ಕುಣಿಗಲ್
ದಲಿತರ ನಿವೇಶನವನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವವರನ್ನು ತೆರವುಗೊಳಿಸದ ಪುರಸಭೆಯ ಮುಖ್ಯಾಧಿಕಾರಿ ಮೇಲೆ ದೌರ್ಜನ್ಯ ಕಾಯ್ದೆ ಪ್ರಕರಣದ ಅಡಿಯಲ್ಲಿ ಕೇಸು ದಾಖಲು ಮಾಡಲಾಗುವುದು ಎಂದು ದಲಿತ ಸಂಘಟನೆಗಳ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.
ಕುಣಿಗಲ್ ಪುರಸಭಾ ವ್ಯಾಪ್ತಿಯ ಮಲ್ಲಾಘಟ್ಟ ಜನತಾ ಕಾಲನಿಯಲ್ಲಿ ದಲಿತರಿಗೆ ಸೇರಿದ ನಿವೇಶನ ಸಂಖ್ಯೆ 20, 21 ಮತ್ತು 22 ರಲ್ಲಿ ದಲಿತರು ಇಲ್ಲದ ವೇಳೆಯಲ್ಲಿ ಸವರ್ಣೀಯರು ಪ್ರವೇಶ ಮಾಡಿ ನಿವೇಶನವನ್ನು ಪಡಿಸಿಕೊಂಡು ಅಕ್ರಮವಾಗಿ ಶೆಡ್ಡು ಗಳನ್ನ ನಿರ್ಮಿಸಿಕೊಡುತ್ತಾರೆ ಆಗಿನ ಮುಖ್ಯಾಧಿಕಾರಿಗಳು ನಿವೇಶನಗಳನ್ನು ತೆರವುಗೊಳಿಸಿ ದಲಿತರಿಗೆ ರಕ್ಷಣೆ ನೀಡಬೇಕೆಂದು ಪೆÇಲೀಸಅಧಿಕಾರಿಗಳು ಪತ್ರ ಬರೆದಿದ್ದು
ಯಾವುದೇ ಕ್ರಮವಹಿಸಿದೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ನಗರಾಭಿವೃದ್ಧಿ ಕೋಶ ಅಧಿಕಾರಿ ಉಪವಿಭಾಗಾಧಿಕಾರಿಗಳು ಮುಖ್ಯಾಧಿಕಾರಿ ಜಗ ರೆಡ್ಡಿಯವರಿಗೆ ನಿವೇಶನವನ್ನು ತೆರವು ಮಾಡಿಸುವಂತೆ ತಿಳಿಸಿದರೂ ಸಹ ಈ ಅಧಿಕಾರಿ ಸ್ವಜಾತಿ ಪ್ರೇಮ ಅಕ್ರಮ ಸಂಭಾವನೆ ಮೇಲಧಿಕಾರಿಗಳ ಆದೇಶವನ್ನು ಪಾಲನೆ ಮಾಡದೆ ಸುಳ್ಳು ಮಾಹಿತಿ ನೀಡಿ ಪ್ರಕರಣವು ನ್ಯಾಯಾಲಯದಲ್ಲಿದೆ ಎಂದು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಾ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಪುರಸಭೆಯ ಮುಖ್ಯಾಧಿಕಾರಿ ಜಗ ರೆಡ್ಡಿಯನ್ನು ಕೂಡಲೇ ಅಮಾನತಿನಲ್ಲಿಟ್ಟು ದಲಿತರಿಗೆ ಸೇರಿದ ನಿವೇಶನವನ್ನು ತೆರವುಗೊಳಿಸಿ ಈ ವರ್ಗಕ್ಕೆ ನ್ಯಾಯ ದೊರಕಿಸಿಕೊಡಬೇಕು ಇಲ್ಲದಿದ್ದರೆ ಪುರಸಭೆ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡುತ್ತಾರೆ
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಶಿವ ಶಂಕರ್ ಗುರುಮೂರ್ತಿ ಭಕ್ತರಹಳ್ಳಿ ಬಿಡಿ ಕುಮಾರ್ ರಾಜು ವೆಂಕಟಪ್ಪ ಎನ್ನ ರಾಜೇಶ್ ಕಟ್ಟಡ ಕಾರ್ಮಿಕ ಸಂಘದ ಕೃಷ್ಣರಾಜು ಅನೇಕರು ಭಾಗವಹಿಸಿ ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ