ದಾವಣಗೆರೆ:
ಯಾದವ ಸಮಾಜದ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಭಿನ್ನವತ್ತಳೆಯನ್ನು ಅರ್ಪಿಸಲಾಗಿದೆ.
ಬೆಂಗಳೂರಿನ ಕೃಷ್ಣಾದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ,
ಗೊಲ್ಲ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಗೊಲ್ಲ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಶಿಫಾರಸ್ಸು ಮಾಡಿದ್ದು ಕೇಂದ್ರ ಸರ್ಕಾರ ಶೀಘ್ರವೇ ಅನು ಮೋದಿಸುವಂತೆ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಬೇಕು. ಕೆಪಿಎಸ್ಸಿ ಸದಸ್ಯರನ್ನಾಗಿ ನಮ್ಮ ಗೊಲ್ಲ ಸಮಾಜದವರನ್ನ ನೇಮಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು, ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು, ನನಗೆ ಸ್ವಲ್ಪ ಕಾಲವಕಾಶ ಕೊಡಿ ನಿಮ್ಮ ಬೇಡಿಕೆಗಳಿಗೆ ಸಂಪೂರ್ಣವಾಗಿ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದೇವನಹಳ್ಳಿಯ ಬಿ.ಕೆ. ನಾರಾ ಯಣಸ್ವಾಮಿ, ಜನತಾದಳದ ಹಿರಿಯ ಮುಖಂಡ ಡಿ.ಎ. ಗೋಪಾಲಪ್ಪ, ಬಿಬಿಎಂಪಿ ಉಪಮೇಯರ್ ಶ್ರೀಮತಿ ಪದ್ಮಾವತಿ ನರಸಿಂಹಮೂರ್ತಿ, ದಾಸರಹಳ್ಳಿಯ ಮುಖಂಡ ಮುನಿ ಸ್ವಾಮಪ್ಪ, ದಾವಣಗೆರೆ ಯಾದವ ಮಹಾಸಭಾದ ಅಧ್ಯಕ್ಷ ಬಾಡದ ಆನಂದರಾಜ್ ಮತ್ತಿತರರು ಹಾಜರಿದ್ದರು.
