ಮಾರಿಕಾಂಬಾ ದೇವಸ್ಥಾನದ ಹುಂಡಿ ಕಳವು

ಚಳ್ಳಕೆರೆ

        ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಗ್ರಾಮದ ಮಧ್ಯಭಾಗ ಹಾಗೂ ರಸ್ತೆಯ ಪಕ್ಕದಲ್ಲೇ ಇರುವ ಶ್ರೀಮಾರಿಕಾಂಬಾ ದೇವಸ್ಥಾನದ ದೇವರ ಹುಂಡಿಯನ್ನು ಯಾರೋ ಕಳ್ಳರು ಶನಿವಾರ ರಾತ್ರಿ ಕಳ್ಳತನ ಮಾಡಿರುವ ಘಟನೆ ನಡೆಸಿದೆ.

        ಭಾನುವಾರ ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ಬಂದ ಭಕ್ತರು ದೇವಸ್ಥಾನದ ಒಳಭಾಗದ ಕಂಬಕ್ಕೆ ಹುಂಡಿ ಡಬ್ಬವನ್ನು ಕಬ್ಬಿಣ ಸರಪಳಿಯಿಂದ ಬಿಗಿಗೊಳಿಸಿದ್ದು, ಕಳೆದ ಹಲವಾರು ವರ್ಷಗಳಿಂದ ಹುಂಡಿ ಇದೇ ಜಾಗದಲ್ಲಿ ಇದ್ದು, ಎಂದೂ ಯಾವುದೇ ಕಳ್ಳತನವಾಗಿರಲಿಲ್ಲ ಎಂದು ಗ್ರಾಮದ ಮುಖಂಡ ಮಾರಣ್ಣ ತಿಳಿಸುತ್ತಾರೆ. ಆದರೆ, ಕಳ್ಳತನವಾದ ಹುಂಡಿಯಲ್ಲಿ ನಿಖರವಾಗಿ ಎಷ್ಟು ಹಣವಿತ್ತು ಎನ್ನವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಳ್ಳರು ಹುಂಡಿಯನ್ನು ಹೊತ್ತುಕೊಂಡು ಹೋಗಿದ್ದು, ಪೊಲೀಸರು ಇನ್ನು ಈ ಬಗ್ಗೆ ಗಮನಹರಿಸಬೇಕಿದೆ.

        ಆದರೆ, ಭಾನುವಾರ ಬೆಳಗ್ಗೆ ದೇವಸ್ಥಾನದ ಹುಂಡಿ ಕಳ್ಳತನ ಸುದ್ದಿ ಗ್ರಾಮದಲ್ಲಿ ಹರಡಿ ಗ್ರಾಮದ ಅನೇಕರು ಬಂದು ದೇವಸ್ಥಾನದ ಹುಂಡಿಯೇ ಕಳ್ಳತನವಾದ ಬಗ್ಗೆ ಕಳವಳವನ್ನು ವ್ಯಕ್ತ ಪಡಿಸಿದರು. ದೇವಸ್ಥಾನದ ಹುಂಡಿ ಕಳ್ಳತನವಾದ ಬಗ್ಗೆ ಚಳ್ಳಕೆರೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ಧಾರೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link