ಮುಸ್ಲಿಂ ಬಾಂಧವರಿಂದ ಬಕ್ರೀದ್ ಹಬ್ಬ ಆಚರಣೆ : ಕೊಡಗು ಸಂತ್ರಸ್ಥರ ನಿಧಿಗೆ 50 ಸಾವಿರ ದೇಣಿಗೆ

ಚಳ್ಳಕೆರೆ-

  ನಗರದ ಬೆಂಗಳೂರು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಬಕ್ರೀದ್ ಹಬ್ಬದ ಪ್ರಯುಕ್ತ ಸಾವಿರಾರು ಮುಸ್ಲಿಂ ಬಂಧುಗಳು ಪ್ರಾರ್ಥನೆಯನ್ನು ಸಲ್ಲಿಸಿದರು.
ನಗರದ ಬಳ್ಳಾರಿ ರಸ್ತೆಯಲ್ಲಿರುವ ಜಾಮೀಯ ಮಸೀದಿಗೆ ಗಾಂಧಿನಗರ, ಅಂಬೇಡ್ಕರ್‍ನಗರ, ಶಾಂತಿನಗರ, ಸೂಜಿಮಲ್ಲೇಶ್ವರನಗರ, ಮದಕರಿನಗರ, ಜನತಾಕಾಲೋನಿ ಮುಂತಾದ ಮಸೀದಿಗಳ ಎಲ್ಲಾ ಮುಖಂಡರು ಜಾಮೀಯ ಮಸೀದಿಗೆ ಬಂದು ಸೇರಿ ಬೆಂಗಳೂರು ರಸ್ತೆಯ ಈದ್ಗಾ ಮೈದಾನಕ್ಕೆ ಮೆರವಣಿಗೆಯಲ್ಲಿ ಹೊರಟು ನಂತರ ಅಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವರು. ಈ ಸಂದರ್ಭದಲ್ಲಿ ಸಮುದಾಯದ ಧರ್ಮಗುರುಗಳು ಮುಸ್ಲಿಂ ಧರ್ಮದ ಬಗ್ಗೆ ಮಾರ್ಗದರ್ಶನ ನೀಡುವರು.

   ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಮುತುವಲ್ಲಿ ಅತಿಕ್ ಉರ್ ರೆಹಮಾನ್ ಮಾತನಾಡಿ, ಕೊಡಗು ಜಿಲ್ಲೆಯ ಭೀಕರ ಪರಿಸ್ಥಿತಿಯ ಬಗ್ಗೆ ಮುಸ್ಲಿಂ ಸಮುದಾಯದ ಎಲ್ಲಾ ಮುಖಂಡರು ಚರ್ಚೆ ನಡೆಸಿ ಸುಮಾರು 50 ಸಾವಿರ ಹಣವನ್ನು ಸಂಗ್ರಹಿಸಿದ್ದು, ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಿಕೊಡಲಾಗುವುದು ಎಂದರು.
ಮಾಜಿ ನಗರಸಭಾ ಸದಸ್ಯರಾದ ಮಹಮ್ಮದ್‍ಸ್ವಾಲೇಹ, ಸಲೀಂ, ಮಾಜಿ ಪುರಸಭಾ ಸದಸ್ಯ ಎಸ್.ಮುಜೀಬ್, ಎಸ್.ಎಚ್.ಸೈಯದ್, ರಹಮತ್‍ವುಲ್ಲಾ, ಮಹಮ್ಮದ್ ಕಲಾಮಿ, ಬಿ.ಫರೀದ್‍ಖಾನ್ ಮುಂತಾದವರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

Recent Articles

spot_img

Related Stories

Share via
Copy link