ಮಾಧ್ಯಮದವರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಚಿತ್ರದುರ್ಗ;
            ವಿಜಯಪುರ ನಗರದ ಹೊರವಲಯದಲ್ಲಿ ಐ.ಆರ್.ಬಿ. ಪೋಲೀಸ್ ಕ್ಯಾಂಪಸ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಖಾಸಗಿ ಸುದ್ಧಿ ವಾಹಿನಿಯ ಕ್ಯಾಮರಮ್ಯಾನ್ ಸುರೇಶ್ ಚಿನಗುಂಡಿರವರ ಮೇಲೆ ಬಸವರಾಜ್ ಒಡ್ಡರ್ ಹಾಗೂ ಐ.ಆರ್.ಬಿ. ಪೋಲೀಸರು ಕ್ಷುಲ್ಲಕ ಕಾರಣಕ್ಕೆ ಅಮಾನವೀಯವಾಗಿ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನೆಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
              ಪತ್ರಿಕಾ ಭವನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಾಧ್ಯಮದವರ ಮೇಲೆ ಹಲ್ಲೆ, ದೌರ್ಜನ್ಯ, ಕೊಲೆ ಮಾಡುವಂತಹ ಹೀನ ಪವೃತ್ತಿ ನಡೆಯುತ್ತಿದ್ದು, ಇಂತಹ ಘಟನೆಗಳನ್ನು ಪ್ರಜ್ಞಾವಂತ ಮಾಧ್ಯಮದವರು ತೀವ್ರವಾಗಿ ಖಂಡಿಸಬೇಕೆಂದರು.
             ಕಳೆದ ಒಂದು ವರ್ಷದ ಹಿಂದೆ ಪತ್ರಕರ್ತೆ ಗೌರಿಲಂಕೇಶ್‍ಅವರನ್ನು ಹತ್ಯೆ ಮಾಡಲಾಗಿದ್ದು, ಇಂತಹ ಸಾಮಾಜಿಕ ದುಷ್ಕøತ್ಯಗಳು ಪುನಃ ಪುನಃ ಮರುಕಳುಹಿಸುತ್ತಿದ್ದು ಇಂತಹ ಘಟನಾವಳಿಗಳಿಂದಾಗಿ ಮಾಧ್ಯಮದವರು ನಿರ್ಭಯವಾಗಿ ಕೆಲಸ ಮಾಡುವಂತಹ ವಾತಾವರಣ ಇಲ್ಲದಂತಾಗಿದೆ. ರಾಜ್ಯ ಮತ್ತು ದೇಶದಲ್ಲಿ ಯಾರೇ ಪತ್ರಕರ್ತರ ಮೇಲೆ ನಡೆಯುವ ಹಲ್ಲೆ ಮತ್ತು ಹತ್ಯೆಯಂತಹ ಘಟನಾವಳಿಗಳು ತೀವ್ರ ಖಂಡನೀಯವಾಗಿರುತ್ತದೆ ಎಂದರು.
            ವಿಜಯಪುರದಲ್ಲಿ ಮಾಧ್ಯಮದ ಕ್ಯಾಮರಮ್ಯಾನ್ ಮೇಲೆ ನಡೆದಿರುವ ಹಲ್ಲೆಯು ಪತ್ರಕರ್ತರ ಮಧ್ಯೆ ಅತಂಕವನ್ನು ಉಂಟು ಮಾಡಿದ್ದು ಹಲ್ಲೆಯಂತಹ ಘಟನೆಯಲ್ಲಿ ಭಾಗಿಯಾಗಿರುವ ಪೋಲೀಸರನ್ನು ಅಮಾನತ್ತುಗೊಳಿಸಿ ಕಾನೂನು ಕ್ರಮ ತೆಗೆದುಕೊಳ್ಳುವುದರೊಂದಿಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
               ಮಾಧ್ಯಮದವರ ಮೇಲಿನ ಹಲ್ಲೆ ಖಂಡಿಸಿ ನಡೆಸಲಾದ ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ನರೇನಹಳ್ಳಿ ಅರುಣ್‍ಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್. ಲಕ್ಷ್ಮಣ್, ಉಪಾಧ್ಯಕ್ಷ ಡಿ. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ದಿನೇಶ್‍ಗೌಡಗೆರೆ, ಕಾರ್ಯದರ್ಶಿ ರಾಮಸ್ವಾಮಿ, ನಿರ್ದೇಶಕರುಗಳಾದ ವಿರೇಶ್ ವಿ. ಚಳ್ಳಕೆರೆ., ಸಿ.ಪಿ. ಮಾರುತಿ, ಮಹಾಂತೇಶ್, ವಿನಯ್ ಜಿ.ಕೆ., ಹಿರಿಯ ಪತ್ರಕರ್ತ ಟಿ.ಕೆ. ಬಸವರಾಜ್, ಟಿ.ವಿ. ಮಾಧ್ಯಮದ ವರದಿಗಾರರಾದ ಪ್ರೇಮ್‍ಪುಟ್ಟುಸ್ವಾಮಿ, ಅಂಜಿನಪ್ಪ, ಮಂಜುನಾಥ್, ಶಿವರಾಜ್, ಮಂಜುನಾಥ್, ತಿಪ್ಪೇಸ್ವಾಮಿ, ನಾಗರಾಜ್, ವಿನಯ್ ಪಾಲೇಕರ್, ಗಜಾನಂದ, ಶಿವರಾಜ್ ಇಳಿಗೆರೆ ಇನ್ನು ಅನೇಕ ಪತ್ರಕರ್ತರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link