ಈ ದೇಶದಲ್ಲಿ ಗರ್ಭಪಾತ ಅಕ್ಷಮ್ಯ ಅಪರಾಧ. ಇಡೀ ದೇಶ ಹುಡುಕಿದ್ರೂ ಒಂದೇ ಒಂದು ಹಾವು ಸಿಗದ ಈ ದೇಶ ಯಾವುದು..?? ಏನಿದರ ವಿಶೇಷತೆಗಳು
ವಿಶ್ವದ ಅತಿ ಸುಂದರ ಹಾಗೂ ಹಚ್ಚ ಹಸಿರಿನಿಂದ ಕೂಡಿರುವ ದೇಶ ಐರ್ ಲ್ಯಾಂಡ್.. ಈ ದೇಶವನ್ನ ಎಮ್ರಾಲ್ಡ್ ಐಲೆ ಅಂತಲೂ ಸಹ ಕರೆಯಲಾಗುತ್ತದೆ..
ಇಲ್ಲಿ ಎಲ್ಲ ಜನರೂ ಮಾತನಾಡುವುದು ಇಂಗ್ಲಿಷ್ ಆದ್ರೆ , ಅವರ ಮಾತನಾಡುವ ಶೈಲಿ ( ACCENT ) ಭಿನ್ನವಾಗಿರುತ್ತದೆ..
ಈ ದೇಶದ ಹೆಚ್ಚು ಜನರು ತಮ್ಮ ದೇಶಕ್ಕಿಂತ ಹೆಚ್ಚಾಗಿ ಬೇರೆ ದೇಶಗಳಲ್ಲಿರುವುದೇ ಹೆಚ್ಚು.. ಈ ದೇಶದಲ್ಲಿರುವುದು ಕೇವಲ 6 ಮಿಲಿಯನ್ ಜನ ಅಂದ್ರೆ (60 ಲಕ್ಷ).. ಆದ್ರೆ ಇದೇ ದೇಶದ ಸುಮಾರು 80 ಲಕ್ಷ ಜನರು ವಿದೇಶಗಳಲ್ಲಿ ನೆಲೆಸಿರೋದು ಗಮನಿಸಬೇಕಾದ ಸಂಗತಿ.
ಐರ್ ಲ್ಯಾಂಡ್ ನ ಮಾತೃ ಭಾಷೆ ಐರೀಶ್. ಆದ್ರೆ ಇಲ್ಲಿನ ಬಹುತೇಕ ಯಾರೂ ಕೂಡ ಐರೀಶ್ ಭಾಷೆಯನ್ನ ಬಳಸುವುದಿಲ್ಲ.. ಬದಲಾಗಿ ವಿವಿಧ ಪ್ರಾಂತ್ಯಗಳಲ್ಲಿ ವಿಭಿನ್ನ ಶೈಲಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡ್ತಾರೆ. ಕೇವಲ 2 % ರಷ್ಟು ಜನರು ಐರೀಶ್ ಭಾಷೆ ಮಾತನಾಡಿದ್ರೆ ಅದೇ ಹೆಚ್ಚು..
ಇನ್ನೊಂದು ಆಶ್ಚರ್ಯಕರ ಸಂಗತಿ ಎಂದ್ರೆ ಐರೀಶ್ ಗಿಂತ ಹೆಚ್ಚಾಗಿ ಇಂಗ್ಲೀಶ್ ಜೊತೆಗೆ ಪೂಲೀಶ್ ಭಾಷೆಯನ್ನ ಬಳಸುತ್ತಾರೆ..
ಐರ್ ಕ್ಯಾಂಡ್ ನ ಕರೆನ್ಸಿ ಯುರೋ – ಒಂದು ಯುರೋ ಭಾರತದ ಸುಮಾರು 80 -85 ರೂಪಾಯಿಗೆ ಸಮ.
ಈ ದೇಶದ ರಾಜಧಾನಿ ಡಬ್ಲಿನ್
ವರ್ಲ್ಡ್ ಫೇಮಸ್ ಗಿನ್ನಿಸ್ ಬೀರ್ ತಯಾರಿಸುವುದು ಇದೇ ದೇಶದಲ್ಲೇ..
ಪ್ರಪಂಚದಲ್ಲಿ ಬಿಯರ್ ಕುಡಿಯುವವರ ಸಂಖ್ಯೆಯಲ್ಲಿ ಐರ್ ಲ್ಯಾಂಡ್ 6 ನೇ ಸ್ಥಾನದಲ್ಲಿದೆ.. ಸಬ್ ಮರೀನ್ ಆವಿಷ್ಕರಿಸಿರುವುದು ಇದೇ ದೇಶ. ಪ್ರತಿ ವರ್ಷ ಅಕ್ಟೋಬರ್ 31 ರಂದು ಇಲ್ಲಿ ಹಾಲೋವಿನ್ ಫೆಸ್ಟಿವಲ್ ಆಯೋಜಿಸಲಾಗುತ್ತದೆ. ಇದು ಅಲ್ಲಿ ರೀತಿ ರಿವಾಜುಗಳಲ್ಲಿ ಒಂದು.. ಇದನ್ನ ಅಲ್ಲಿನ ಜನರು ಸಮಾಹಿನ್ ಎಂದು ಕರೆಯುತ್ತಾರೆ.
ಇನ್ನೂ ಈ ಉತ್ಸವದಲ್ಲಿ ಜನರು ಕಾಡಿಗೆ ಹೋಗಿ ಬೋನ್ ಫೈರ್ ಆಚರಣೆ ಮಾಡಿ ಬೆಂಕಿಯ ಸುತ್ತಲೂ , ತರ ತರಹ ವಿಚಿತ್ರವಾದ ಹಾಲೋವಿನ್ ಬಟ್ಟೆಗಳನ್ನ ಧರಿಸಿ ಡ್ಯಾನ್ಸ್ ಮಾಡ್ತಾರೆ.
ಐರ್ ಲ್ಯಾಂಡ್ ನ ಜನರಲ್ಲಿ ಮೀನಿನ ಖಾದ್ಯ ಸಿಕ್ಕಾಪಟ್ಟೆ ಫೇಮಸ್.. ಅಷ್ಟೇ ಅಲ್ಲ ಮೀನಿನ ಸೇವನೆಯಿಂದ ಅವರ ಅದೃಷ್ಟ ಕುಲಾಯಿಸುತ್ತೆ ಅನ್ನೂವುದು ಕೂಡ ನಂಬಿಕೆ.. ಇಲ್ಲಿನ ರಾಷ್ಟ್ರೀಯ ಆಟ ಹರ್ಲಿಂಗ್. ಈ ಆಟ ಬಹುತೇಕ ನಮ್ಮ ರಾಷ್ಟ್ರದ ಹಾಕಿಯನ್ನೇ ಹೋಲುತ್ತದೆ..
ಈ ದೇಶ ದಟ್ಟಾರಣ್ಯಗಳಿಂದ ಕೂಡಿದ್ದರೂ , ಹುಲ್ಲುಗಳಿಂದ ಕೂಡಿದ್ದರೂ ಸಹ ನ್ಯೂಜಿಲ್ಯಾಂಡ್ ನಂತೆಯೇ ಈ ದೇಶದಲ್ಲಿ ಒಂದೇ ಒಂದು ಹಾವು ಕೂಡ ಕಾಣಿಸುವುದಿಲ್ಲ.. ನಂಬಲಸಾಧ್ಯವಾದ್ರೂ ಆಶ್ಚರ್ಯವಾದ್ರೂ ನಂಬ್ಲೇಬೇಕು..
ಸಲಿಂಗ ಮದುವೆಗೆ 2015 ರಲ್ಲೇ ಐರ್ ಲ್ಯಾಂಡ್ ನಲ್ಲಿ ಅನುಮತಿ ನೀಡಲಾಗಿದೆ.. ಇನ್ನೂ ಈ ದೇಶದಲ್ಲಿ ಸಾರ್ವಜಿನಕವಾಗಿ ಆಲ್ಕೋಹಾಲ್ ಸೇವನೆ ನಿಷೇಧ.. ಕಾನೂನು ಬಾಹಿರ.. ವಿಶ್ವದ ಅತಿ ಹಳೆಯ ಪಬ್ ಇರುವುದು ಸಹ ಐರ್ ಲ್ಯಾಂಡ್ ನಲ್ಲಿಯೇ..
ವರ್ಲ್ಡ್ ಫೇಮಸ್ ಟೈಟಾನಿಕ್ ಹಡಗಿನ ನಿರ್ಮಾಣ ಆಗಿದ್ದೂ ಸಹ ಐರ್ ಲ್ಯಾಂಡ್ ನಲ್ಲಿಯೇ.. ಐರ್ ಲ್ಯಾಂಡ್ ನಲ್ಲಿ ಯಾವುದೇ ರಾಷ್ಟ್ರೀಯ ಧರ್ಮವಿಲ್ಲ ಎನ್ನಲಾಗುತ್ತದೆ.. ಇಲ್ಲಿನ 90 % ರಷ್ಟು ಜನರು ಕ್ಯಾಥೋಲಿಕ್ ಅನುಯಾಯಿಗಳು ಎನ್ನಲಾಗುತ್ತದೆ..
ಆದ್ರೆ ಸುಮಾರು 70 % ರಷ್ಟು ಜನರು ಎಂದಿಗೂ ಚರ್ಚ್ ಗೆ ಹೋಗಿಲ್ಲ ಎಂದೂ ಸಹ ಹೇಳಲಾಗುತ್ತದೆ.. ಯೂರೋಪಿಯನ್ ದೇಶ ಐರ್ ಲ್ಯಾಂಡ್ ನಲ್ಲಿ ಗರ್ಭಪಾತ ಕಾನೂನು ಬಾಹಿರ.. ಅಕ್ಷಮ್ಯ ಅಪರಾಧ.. ಈ ವಿಚಾರದಲ್ಲಿ ಏಕಮಾತ್ರ ರಾಷ್ಟ್ರವಿದು..
ಐರ್ ಲ್ಯಾಂಡ್ ನಲ್ಲಿ ಸೇಂಟ್ ಪ್ಯಾಟ್ರಿಕ್ ರನ್ನ ಪೂಜೆ ಮಾಡಲಾಗುತ್ತದೆ.. ಆದ್ರೆ ಇವರ ಜನನವಾಗಿದ್ದು ಐರ್ ಲ್ಯಾಂಡ್ ನಲ್ಲಿ ಅಲ್ಲ ಬದಲಾಗಿ ವೇಲ್ಸ್ ನಲ್ಲಿ..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ