ಮೀಸಲಾತಿ ಬದಲಾವಣೆಯಿಂದ ಬಿಜೆಪಿಗೆ ಭಯವಿಲ್ಲ

ಚಿತ್ರದುರ್ಗ;
            ಮೀಸಲಾತಿ ಬದಲಾದ ಮಾತ್ರಕ್ಕೆ ನಾವು ಹೆದರಬೇಕಾಗಿಲ್ಲ. ಪಕ್ಷೇತರರು ಸೇರಿ ಒಟ್ಟು 22 ಸದಸ್ಯರ ಬೆಂಬಲ ವಿದ್ದು, ನಗರಸಭೆಯಲ್ಲಿ ನಾವೇ ಅಧಿಕಾರ ರಚಿಸುತ್ತೇವೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದ್ದಾರೆ.
             ಸರ್ಕಾರ ತನ್ನ ಅನುಕೂಲಕ್ಕಾಗಿ ಮೀಸಲಾತಿ ಬದಲಾಯಿಸಿದೆ. ನಮ್ಮ ವಿರೋಧಿ ಗುಂಪಿನ ಕೆಲವರು ಬಿಜೆಪಿಗೆ ಅಧಿಕಾರ ಸಿಗಬಾರದು ಎಂದು ಮೀಸಲಾತಿ ಬದಲಾಯಿಸಲು ಯತ್ನಿಸಿದ್ದಾರೆ. ಬದಲಾದ ಮೀಸಲಾತಿಯಿಂದಲೂ ನಮಗೆ ಯಾವುದೇ ತೊಂದರೆ ಇಲ್ಲವೆಂದು ಶಾಸಕರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
               ಸರ್ಕಾರ ಈ ಹಿಂದೆ ಚಿತ್ರದುರ್ಗ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಎಸ್.ಟಿ.ಮಹಿಳೆ ಮೀಸಲಾತಿ ನಿಗಧಿಪಡಿಸಿ ಆದೇಶ ಹೊರಡಿಸಿದ್ದು, ಚುನಾವಣೆಯಲ್ಲಿ ವಿರೋಧಿ ಗುಂಪಿನಲ್ಲಿ ಈ ಮೀಸಲಾತಿಯವರು ಯಾರೂ ಗೆದ್ದಿಲ್ಲ. ಹೀಗಾಗಿ ಬಿಜೆಪಿ ಅಧಿಕಾರ ಹಿಡಿಯುವುದನ್ನು ತಪ್ಪಿಸಲು ಕೆಲವರು ಮೀಸಲಾತಿ ಬದಲಾಯಿಸಿದ್ದಾರೆ. ಇದರಿಂದ ನಮಗೆ ಅನುಕೂಲವೇ ಆಗಿದೆ ಹೊರೆತು ಯಾವುದೇ ಭಯವಿಲ್ಲವೆಂದು ನುಡಿದರು
             ಹಿಂದೆ ನಿಗಧಿಯಾಗಿದ್ದ ಮೀಸಲಾತಿಯಡಿ ನಮ್ಮಲ್ಲಿ ಇಬ್ಬರಿಗೆ ಮಾತ್ರ ಅವಕಾಶವಿತ್ತು. ಆದರೀಗ ಸಾಮಾನ್ಯ ಮೀಸಲಾತಿ ಅಡಿ ಯಾರು ಬೇಕಾದರೂ ಸ್ಪರ್ದಿಸಲು ಅವಕಾಶವಿದೆ. ಚಿತ್ರದುರ್ಗ ನಗರಸಭೆ ಚುನಾವಣೆಯಲ್ಲಿ ಬಿಜೆಪಿ 17 ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್‍ನ ಒರ್ವ ಸದಸ್ಯರು ನಮಗೆ ಬೆಂಬಲ ಸೂಚಿಸಿದ್ದಾರೆ. ಇದರ ಜೊತೆಗೆ ಪಕ್ಷೇತರರ ಬೆಂಬಲವೂ ಇದೆ. ಹೀಗಾಗಿ ನಾವು ಅಧಿಕಾರ ನಡೆಸಲು ಯಾವುದೇ ಅಡ್ಡಿಯಿಲ್ಲವೆಂದು ತಿಪ್ಪಾರೆಡ್ಡಿ ಪುನುರುಚ್ಚರಿಸಿದರು
             ಸರ್ಕಾರ ಈ ಮೊದಲೇ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮೀಸಲಾತಿ ಪಟ್ಟಿಯ ಪ್ರಕಾರವೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಬೇಕಿತ್ತು. ಆದರೆ ಆ ಮೀಸಲಾತಿಯವರು ಆ ಗುಂಪಿನಲ್ಲಿ ಯಾರೂ ಗೆದ್ದಿಲ್ಲದ ಕಾರಣ ಬದಲಾವಣೆ ಮಾಡಿದೆ. ಇದರಿಂದ ಎಸ್.ಟಿ.ಜನಾಂಗಕ್ಕೆ ಅನ್ಯಾಯವಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ನಾವು ಸರಿ ಪಡಿಸಿಕೊಳ್ಳುತ್ತೇವೆ. ನಗರದ ಅಭಿವೃದ್ದಿಯ ದೃಷ್ಠಿಯಿಂದ ಇದರ ವಿರುದ್ದ ನ್ಯಾಯಾಲಯಕ್ಕೆ ಹೋಗುವುದಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು
ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಆಯ್ಕೆ;
ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಒಮ್ಮತದಿಂದ ಆಯ್ಕೆ ಮಾಡಲು ನಿರ್ಧರಿಸಿದ್ದೇವೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು
ಅಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾತಿ ಬಂದಿರುವ ಕಾರಣ ಆಕಾಂಕ್ಷಿಗಳ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಲಿದೆ. ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಮಾಡಿದಂತೆ ಇಲ್ಲಿಯೂ ಎಲ್ಲರ ವಿಶ್ವಾಸ ಪಡೆದು ಆಯ್ಕೆ ಮಾಡಲಾಗುವುದು ಎಂದರು
ಮೂಲ ಬಿಜೆಪಿ ಕಾರ್ಯಕರ್ತರಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಕೊಟ್ಟಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಇಲ್ಲಿ ಟಿಕೆಟ್ ನೀಡುವುದಕ್ಕಿಂತ ನಗರಸಭೆಯನ್ನು ಬಿಜೆಪಿಯ ವಶಕ್ಕೆ ಪಡೆಯುವುದೇ ನಮ್ಮ ಮೂಲ ಉದ್ದೇಶವಾಗಿತ್ತು.ಈ ಕಾರಣದಿಂದ ಗೆಲ್ಲುವ ಸಾಮಥ್ರ್ಯ ಇರುವವರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ ಎಂದು ಸಮಜಾಯಿಸಿ ನೀಡಿದರು

ನಗರಸಭೆಯ ಏಳು ಜನ ಪಕ್ಷೇತರ ಸದಸ್ಯರ ಪೈಕಿ ಈಗಾಗಲೇ ಮೂವರು ನಮಗೆ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಕಾಂಗ್ರೆಸ್‍ನ ಒರ್ವ ಸದಸ್ಯರೂ ನಮ್ಮ ಜೊತೆಗಿದ್ದಾರೆ. ಕಾಂಗ್ರೆಸ್‍ನಿಂದ ಒಬ್ಬರು ಮಾತ್ರ ಬೆಂಬಲ ಸೂಚಿಸಿದ್ದು, ಅವರ ಸದಸ್ಯತ್ವ ರದ್ದು ಆಗುವುದಿಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಅಂತಹ ಯಾವ ಪ್ರಶ್ನೆಯೂ ಇಲ್ಲ ಉದ್ಭವಿಸುವುದಿಲ್ಲ. ಆತಂಕವೂ ಇಲ್ಲವೆಂದರು

Recent Articles

spot_img

Related Stories

Share via
Copy link
Powered by Social Snap