ಚಳ್ಳಕೆರೆ
ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲವಾದ ಶಕ್ತಿಯನ್ನು ತುಂಬುವುದರಲ್ಲಿ ಹೆಚ್ಚು ಪರಿಶ್ರಮ ವಹಿಸಿದವರು ರಾಜಕೀಯ ಕ್ಷೇತ್ರದಲ್ಲಿ ಅಪಾರವಾದ ಅನುಭವ ಹೊಂದಿದ್ದ ಸಿ.ಕೆ.ಜಾಫರ್ ಶರೀಫ್‍ರವರು. ಅವರ ನಿಧನದಿಂದ ರಾಜ್ಯ ರಾಜಕೀಯ ಕ್ಷೇತ್ರದ ಮಹತ್ವದ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಕಂಬನಿ ಮಿಡಿದಿದ್ದಾರೆ.
ಕೇಂದ್ರ ಮಾಜಿ ರೈಲ್ವೆ ಸಚಿವ ಹಿರಿಯ ರಾಜಕಾರಣಿ ಸಿ.ಕೆ.ಜಾಫರ್ ಶರೀಫ್ ನಿಧನ ಹಿನ್ನೆಲ್ಲೆಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಸರ್ಕಾರ ಸೇವೆಯಲ್ಲಿದ್ದ ನನಗೆ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಜಾಫರ್ ಶರೀಫ್‍ರವರೇ ಪ್ರೇರಣಾ ಶಕ್ತಿ. ಇಳಿ ವಯಸ್ಸಿನಲ್ಲಿಯೂ ಸಹ ಅವರು ತಮ್ಮ ರಾಜಕೀಯ ಅನುಭವವಗಳನ್ನು ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ದಾರೆ ಎರೆದಿದ್ದರು. ರಾಜ್ಯದ ಮುಸ್ಲಿಂ ಸಮುದಾಯದ ಹಿರಿಯ ರಾಜಕಾರಣಿಯಾದ ಅವರು ಎಂದಿಗೂ ಸ್ಥಾನಮಾನಗಳಿಗೆ ಆಸೆ ಪಟ್ಟವರಲ್ಲ. ಅವರಲ್ಲಿದ್ದ ರಾಜಕೀಯ ಆದಮ್ಯ ಶಕ್ತಿ ಅವರನ್ನು ಚಳ್ಳಕೆರೆ ಇಂದಿ ನವದೆಹಲಿತನಕ ಕರೆದ್ಯೊಯ್ದಿತ್ತು. ಇಡೀ ರಾಜ್ಯದ ಯಾವ ಮೂಲೆಗೂ ಹೋದರೂ ಸಹ ಸಿ.ಕೆ.ಜಾಫರ್ ಶರೀಫ್ ಹೆಸರು ಕೇಳಿ ಬರುತ್ತಿದೆ.
ಚಳ್ಳಕೆರೆ ತಾಲ್ಲೂಕಿಗೆ ತಮ್ಮದೇಯಾದ ವಿಶಿಷ್ಟ ಸೇವೆಯನ್ನು ನೀಡಿದ ಮಹಾನ್ ಶ್ರೇಷ್ಠರು ಜಾಫರ್ ಶರೀಫ್‍ರವರು. ವಿಶೇಷವಾಗಿ ಚಿತ್ರದುರ್ಗ-ರಾಯದುರ್ಗ ರೈಲು ಮಾರ್ಗದ ರೂವಾರಿಯಾಗಿದ್ದ ಅವರು. ಕೊಂಕಣಿ ರೈಲ್ವೆಗೂ ಸಹ ಅನುಮತಿ ಪಡೆಯುವಲ್ಲಿ ಯಶಸ್ಸಿಯಾದರಲ್ಲದೆ ರಾಜ್ಯದ ಅನೇಕ ಮೀಟರ್ ಗೇಜ್ ಮಾರ್ಗಗಳನ್ನು ಬ್ರಾಡ್‍ಗೇಜ್‍ಗಳಾಗಿ ಪರಿವರ್ತಿಸಲು ಸಹಕರಿಸಿದರು. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಜಾಫರ್ ಶರೀಫ್ ತಮ್ಮದೇಯಾದ ವಿಶೇಷ ಛಾಪನ್ನು ಮೂಡಿಸಿದ್ದರು. ಚಳ್ಳಕೆರೆ ಜನತೆಯ ಮನದಾಳದಲ್ಲಿ ಭದ್ರವಾಗಿ ತಮ್ಮ ಸೇವೆಯ ಮೂಲಕವೇ ಹೆಸರಾಗಿದ್ಧಾರೆ. ಇವರ ನಿಧನ ರಾಜ್ಯಕ್ಕೂ ಹಾಗೂ ಪಕ್ಷಕ್ಕೂ ತುಂಬಲಾಗದ ನಷ್ಟವಾಗಿದ್ದು, ಅವರ ಕುಟುಂಬ ವರ್ಗಕ್ಕೆ ದೇವರು ಈ ದುಖಃವನ್ನು ಬರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಸಮಾಜ ಸೇವಕ ಎಚ್.ಎಸ್.ಸೈಯದ್ ಮಾತನಾಡಿ, ಜಾಫರ್ ಶರೀಪ್‍ರವರ ಹೆಸರೇ ಈ ನಾಡಿಗೆ ಒಂದು ಶಕ್ತಿಯ ರೂಪ. ಕಳೆದ ಸುಮಾರು 50 ವರ್ಷಗಳ ಅವರ ರಾಜಕೀಯ ಜೀವನದಲ್ಲಿ ಎಂದಿಗೂ ಯಾವುದೇ ರೀತಿಯ ಕಪ್ಪು ಚುಕ್ಕೆ ಅವರಿಗೆ ಇರಲಿಲ್ಲ. ಅವರ ಬಳಿ ಯಾವುದೇ ಸಮುದಾಯ, ಯಾವುದೇ ಕೆಲಸಕ್ಕೆ ಹೋದರೂ ಸಹ ಯೋಗ ಕ್ಷೇಮ ವಿಚಾರಿಸಿ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಿದ್ದರು. ಚಳ್ಳಕೆರೆಯ ಅವರ ಸ್ನೇಹಿತರ ಬಗ್ಗೆಯೂ ಸಹ ಜನರಲ್ಲಿ ವಿಚಾರಿಸುತ್ತಿದ್ದರು. ಹೃದಯ ವೈಶ್ಯಾಲತೆವುಳ್ಳ ಹಿರಿಯ ರಾಜಕಾರಣಿಯ ಸಾವು ನೋವು ತಂದಿದೆ. ಇಂತಹ ಉದಯೋನ್ಮುಖ ರಾಜಕಾರಣಿ ಇಂದಿನ ಕಾಲದಲ್ಲಿ ಬಹಳ ವಿರಳವೆಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
