ಮಾರುಕಟ್ಟೆ ಆವರಣ ಸ್ವಚ್ಛವಾಗಿಟ್ಟುಕೊಳ್ಳಲು ಕರೆ

 ಗುಬ್ಬಿ:

      ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವತ್ತ ಸಂಬಂಧಿಸಿದ ವರ್ತಕರು ಹೆಚ್ಚಿನ ಗಮನಹರಿಸುವಂತೆ ಎಪಿಎಂಸಿ ಅಧ್ಯಕ್ಷ ಜಿ.ಟಿ.ರೇವಣ್ಣ ಕರೆನೀಡಿದರು.

      ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಅಧಿಕಾರಿಗಳು ಮತ್ತು ವರ್ತಕರುಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿ ಸೋಮವಾರದಂದು ಸಾವಿರಾರು ರೈತರು ವ್ಯಾಪಾರ ವಹಿವಾಟಿಗೆ ಬರುತ್ತಾರೆ. ಆದರೆ ಸ್ವಚ್ಛತೆ ಕಾಪಾಡುವಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದ ಮಾರುಕಟ್ಟೆ ಅಂದ ಹಾಳಾಗುತ್ತಿದ್ದು ಇನ್ನೂ ಮುಂದೆ ವರ್ತಕರು ನಿಮ್ಮ ಜಾಗದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಹೋಗಬೇಕು ಎಂದು ತಿಳಿಸಿದರು.

      ಎಪಿಎಂಸಿಯ ಒಳಭಾಗದಲ್ಲಿ ಸಿಸಿ ಟಿವಿಯನ್ನು ಸಹ ಅಳವಡಿಸುವ ಚಿಂತನೆ ಮಾಡುತ್ತಿದ್ದು, ವರ್ತಕರು ತಮ್ಮ ಅಂಗಡಿಯ ಮುಂಭಾಗದಲ್ಲಿ ತಾವು ಸಹ ಸಿಸಿಟಿವಿ ಅಳವಡಿಸಿಕೊಂಡಲ್ಲಿ ವ್ಯಾಪರ ವಹಿವಾಟಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ತಿಳಿಸಿದ ಅವರು, ವರ್ತಕರು ಹೊರಭಾಗದಲ್ಲಿ ವ್ಯವಹಾರ ನಡೆಸದೆ ತಮ್ಮ ತಮ್ಮ ಅಂಗಡಿಗಳಲ್ಲಿಯೆ ವ್ಯಾಪಾರ ನಡೆಸಬೇಕು. ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುತ್ತೇವೆ, ವರ್ತಕರು ನಮಗೆ ಸಹಕಾರ ನೀಡಬೇಕೆಂದು ತಿಳಿಸಿದರು.  ಸಭೆಯಲ್ಲಿ ನಿರ್ದೆಶಕ ಲೋಕೇಶ್ವರ್, ಅಧಿಕಾರಿ ಲಕ್ಷ್ಮಿಕಾಂತ್ ಸೇರಿದಂತೆ ವರ್ತಕರುಗಳು ಭಾಗವಹಿಸಿದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap