ಕಾನೂನು ಅರಿವು-ನೆರವು ಕಾರ್ಯಕ್ರಮ

0
11

ಚಿತ್ರದುರ್ಗ;

      ಕಕ್ಷಿದಾರರು ನ್ಯಾಯವನ್ನು ಪಡೆಯುವ ಸಲುವಾಗಿ ನ್ಯಾಯಾಲಯಕ್ಕೆ ಬಂದಾಗ ಅವರಿಗೆ ಶೀಘ್ರವಾಗಿ ನ್ಯಾಯವನ್ನು ಕೂಡಿಸುವ ಜನತಾ ನ್ಯಾಯಾಲಯ ಮತ್ತು ಮಧ್ಯಸ್ಥಿಕೆಯ ಬಗ್ಗೆ ತಿಳಿಸುವ ಕಾರ್ಯವನ್ನು ಮಾಡುವಂತೆ ನ್ಯಾಯವಾದಿಗಳಿಗೆ ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ ಕರೆ ನೀಡಿದರು.

       ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಸರಸ್ವತಿ ಕಾನೂನು ಕಾಲೇಜು, ಎಸ್.ಜೆ.ಎಂ. ಕಾನೂನು ಮಹಾ ವಿದ್ಯಾಲಯ, ಇತರ ಸಂಘ ಸಂಸ್ಥೆಗಳು, ಸಹಯೋಗದಲ್ಲಿ ವಕೀಲರ ಭವನದಲ್ಲಿ ಏರ್ಪಡಿಸಲಾಗಿದ್ದ ಜನತಾ ನ್ಯಾಯಾಲಯ ಹಾಗೂ ಮಧ್ಯಸ್ಥಿಕೆ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

       ಈ ಹಿಂದೆ ನ್ಯಾಯಾಲಯಕ್ಕೆ ಬರುವುದೆಂದರೆ ಹರ ಸಾಹಸ ಮಾಡಿದಂತೆ ಪ್ರಕರಣವನ್ನು ದಾಖಲು ಮಾಡಿ ಅದರ ತೀರ್ಪು ಬರುವುದರೊಳಗೆ ಅವರು ತಮ್ಮ ಬದುಕಿನ ಬಹಳಷ್ಟ ಆಯಸ್ಸನ್ನು ಕಳೆದಿರುತ್ತಾರೆ, ಇದರಿಂದ ಬಹಳಷ್ಟು ಪ್ರಕರಣಗಳು ನ್ಯಾಯಾಲಯಕ್ಕೆ ಬರುವುದಕ್ಕೆ ಹಿಂದೇಟು ಹಾಕುತ್ತಿವೆ, ನನ್ನ 40 ವರ್ಷದ ಈ ನ್ಯಾಯಾಲಯದ ಬದುಕಿನಲ್ಲಿ ಹಲವಾರು ಘಟನೆಗಳು ಕಂಡಿದೆ, ಅಂದಿನ ನ್ಯಾಯಾ ವಿಲೇವಾರಿಗೂ ಇಂದಿನ ನ್ಯಾಯ ವಿಲೇವಾರಿಗೂ ಬಹಳಷ್ಟು ವ್ಯತ್ಯಾಸ ಇದೆ, ಅಂದು ಈ ರೀತಿಯಾದ ಜನತಾ ನ್ಯಾಯಾಲಯ, ಮಧ್ಯಸ್ಥಿಕೆಗಾರರು ಇರಲಿಲ್ಲ ಏನೇ ಆದರೂ ಸಹಾ ನ್ಯಾಯಾಲಯದ ಮೂಲಕವೇ ನ್ಯಾಯವನ್ನು ಪಡೆಯಬೇಕಿತ್ತು ಎಂದರು.

      ನ್ಯಾಯವಾದಿಗಳಾದವರು ಸಹಾ ಹಿಂದಿನ ಕಾಲದ ಪದ್ದತಿಯಂತೆ ನಡೆಯದೆ ಇಂದಿನ ಕಾಲಕ್ಕೆ ತಕ್ಕಂತೆ ನಡೆಯುವುದರ ಮೂಲಕ ಕಕ್ಷಿದಾರರಿಗೆ ಶೀಘ್ರವಾಗಿ ನ್ಯಾಯವನ್ನು ಸಿಗುವಂತೆ ಮಾಡುವುದರಲ್ಲಿ ನಿಮ್ಮಗಳ ಪಾತ್ರ ಬಹಳ ಮುಖ್ಯವಾಗಿದೆ. ಕಕ್ಷಿದಾರರಿಗೆ ನ್ಯಾಯಾಲಯದಷ್ಟೇ ಮಹತ್ವ ಇರುವ ಜನತಾ ನ್ಯಾಯಾಲಯ ಮತ್ತು ಮಧ್ಯಸ್ಥಿಕೆಗಾರರ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತಿಳಿಸಿ ಅವರ ಪ್ರಕರಣವನ್ನು ನ್ಯಾಯಾಲಯದ ಮೆಟ್ಟಿಲು ಏರದಂತೆ ಇಲ್ಲಿಯೇ ತೀರ್ಮಾನ ಮಾಡುವಂತೆ ಮಾಡಿ ಕೊಳ್ಳಿ ಹಲವಾರು ನ್ಯಾಯವಾದಿಗಳಿಗೆ ಇದರಲ್ಲಿ ವಾದ ಮಾಡುವುದರಿಂದ ನಮ್ಮ ವರಮಾನ ಕಡಿಮೆಯಾಗುತ್ತದೆ ಎಂಬ ಗೊಂದಲ ಇದೆ ಇದರ ಬಗ್ಗೆ ಗೊಂದಲ ಬೇಡ ಬೇರೆ ನ್ಯಾಯಾಲಯದಲ್ಲಿ ಪಡೆಯುತ್ತಿದ್ದ ಫೀಜನ್ನೇ ಪಡೆಯುವುದರ ಮೂಲಕ ನ್ಯಾಯವನ್ನು ಕಕ್ಷಿದಾರರಿಗೆ ಕೂಡಿಸುವ ಕಾರ್ಯವನ್ನು ಮಾಡುವಂತೆ ಬಿಲ್ಲಪ್ಪ ಕಿವಿ ಮಾತು ಹೇಳಿದರು.

       ನ್ಯಾಯ ವಿಲೇವಾರಿ ವಿಳಂಭವಾದಷ್ಟು, ಅನ್ಯಾಯ ಹೆಚ್ಚಾಗುತ್ತದೆ, ನ್ಯಾಯವನ್ನು ಮರೆತು ಅನ್ಯಾಯದ ತೀರ್ಪನ್ನು ನೀಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಇದರಿಂದ ನ್ಯಾಯವನ್ನು ಕೂಡಿಸುವಲ್ಲಿ ವಿಳಂಭ ಮಾಡಬಾರದೆಂದು ತಿಳಿಸಿ, ಇಂದಿನ ಯುವ ನ್ಯಾಯವಾದಿಗಳು ಬದಲಾದ ಈ ನ್ಯಾಯ ಪದ್ದತಿಯನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡು ಕಕ್ಷಿದಾರರಿಗೆ ನ್ಯಾಯವನ್ನು ಕೂಡಿಸುವಲ್ಲಿ ಮುಂದಾಗಿ ಎಂದು ಕರೆ ನೀಡಿದರು.

      ಸರಸ್ವತಿ ಕಾನೂನು ಕಾಲೇಜಿನ ಪ್ರಾಚಾರ್ಯೆ ಕೆ.ಎಸ್.ಸುಧಾದೇವಿ ಮಾತನಾಡಿ, ಕಾನೂನು ವಿಶ್ವ ವಿದ್ಯಾಲಯವೂ ಸಹಾ ಈ ರೀತಿಯಾದ ಜನತಾ ನ್ಯಾಯಾಲಯ ಮತ್ತು ಮಧ್ಯಸ್ಥಿಕೆಗಾರರ ವಿಷಯವನ್ನು ಪಠ್ಯದಲ್ಲಿ ಸೇರ್ಪಡೆ ಮಾಡಿದೆ ಇದರಿಂದ ನ್ಯಾಯವಾದಿಗಳಾಗುವವರು ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡು ನ್ಯಾಯವನ್ನು ನೀಡುವಂತೆ ಹೇಳಿದರು.

       ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರುಗಳಾದ ಬಸವರಾಜ್ ಎಸ್.ಚೇಗರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಎನ್.ಬಿ.ವಿಶ್ವನಾಥ, ಎಸ್.ಜೆ.ಎಂ.ಕಾನೂನು ಕಾಲೇಜಿನ ಪ್ರಾಚಾರ್ಯ ಲೋಕೇಶ್ ರೆಡ್ಡಿ, ಭಾಗವಹಿಸಿದ್ದರು. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶೀ ನ್ಯಾಯಮೂರ್ತಿ ದಿಂಡಲಕೂಪ್ಪ ಸ್ವಾಗತಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here