ಯುವ ಪೀಳಿಗೆಗೆ ತೃಪ್ತಿ, ಮಾನವೀಯತೆ ಅವಶ್ಯಕ :ನಿ.ನ್ಯಾ. ಎನ್.ಸಂತೋಷ್‌ಹೆಗ್ಡೆ

ತುಮಕೂರು

               ದೇಶದ ಅಭಿವೃದ್ಧಿಗೆ ಇಂದಿನ ಯುವ ಪೀಳಿಗೆಗೆ ತೃಪ್ತಿ,ಮಾನವೀಯತೆ ಎಂಬ ಎರಡು ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ತುಂಬಾ ಅವಶ್ಯ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

                ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ವತಿಯಿಂದ ತುಮಕೂರು ವಿಶ್ವವಿದ್ಯಾಲಯದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸಭಾಗಣದಲ್ಲಿ ಆಯೋಜಿಸಿದ್ದ 2018-19ನೇ ಸಾಲಿಕ ಕ್ರೀಡೆ, ಎಸ್‌ಸಿಸಿ., ಎನ್‌ಎಸ್‌ಎಸ್, ರೆಡ್ ಕ್ರಾಸ್,ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿವಿ‘ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂ‘ದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, 40 ವರ್ಷಗಳ ಕಾಲ ನ್ಯಾಯಾಂಗದಲ್ಲಿ ಕಾರ್ಯ ಮಾಡುವಾಗ ಕೂಪಮಂಡೂಕನಾಗಿದ್ದೆ. ಅದಾದ ನಂತರ ಲೋಕಾಯುಕ್ತಕ್ಕೆ ಬಂದ ಮೇಲೆ ಸಮಾಜದಲ್ಲಿ ನಡೆಯುತ್ತಿರುವ ‘ಷ್ಟಾಚಾರ ಕಂಡು ಬೇಸರವಾಯಿತು. ಈ ಸಮಾಜದಲ್ಲಿ ನಾನು ನೋಡಿದಷ್ಟು ಭ್ರಷ್ಟಾಚಾರವನ್ನು ಇನ್ಯಾರು ನೋಡಲು ಸಾಧ್ಯವಿಲ್ಲ ಎನ್ನಿಸುತ್ತದೆ. ಹಿರಿಯರು ಕಟ್ಟಿದ ಸಮಾಜ ಇಂದು ‘ಷ್ಟಾಚಾರದ ಕೂಪವಾಗಿದೆ. ಜೈಲಿಗೆ ಹೋಗಿ ಬಂದವರಿಗೆ ಹೂಮಾಲೆ ಹಾಕಿ ಸ್ವಾಗತಿಸುವದರೊಂದಿಗೆ ಅವರಿಗೆ ಮತ ನೀಡಿ ಅವರನ್ನೇ ನಮ್ಮ ನಾಯಕರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ಸಮಾಜದ ಅಭಿವೃದ್ಧಿ ಆಗುವುದಾದರು ಎಲ್ಲಿ ಎಂದು ಪ್ರಶ್ನಿಸಿದರು.

                ನಮ್ಮ ಹಿರಿಯರು ಹೇಳಿಕೊಟ್ಟಂತಹ ಮೌಲ್ಯಗಳು ಕಳೆದು ಹೋಗುತ್ತಿದ್ದು, ಮುಂದಿನ ದಿನಗಳಲ್ಲಿ ಸಮಾಜದ ಬದಲಾವಣೆ ಮಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಮಾಜದ ಬದಲಾವಣೆ, ಅಭಿವೃದ್ಧಿಯಲ್ಲಿ ಯುವ ಪೀಳಿಗೆಯ ಪಾತ್ರ ಮಹತ್ವದ್ದಾಗಿದ್ದು, ಪ್ರತಿಯೊಬ್ಬರು ತೃಪ್ತಿ ಹಾಗೂ ಮಾನವೀಯತೆ ಎಂಬ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆದರೆ ದುರಾಸೆಯ ತೃಪ್ತಿ ಆಶಿಸಬಾರದು. ಇಲ್ಲಿಯವರೆಗೆ ಹೊರಬಂದ ಹಗರಣಗಳಲ್ಲಿ ದೇಶಕ್ಕೆ ಸಾಕಷ್ಟು ನಷ್ಟ ಉಂಟಾಗಿದೆ. ದುರಾಸೆ ಎಂಬ ಪದದಿಂದ ದೇಶ ಅಭಿವೃದ್ಧಿಯಲ್ಲಿ ಹಿಂದುಳಿಯುತ್ತಿದೆ.

                 ಸಮಾಜವನ್ನು ನಡೆಸಲು ಸಂವಿಧಾನದ ಅಡಿಯಲ್ಲಿ ಮೂರು ಅಂಗಗಳಿಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ. ಇವುಗಳಲ್ಲಿ ಶಾಸಕಾಂಗದಲ್ಲಿ ಜನಪ್ರತಿನಿಧಿಗಳು ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಸಮಸ್ಯೆ ಇತ್ಯರ್ಥ ಪಡಿಸಿ ಎಂದರೆ ಅದರ ಬದಲಾಗಿ ಕೇವಲ ಒಬ್ಬರ ಮೇಲೆ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಲೇ ಕಾಲಹರಣ ಮಾಡುತ್ತಿದ್ದಾರೆ. ಲೋಕಸಭೆಯ 545 ಸದಸ್ಯರಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವದು ಕೇವಲ 175 ಜನ ಮಾತ್ರ ಎಂದರೆ ಶಾಸಕಾಂಗದ ಕೆಲಸ ಎಲ್ಲಿಗೆ ಬಂದಿದೆ? ಕಾರ್ಯಾಂಗವನ್ನು ನೋಡುವುದಾದರೆ ಯಾವುದೇ ಸಮಿತಿ ರಚನೆಯಲ್ಲಿ ಅಧಿಕಾರಿ ವರ್ಗ ಇದ್ದರೆ ಆ ಸಮಿತಿಯ ಕಾರ್ಯ ಸುಲ‘ವಾಗಲಿದೆ ಎನ್ನುತ್ತಾರೆ. ಆದರೆ ಪ್ರತಿಯೊಂದು ಸಮಿತಿಗಳಲ್ಲಿನ ಅಧಿಕಾರಿಗಳು ಎಷ್ಟರ ಮಟ್ಟಿಗೆ ಲಂಚ ಪಡೆಯುತ್ತಾರೆ ಎಂಬುದಕ್ಕೆ ಕೆಲ ಅಧಿಕಾರಿಗಳ ಮೇಲೆ ದಾಖಲಾದ ದೂರುಗಳೇ ಸಾಕ್ಷಿ. ಅದೇ ರೀತಿ ನ್ಯಾಯಾಂಗದಲ್ಲೂ ಒಂದು ಪ್ರಕರಣ ತೀರ್ಪಿಗೆ ಬರಬೇಕಾದರು ಬರೊಬ್ಬರು 15 ರಿಂದ 20ವರ್ಷಗಳು ಸಮಯ ತೆಗೆದುಕೊಳ್ಳಲಾಗುತ್ತಿದೆ. ಅದರ ನಂತರ ಎರಡು ಬಾರಿ ಮೇಲ್ಮನವಿ ಅರ್ಜಿ, ನಂತರ ಹೈಕೋರ್ಟ್ ಆಮೇಲೆ ಸುಪ್ರೀಂ ಕೋರ್ಟ್ ಹೀಗೆ ಪ್ರಕರಣ ಕೊನೆಯ ಹಂತಕ್ಕೆ ತಲುಪವಷ್ಟರಲ್ಲಿ 20ವರ್ಷಕ್ಕೂ ಹೆಚ್ಚು ವರ್ಷಗಳು ಕಳೆದುಹೋಗಿರುತ್ತದೆ. ಇದರಿಂದ ಸಮಾಜದ ಅಭಿವೃದ್ಧಿಯಾಗುವುದು ಹೇಗೆ ಸಾಧ್ಯ. ಇದನ್ನು ಗಮನದಲ್ಲಿಟ್ಟುಕೊಂಡು ಯುವ ಪೀಳಿಗೆ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ತೃಪ್ತಿ ಎಂದರೆ ಇಲ್ಲಿ ನಮ್ಮ ಆಸೆಗಳನ್ನು ಕಾನೂನಿ ಚೌಕಟ್ಟಿನಲ್ಲಿ ಈಡೇರಿಸಿಕೊಳ್ಳಬೇಕು. ಆದರೆ ಕೆಲವರು ದುರಾಸೆಯ ತೃಪ್ತಿ ಪಡೆದುಕೊಳ್ಳುತ್ತಿರುತ್ತಾರೆ.

                  ಇದಕ್ಕೆ ಉದಾಹರಣೆಯಾಗಿ ಬಾಗಲಕೋಟೆಯಿಂದ ಲೋಕಾಯುಕ್ತಕ್ಕೆ ದೂರು ನೀಡಲು ಬಂದಿದ್ದ ದಂಪತಿಯೊಬ್ಬರು ತಮ್ಮ ಮಗುವನ್ನು ತೆಗೆದುಕೊಂಡು ಅನಾರೋಗ್ಯದ ವಿಚಾರದಿಂದ ಒಂದು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದರೆ ಅಲ್ಲಿ ವೈದ್ಯನಾಗಿರುವ ಒಬ್ಬರು ಮಗುವಿಗೆ ಚಿಕಿತ್ಸೆ ನೀಡಲು ಇಂತಿಷ್ಟು ಲಂಚ ನೀಡಬೇಕು ಎಂಬ ಆಮೀಷ ಒಡ್ಡಿದ್ದರು. ಅವರು ಸರ್ಕಾರಿ ವೈದ್ಯರಾಗಿದ್ದರೂ ಹಣಕ್ಕೆ ಪೀಡಿಸಿರುವುದು ದುರಾಸೆಯಾಗಿದೆ ಎಂದರು. ಮಾನವೀಯತೆ ಎಂಬ ವಿಚಾರಕ್ಕೆ ಸಂಬಂಧಿಸಿ ಕಳೆದು ಒಂದು ವರ್ಷದ ಹಿಂದೆ ಬೆಂಗಳೂರಿನ ಆಸುಪಾಸಿನಲ್ಲಿ ರಸ್ತೆ ಅಪಘಾತಕ್ಕೀಡಾಗಿ ಲಾರಿ ಚಕ್ರ ದೇಹದ ಮೇಲೆ ಹರಿದು ದೇಹ ಇಬ್ಬಾಗವಾದರೂ ಜೀವಂತವಾಗಿದ್ದರು. ಅಲ್ಲಿ ನೆರೆದಿದ್ದಂತಹ ಜನರು ಕೇವಲ ಪೋಟೋ ತೆಗೆದರೇ ಹೊರತು ನೀರು ಕೊಡುವ ಮಾನವೀಯತೆಯನ್ನು ಯಾರು ತೋರಿರಲಿಲ್ಲ. ಆದರೆ ಆಂಬುಲೆನ್ಸ್ ಮೂಲಕ ತಮ್ಮನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಲು ಆಸ್ಪತ್ರೆಗೆ ಸಿಬ್ಬಂದಿಗೆ ತಿಳಿಸಿದ್ದರು. ಅದು ಮಾನವೀಯತೆ ಎಂದು ತಿಳಿಸಿದರು.

               ಕಾರ್ಯಕ್ರಮ ಉದ್ಘಾಟನೆ ಮಾಡಿದ ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮಾತನಾಡಿ, ಇಂದಿನ ಸಮಾಜ ನಾಗಾಲೋಟ ಇದ್ದಂತೆ. ಸಮಾಜವು ಅತಿ ವೇಗವಾಗಿ ಬೆಳೆಯುತ್ತಿದೆ, ಆದರೆ ಆರ್ಥಿಕವಾಗಿ ಅಭಿವೃದ್ಧಿಯಾಗುವಲ್ಲಿ ಹಿಂದುಳಿದಿದ್ದೇವೆ. ನಾಗರಿಕ ಸಮಾಜದಲ್ಲಿ ಜನರು ತಮ್ಮ ವ್ಯಕಿತ್ವ ಪಾತ್ರಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡಬೇಕಿದೆ. ಸಾಮಾಜಿಕ ಪಿಡುಗುಗಳನ್ನು ಹೊಡೆದೋಡಿಸುವಲ್ಲಿ ಯುವ ಜನತೆ ವೈಜ್ಞಾನಿಕವಾಗಿ ಆಲೋಚನೆ ಮಾಡಿ ಸಮಾಜದ ಅಭಿವೃದ್ಧಿ ಮಾಡುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಿದೆ. ಅಂತಹ ಗುಣಗಳುಳ್ಳ ಸಂತೋಷ್ ಹೆಗಡೆಯವರು ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿರುವುದು ನಮಗೆ ಸಡಗರದ ದಿನವಾಗಿದೆ. ಅವರಂತೇಯೆ ಅವರ ಮಾತುಗಳನ್ನು ಗಂಭಿರವಾಗಿ ಅರ್ಥೈಸಿಕೊಂಡು ಯುವ ಪೀಳಿಗೆ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕರೆ ನೀಡಿದರು.

                    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಪ್ರಾಂಶುಪಾಲರಾದ ಶಾಲಿನಿ.ಬಿ.ಆರ್.ಮಾತನಾಡಿ, ಮಹಿಳೆಯು ಎಲ್ಲಾ ರಂಗದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದ್ದಾಳೆ. ಸಮಾಜದ ಅಭಿವೃದ್ಧಿಯಲ್ಲಿ ಹೆಣ್ನು ಗುರುತಿಸಿಕೊಳ್ಳಬೇಕು. ಹೆಣ್ಣನ್ನು ಪ್ರಕೃತಿಗೆ ಹೋಲಿಕೆ ಮಾಡುತ್ತಾರೆ. ಆದರೆ ಇಂದು ಪ್ರಕೃತಿ ನಾಶವಾಗುತ್ತಿದ್ದು, ಪ್ರಾಕೃತಿಕ ವಿಕೋಪಗಳು ಸಂ‘ವಿಸುತ್ತಿವೆ ಎಂದರು.

                   ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಡಾ.ನರೇಂದ್ರ ಸ್ವಾಗತಿಸಿದರೆ, ಕುಶಲಕುಮಾರಿ ವಂದಿಸಿದರು. ‘ರತ್‌ಶೆಟ್ಟಿ ಪ್ರಾರ್ಥಿಸಿದರೆ, ಎನ್‌ಸಿಸಿ ಮುಖ್ಯಸ್ಥ ಡಾ.ಅನಿಲ್ ಕುಮಾರ್ ಗಣ್ಯರ ಪರಿಚಯ ಮಾಡಿಕೊಟ್ಟರು. ಡಾ.ಗೀತಾವಸಂತ ನಿರೂಪಿಸಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap