ಹಾವೇರಿ :
ಜಿಲ್ಲೆಯ ವರದಾಹಳ್ಳಿ ಗ್ರಾಮದ ಗುಡ್ಡಪ್ಪ ತಿರಕಪ್ಪ ಸೂರದ ಅವರ ಹೊಲದಲ್ಲಿ ಮಹಿಕೋ ಕಂಪನಿಯ ಹೊಸ ತಳಿಯಾದ ಧನದೇವ ಪ್ಲೆಸ್ ತಳಿಯ ಕ್ಷೇತ್ರೋತ್ಸವ ಜರುಗಿತು. ಕಂಪನಿಯ ಅಧಿಕಾರಿಯಾದ ನಾಗರಾಜ ಪಾಟೀಲ್ ಮಾತನಾಡಿ ಈ ತಳಿಯ ದೊಡ್ಡಕಾಯಿ ಹೊಂದಿದ್ದು, ಅಧಿಕ ಇಳುವರಿ ಕೊಡುವ ಶಕ್ತಿ ಇದೆ ಮತ್ತು ಗುಲಾಬಿ ಕಾಯಿಕೊರಕದ ಮಾಹಿತಿ ರೈತರಿಗೆ ನೀಡಿದರು. ಸ್ಥಳೀಯ ಅಧಿಕಾರಿ ಯಾದ ಸಭಾಸ ಸೂರದ ಮಾತನಾಡಿ ರೈತರಿಗೆ ಹತ್ತಿ ತಳಿಯಬಗ್ಗೆ ಮಾಹಿತಿ ನೀಡಿದರು. ಈ ಸಂಧರ್ಭದಲ್ಲಿ ಎಚ್ ಎಸ್ ಸುರದ. ನೀಲಪ್ಪ. ಅವಕ್ಕನವರ ಚನ್ನಬಸಪ್ಪ ಸೂರದ. ಸಂಜು ರೆಡ್ಡಿ.ಶಿವರುದ್ರಪ್ಪ ಕಲ್ಲುರ.ವರದಾಹಳ್ಳಿ ನಾಗನೂರ ಕೂಡಲ ಗ್ರಾಮದಿಂದ ನೂರಾರು ರೈತರು ಹತ್ತಿ ಹೊಲವನ್ನು ವೀಕ್ಷಣೆ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ