ಶಿಗ್ಗಾವಿ :
ವಿದ್ಯಾರ್ಥಿಗಳು ಜ್ಞಾನ ಚಾರಿತ್ರೆ ಮತ್ತು ಕ್ರೀಡೆಯಲ್ಲಿ ಆಸಕ್ತಿಯಿಂದಾ ಪಾಲ್ಗೋಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ಸಾಧಿಸಿದಂತಾಗುತ್ತದೆ, ಹೀಗೆಂದು ದೈಹಿಕ ನಿರ್ದೇಶಕ ಪಿ ಡಿ ಹೊನ್ನಣ್ಣವರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಎಸ್‍ಆರ್‍ಜೆವಿ ಕಾಲೆಜಿನಲ್ಲಿ ಆಯೋಜಿಸಿದ್ದ ಭಾರತ ಕಂಡ ಹಾಕಿ ದಿಗ್ಗಜ ಮೇಜರ ಧ್ಯಾನಚಂದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ಧ್ಯಾನಚಂದ ಅವರ ಕ್ರೀಡಾಮನೋಬಾವದಿಂದಾಗಿಯೆ ಹಾಕಿ ಜನ್ಮತಾಳಿ ರಾಷ್ಟ್ರೀಯ ಕ್ರೀಡೆಯಾಗಿ ರೂಪಗೊಂಡಿತು. ಅಂತರ್‍ರಾಷ್ಡ್ರೀಯ ಕ್ರೀಡೆಯಲ್ಲಿ 400 ಗೋಲುಗಳನ್ನು ಹೊಡೆದು ದೇಶಕ್ಕೆ ಕೀರ್ತಿತಂದವರೆ ಧ್ಯಾನಚಂದ, ಹೀಗಾಗಿ ಅವರ ಜನ್ಮದಿನವನ್ನು ಕ್ರೀಡಾ ದಿನಾಚರಣೆಯನ್ನಾಗಿ ಆಚರಿಸುತ್ತೇವೆ ಎಂದರು.
ಪ್ರಾಚಾರ್ಯ ಸಿ ಎಚ್ ತಾವರಗೊಂದಿ ಅಧ್ಯಕ್ಷತೆ ವಹಿಸಿದ್ದರು, ಪ ಪೂ ಕಾಲೇಜಿನ ಪ್ರಾಚಾರ್ಯ ಎಸ್ ವಿ ಕುಲಕರ್ಣಿ, ಕ್ರೀಡಾ ಕಾರ್ಯಾದ್ಯಕ್ಷ ಪ್ರೊ ಪಿ ಸಿ ಹಿರೇಮಠ, ಉಪನ್ಯಾಸಕಿ ಎನ್ ನಾಯಕ ಸೇರಿದಂತೆ ಉ¥ನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
