ಮೂಡನಂಬಿಕೆ ತೊರೆದು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ : ಡಾ.ರಂಗನಾಥ್

ಕುಣಿಗಲ್

      ಮಡಿವಾಳ ಜನಾಂಗವೂ ಮೂಢನಂಬಿಕೆ ಕಂದಾಚಾರ ಅಸಮಾನತೆಯಿಂದ ಹೊರಬಂದು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾಗಿದೆ ಎಂದು ಶಾಸಕ ಡಾ.ರಂಗನಾಥ್ ಕರೆ ನೀಡಿದರು.

        ಪಟ್ಟಣದ ಕಂದಾಯ ಭವನದಲ್ಲಿ ತಾಲ್ಲೂಕು ಆಡಳಿತ,ಮಡಿವಾಳ ಮಾಚಿದೇವ ಸಂಘ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ,12ನೇ ಶತಮಾನದಲ್ಲಿ ಬಸವಣ್ಣನವರ ಹಾದಿಯಲ್ಲಿ ಬಂದಂತಹ ಮಡಿವಾಳ ಮಾಚಿದೇವರು ಸಮಾಜದಲ್ಲಿರುವ ಅಸಮಾನತೆ,ಮೂಢನಂಬಿಕೆ,ಕಂದಾಚಾರ ಹೋಗಲಾಡಿಸಲು ವಚನ ಸಾಹಿತ್ಯಗಳನ್ನ ಸಮಾಜಕ್ಕೆ ನೀಡುವಲ್ಲಿ ಮುಂದಾದರು, ಈ ಸಮಾಜವನ್ನ ಗುರುತಿಸಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಜ್ಯ ಸರ್ಕಾರವೇ ಮಡಿವಾಳ ಮಾಚಿದೇವರ ಜಯಂತೋತ್ಸವವನ್ನ ಆಚರಿಸಲು ಕಳೆದ ವರ್ಷದಿಂದ ಜಾರಿಗೆ ಬಂದಿರುವುದು ಉತ್ತಮ ಬೆಳವಣಿಗೆಯಾಗಿದ್ದು,

        ಈ ಜನಾಂಗವನ್ನ ಪ್ರತಿ ವರ್ಷವೂ ಒಂದು ಕಡೆ ಸೇರಿಸಿ ಶರಣರ ಪರಂಪರೆಯ ಆದರ್ಶ,ತತ್ವಗಳನ್ನ ಜನಸಾಮಾನ್ಯರಿಗೆ ತಿಳಿಸುವ ಮೂಲಕ ,ಈ ಜನಾಂಗವೂ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ,ಆರ್ಥಿಕವಾಗಿ ಹಿಂದುಳಿದಿರುವುದರಿಂದ ಇವರ ಬದುಕು ಹಸನುಗೊಳಿಸಲು ಎಲ್ಲಾ ರೀತಿಯ ನೆರವನ್ನ ದೊರಕಿಸಿಕೊಡುವಂತೆ ತಾವು ಸಹ ಒತ್ತಡ ಹೇರುವುದಾಗಿ ತಿಳಿಸಿದರು.

         ತಹಸೀಲ್ದಾರ್ ವಿ.ಆರ್.ವಿಶ್ವನಾಥ್ ಮಾತನಾಡಿ, ಸಾಮಾಜಿಕ ಅಸಮಾನತೆ ಹೋಗಲಾಡಿಸಲು 12ನೇ ಶತಮಾನದಲ್ಲಿ ವಚನಗಳ ಮೂಲಕ ಮಾಚಿದೇವರು ತತ್ವ ಸಿದ್ಧಾಂತಗಳನ್ನ ಅಳವಡಿಸಿಕೊಂಡಿರುವ ಇಂತಹ ವ್ಯಕ್ತಿಗಳ ಜಯಂತೋತ್ಸವ ಆಚರಿಸುವುದು ಮುಂದಿನ ಜನಾಂಗಕ್ಕೆ ಮಾದರಿಯಾಗಿದೆ ಎಂದರು. ಪ್ರಧಾನ ಭಾಷಣಕಾರರಾಗಿದ್ದ ಮಹಾದೇವಪ್ಪ, ಮುಖ್ಯ ಅತಿಥಿಯಾಗಿದ್ದ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರು, ಜನಾಂಗದ ಮುಖಂಡ ರುದ್ರಪ್ಪ, ಇ.ಒ. ಶಿವರಾಜಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಬಂಡಿವೀರಪ್ಪ, ತಾ.ಪಂ.ಸದಸ್ಯ ಕೆಂಪೇಗೌಡ, ವೆಂಕಟರಾಮು, ಮಡಿವಾಳ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಸಿ.ರಾಜಣ್ಣ, ಬಿ.ಡಿ.ರಾಮಕೃಷ್ಣ, ಕೆ.ಹೆಚ್.ಹನುಮಂತರಾಜು, ಶಿವಣ್ಣ ಸೇರಿದಂತೆ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap