ತುರುವೇಕೆರೆ
ತಾಲ್ಲೋಕಿನ ದುಂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸುಮಾರು 9 ವರ್ಷಗಳಿಂದ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ವಿ.ಗಂಗಣ್ಣನವರು ಅಕಾಲಿಕ ಮರಣ ಹೊಂದಿದ ಹಿನ್ನಲೆಯಲ್ಲಿ ಶಾಲಾಮಕ್ಕಳು, ಗ್ರಾಮಸ್ಥರು ಹಾಗು ಶಿಕ್ಷಕರು ಪುಷ್ಪಾರ್ಚನೆ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು. ಶಿಕ್ಷಕರುಗಳಾದ ನಾಗರಾಜು, ಲೀಲಾವತಿ, ಮಂಜುಳ, ಸವಿತ, ಗ್ರಾಮಸ್ಥರಾದ ಜ್ಞಾನೇಶ್, ಪಾರ್ವತಮ್ಮ ಸೇರಿದಂತೆ ಇತರರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
