ಹರಪನಹಳ್ಳಿ:
ಯುಗಾದಿ ಹಬ್ಬದ ನಿಮಿತ್ತ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ಪಟ್ಟಣದ ಮೇಗಳ ಉಪ್ಪಾರಗೇರಿ, ಉಪ್ಪಾರಗೇರಿ, ಪೂಜಾರಗೇರಿ ಹಾಗೂ ಕಾಶಿ ಸಂಗಮೇಶ್ವರ ಬಡಾವಣೆಯಲ್ಲಿನ 1001 ಮನೆಗಳಿಗೆ ಬೇವು-ಬೆಲ್ಲ ಹಾಗೂ ಅರಿಶಿಣ-ಕುಂಕುಮ ವಿತರಿಸಲಾಯಿತು.
ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ, ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಯುಗಾದಿ ಹಬ್ಬಕ್ಕೆ ವಿಶಿಷ್ಟ ಪರಂಪರೆಯಿದೆ. ಈ ನಿಟ್ಟಿನಲ್ಲಿ ಪಕ್ಷದ ಆದೇಶದಂತೆ ಪಟ್ಟಣದ ಮನೆ ಮನೆಗಳಿಗೆ ತೆರಳಿ ಬೇವು-ಬೆಲ್ಲ, ಅರಿಶಿಣ-ಕುಂಕುಮ ವಿತರಿಸಿ ಶುಭಾಶಯ ಕೋರಲಾಯಿತು ಎಂದು ಹೇಳಿದರು.
ಮಹಿಳಾ ಘಟಕದ ಜಯಲಕ್ಷ್ಮೀ, ನಾಗಮಂಜುಳ, ಉಮಾ ಶಂಕರ, ಕವಿತಾ ಸುರೇಶ್, ಸುಮಾ ಜಗದೀಶ್, ನೇತ್ರಾ ಕೊಟ್ರೇಶ್, ಮಹೇಶ್ವರಿ ಬಸವರಾಜಯ್ಯ, ಶೈಲಜಾ ದೇವರಾಜ್, ಶೈನಾಭಿ ಕಲಂದರ, ಸೌಭಾಗ್ಯ ಷಣ್ಮುಖ, ಕಾಂಗ್ರೆಸ್ ಅಸಂಘಟಿತ ಘಟಕದ ಅಧ್ಯಕ್ಷ ಚಿಕ್ಕೇರಿ ಬಸಪ್ಪ, ಜೀಶಾನ್, ಎಲ್.ಮಂಜಾನಾಯ್ಕ್, ಎಸ್.ಕೆ.ಸಮಿವುಲ್ಲಾ, ಉದಯಶಂಕರ್, ಮತ್ತೂರು ಬಸವರಾಜ್, ಲಿಂಗರಾಜ್, ಎನ್.ಶಂಕರ್, ಮೈಲಾರಪ್ಪ, ಗುಡೇಕೋಟೆ ಅಂಜಿನಪ್ಪ, ಆನಂದ್, ಬಾವಿಕಟ್ಟಿ ಭರಮಪ್ಪ, ಹನುಮಂತಪ್ಪ ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








