ಮೇಣದ ಬತ್ತಿ ಬೆಳಗಿಸಿ ಗುತ್ತಿಗೆ ನೌಕರರ ಪ್ರತಿಭಟನೆ

 ದಾವಣಗೆರೆ:

      ಸ್ವಾತಂತ್ರ್ಯೋತ್ಸವದ ದಿನವಾದ ಬುಧವಾರ ಸಂಜೆ ಸರ್ಕಾರಿ ಗುತ್ತಿಗೆ ನೌಕರರ ಮಹಾ ಒಕ್ಕೂಟದ ಜಿಲ್ಲಾ ಸಮಿತಿ ವತಿಯಿಂದ ನಗರದ ಜಯದೇವ ವೃತ್ತದಲ್ಲಿ ಮೇಣದ ಬತ್ತಿ ಬೆಳಗಿಸುವ ಮೂಲಕ ವಿವಿಧ ಬೇಡಿಕೆಗಳಿಗೆ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

      ಸರ್ಕಾರದ ಆಡಳಿತಯಂತ್ರವು ಸುಸೂತ್ರವಾಗಿ ನಡೆಯಲು ಗುತ್ತಿಗೆ ನೌಕರರ ಸೇವೆ ಕಾರಣವಾಗಿದೆ. ರಾಜ್ಯದಲ್ಲಿ ಸುಮಾರು 5 ಲಕ್ಷ ಜನ ಗುತ್ತಿಗೆ ನೌಕರರಿದ್ದೇವೆ. ಆದರೆ, ನಮ್ಮ ಸಮಸ್ಯೆಗಳಿಗೆ ಯಾರೂ ಸ್ಪಂದಿಸುತ್ತಿಲ್ಲ. ದೇಶ ಸ್ವಾತಂತ್ರ್ಯಗೊಂಡು 72 ವರ್ಷಗಳು ಕಳೆದರೂ ಗುತ್ತಿಗೆ ನೌಕರರು ಇನ್ನೂ ಜೀತಪದ್ದತಿಯಲ್ಲಿಯೇ ಜೀವನ ನಡೆಸಬೇಕಾಗಿದೆ. ಅಲ್ಲದೆ, ನಮಗೆ ಯಾವುದೇ ಸೇವಾ ಭದ್ರತೆ ಸಹ ಇಲ್ಲ ಎಂದು ಪ್ರತಿಭಟನಾನಿರತರು ಅಳಲು ತೋಡಿಕೊಂಡರು.

      ಎಲ್ಲಾ ಗುತ್ತಿಗೆ ನೌಕರರನ್ನು ಕೆಲಸದಿಂದ ತೇಗೆದು ಹಾಕದೆ, ಅವರನ್ನು ಅದೇ ಇಲಾಖೆಯಲ್ಲಿ ಮುಂದುವರಿಸಿಕೊಂಡು ಹೋಗಬೇಕು. ಗುತ್ತಿಗೆ ನೌಕರರ ಪರವಾಗಿ ಕ್ಷೇಮಾಭಿವೃದ್ಧಿ ಅಧಿನಿಯಮ 2018ನ್ನು ಜಾರಿಗೆ ತರಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಗಂಗಾಧರ ಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಸತೀಶ್ ಅರವಿಂದ್, ಕಾನೂನು ಸಲಹೆಗಾರ ಅನೀಸ್ ಪಾಶಾ, ಜಗದೀಶ್, ಹಾಲಸ್ವಾಮಿ, ಎಂ. ಮೋಹನ್, ಅಬ್ದುಲ್ ಸಮದ್, ಖಲೀಲ್, ಶ್ರೀನಿವಾಸ್, ರೋಷನ್, ಉಷಾ ಹೆಚ್.ಕೈಲಾಸದ್, ಗಣೇಶ್, ಸಂತೋಷ್, ಅಶ್ವಿನಿ, ಶೃತಿ, ಲೀಲಾ, ರಘು, ಪ್ರಶಾಂತ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link