍ರವರು ಗುರು ಬ್ರಹ್ಮ, ಗುರುರ್ ವಿಷ್ಣು, ಗುರುದೇವೋ ಮಹೇಶ್ವರಹ, ಗುರುಸಾಕ್ಷಾತ್ ಪರಬ್ರಹ್ಮ ಇಲ್ಲಿ ನಾವು ಗಮನಿಸುವಂತೆ ಪರಬ್ರಹ್ಮ ಎಂದರೆ ನಮ್ಮ ವಿಶ್ವಕರ್ಮ ಗುರುಗಳು. ಪ್ರಪಂಚದಲ್ಲಿ ಎಲ್ಲವನ್ನು ಸೃಷಿಸಿದ ವಿಶ್ವಕರ್ಮರೆ ಸಮಾಜದ ನಿಜವಾದ ನಿರ್ಮಾತೃಗಳು, ಇವರಿಂದಲೇ ಇಂದು ನಾಗರೀಕತೆಯು ಬೆಳದಿರುವುದು. ಇದಕ್ಕೆ ಕೆಲವು ಉದಾಹರಣೆ ಎಂದರೆ ಬೇಲೂರಿನ ಚನ್ನಕೇಶವ, ಹಳೇಬೀಡು, ಹಂಪಿಯ ದೇವಾಲಯಗಳ ಉದಾಹರಣೆಯೊಂದಿಗೆ ಯಾವುದೇ ತಂತ್ರಜ್ಞಾನ, ಯಂತ್ರೋಪಕರಣಗಳೂ ಇಲ್ಲದೇ ಇರುವಂತಹ ಸಂದರ್ಭದಲ್ಲಿ ಅವರು ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ಮಕರಸಂಕ್ರಾಂತಿಯ ದಿನ ಸೂರ್ಯರಶ್ಮಿ ಗರ್ಭಗುಡಿಯಲ್ಲಿನ ಚನ್ನಕೇಶವನ ಪಾದವನ್ನು ಸ್ಪರ್ಶಿಸುತ್ತದೆ, ಅದೇ ರೀತಿ ನಮ್ಮ ಶಿಲ್ಪಿಗಳ ಇನ್ನೋಂದು ಕೊಡುಗೆ ಎಂದಾದರೆ ಹಂಪೆಯ ಹಜಾರರಾಮನ ದೇವಾಲಯದ ಸಂಗೀತ ಮಹಲ್‍ನಲ್ಲಿ ಕಲ್ಲಿನಿಂದ ಹೊರಹೊಮ್ಮವ ಸ್ವರಗಳು ಹಾಗೂ ಕಲ್ಲಿನರಥ ಅವರ ಸೃಜನಶೀಲತೆ, ಕಲಾನೈಪುಣ್ಯತೆ ಅವರ ತಂತ್ರಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ. ಅವರ ಈ ತಂತ್ರಜ್ಞಾನವನ್ನು ಅರಿಯಲು ವಿದೇಶಗಳಿಂದ ಅನೇಕ ವಿದ್ವಾಂಸರುಗಳು ಆಗಮಿಸುತ್ತಿದ್ದಾರೆ ಇದುವರೆಗೂ ಅವರ ತಂತ್ರಜ್ಞಾನವನ್ನು ತಿಳಿಯಲು ಸಾಧ್ಯವಾಗಿಲ್ಲ ಆಗಿದ್ದರೆ ಇಂತಹ ಅನೇಕ ಕಟ್ಟಡಗಳನ್ನು ಅವರು ನಿರ್ಮಿಸುತ್ತಿದ್ದರು ಎಂದು ತಿಳಿಸಿದರು.

               ಕಾರ್ಯಕ್ರಮದಲ್ಲಿ ತಾಲ್ಲೂಕು ದಂಡಾಧಿಕಾರಿ ಡಾ.ಮಂಜುನಾಥ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಷಡಕ್ಷರಿ, ವಿಶ್ವಕರ್ಮ ಸಮಾಜದ ಮುಖಂಡರಾದ ಮಂಜುನಾಥ್, ಭಾಸ್ಕರ್, ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು, ತಾಲ್ಲೂಕು ಕಛೇರಿಯ ಸಿಬ್ಬಂದಿ ವರ್ಗದವರು ಮುಂತಾದವರು ಉಪಸ್ಥಿತರಿದ್ದರು.
  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link