ರಂಗೇರುತ್ತಿರುವ ರಾಜ್ಯ ಸರ್ಕಾರಿ ನೌಕರರ ಚುನಾವಣೆ

ಅಭ್ಯರ್ಥಿಗಳ ಭರವಸೆಯ ಮಹಾಪೂರ : ಗುಟ್ಟು ಬಿಡದ ನೌಕರರು-ಶಿಕ್ಷಕರು

ಕುಣಿಗಲ್

ವಿಶೇಷ ವರದಿ:ಎಂ.ಡಿ. ಮೋಹನ್

       ಮುಗಿದ ಲೋಕಸಭಾ ಚುನಾವಣೆ ಹಾಗೂ ಪುರಸಭಾ ಚುನಾವಣೆಯ ಬೆನ್ನಲ್ಲೇ ತಾಲ್ಲೂಕಿನಲ್ಲೀಗ ರಾಜಕಾರಣಿಗಳಿಗೇನು ಕಮ್ಮೀ ಇಲ್ಲಾ ಎಂಬಂತೆ ಸರ್ಕಾರಿ ನೌಕರರ ಚುನಾವಣೆ ರಂಗೇರುತ್ತೀದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕುಣಿಗಲ್ ಶಾಖೆಗೆ ಇದೇ ತಿಂಗಳ13ರಂದು ನಡೆಯುವ ಚುನಾವಣೆ ನಾಗರೀಕರ ವಲಯದಲ್ಲಿ ಬಾರೀ ಚರ್ಚೆಗೆ ಗ್ರಾಸವನ್ನುಂಟುಮಾಡಿದ್ದು ಮತ ಚಲಾಯಿಸುವ ಮತದಾರರು ಹೊಸಬರ ಹುಡುಕಾಟದ ಜೊತೆಗೆ, ಅಭ್ಯರ್ಥಿಗಳೊಂದಿಗೆ ನಯವಾಗಿಯೇ ಮಾತನಾಡುತ್ತ ಮತಹಾಕುವ ಭರವಸೆ ನೀಡಿದರೆ.,,, ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಎಲ್ಲಾ ಹರಕೆ ತೀರಿಸುವ ಮಾತುಗಳನ್ನಾಡುತ್ತಿದ್ದಾರೆ..,,

      ರಂಗೇರುತ್ತಿರುವ ಶಿಕ್ಷಕರ ಕ್ಷೇತ್ರ: ಶಿಕ್ಷಕರ ಬಳಗ ಹೆಚ್ಚಿರುವುದರಿಂದ ಇಡೀ ಚುನಾವಣೆಯ ಕ್ಷೇತ್ರದಲ್ಲಿಯೇ ಶಿಕ್ಷಕರ ಪ್ರಚಾರದ ಭರಾಟೆ ಹೆಚ್ಚಾಗಿ ಗೋಚರಿಸುತ್ತದೆ. ಶಿಕ್ಷಕರ ಕ್ಷೇತ್ರದಲ್ಲಿ 865 ಮತಗಳಿದ್ದು, ತಲಾ ಒಬ್ಬ ಶಿಕ್ಷಕ 3 ಮತಗಳನ್ನ ಚಲಾಯಿಸ ಬಹುದು. ಈ ಹಿಂದೆ ಶಿಕ್ಷಕರ ಕ್ಷೇತ್ರದಲ್ಲಿ ಎರಡು ಗುಂಪು ಇತ್ತು. ಆದರೆ ಅದು ಈ ಬಾರಿ ತಮ್ಮ ತಮ್ಮಲ್ಲಿನ ಒಳ ವೈಮನಸ್ಸಿನಿಂದ ಒಡೆದು ಮೂರುಗುಂಪಾಗಿ ಮಾರ್ಪಟ್ಟಿದ್ದು ಮೂರು ಗುಂಪುಗಳಲ್ಲಿಯೂ ತಲಾ 3ಜನ ನಿಂತಿರುವ ಶಿಕ್ಷಕ ಅಭ್ಯರ್ಥಿಗಳು. ಸ್ಪರ್ದೆಯ ಕಣದಲ್ಲಿ ತಮ್ಮದೇ ಆದ ಪ್ರಚಾರದ ಭರಾಟೆಯನ್ನ ಹೆಚ್ಚಿಸಿದ್ದಾರೆ.

      ಶಿಕ್ಷಕರ ತಂಡದಿಂದ ಮೂರು ಬಣಗಳಾಗಿದ್ದು ಚುನಾವಣೆಯಲ್ಲಿ ಗೆದ್ದರೂ ಸಹ ಉನ್ನತ ಸ್ಥಾನದಿಂದ ವಂಚಿತರಾಗಿದ್ದ ಚನ್ನಾಪುರ ಸ.ಕಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಹೆಚ್.ಬಿ.ರವಿಕುಮಾರ್ ನೇತೃತ್ವದ ತಂಡದಲ್ಲಿ ಪಂಚವಟಿ ತಾಂಡ್ಯದ ಸ.ಕಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಬಿ.ಹೆಚ್. ಹನುಪಂತರಾಯಪ್ಪ, ಹಾಗೂ ಅಮೃತೂರು ಹೋ., ಹೊಸಕೆರೆ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಮಹಾಲಕ್ಷ್ಮಮ್ಮ ಇವರುಗಳು ತಮ್ಮದೇ ಆದ ರೀತಿಯಲ್ಲಿ ಪ್ರಚಾರದ ತಂತ್ರಗಾರಿಕೆಯನ್ನ ಮಾಡಿಕೊಂಡಿದ್ದು ಹಿಂದೆ ಮಾಡಿದ ಸಾಧನೆಯನ್ನ ಕರಪತ್ರಗಳ ಮೂಲಕ ಮುದ್ರಿಸಿ ನಮ್ಮ ತಂಡಕ್ಕೆ ಕಾರಣಾಂತರದಿಂದ ಕೈತಪ್ಪಿದ ಅಧಿಕಾರದ ಗದ್ದುಗೆಯ ಅವಕಾಶ ಕೊಡಿ ಎನ್ನುತ್ತ ಸರಳ ಸಜ್ಜನಿಕೆಯಿಂದ ನಾವು ನಡೆದುಕೊಳ್ಳುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತೇವೆ ಎಂಬ ಭರವಸೆಯೊಂದಿಗೆ ಮತಕೇಳುವ ಮೂಲಕ ಶಿಕ್ಷಕರ ಮತಬೇಟೆಯಲ್ಲಿ ತೊಡಗಿದ್ದಾರೆ.

      ಸರ್ಕಾರಿ ನೌಕರರ ಸಂಘದಲ್ಲಿ ಹಿಂದೆ ಜಯಗಳಿಸಿ ಅಧಿಕಾರ ಪಡೆದು ಅಧ್ಯಕ್ಷರಾಗಿ ಕೆಸಲ ಮಾಡಿರುವ ಗೋಪಾಲ್ ಅವರ ತಂಡದಲ್ಲಿ ಬಿ.ಎನ್.ರಾಮಸ್ವಾಮಿ, ಸೋಮಶೇಖರ್(ಕಂಡಾಕ್ಟರ್) ಎಂಬುವ ಶಿಕ್ಷಕರುಗಳು ಸ್ಪರ್ದೇಯಲ್ಲಿದ್ದು ಗೋಪಾಲ್ ತಮ್ಮ ಅವಧಿಯಲ್ಲಿ ಶಿಕ್ಷಕರಿಗೆ ಮಾಡಿದ ಸೇವೆಯನ್ನೇ ಈ ಬಾರಿ ಮೆಲುಕಾಕುವ ಮೂಲಕ ಮತಗಿಟ್ಟಿಸುವಲ್ಲಿ ಮುಂದಾಗಿದ್ದು ಈ ಬಾರಿ ಶಿಕ್ಷಕ ರಾಮಸ್ವಾಮಿ ಎಂಬುವರ ಸಹಕಾರದೊಂದಿಗೆ ಹೆಚ್ಚಿನ ಸಾಧನೆ ಮಾಡುವ ಮಹದಾಸೆಯೊಂದಿಗೆ ಪ್ರಚಾರದ ಭರಾಟೆಯಲ್ಲಿದ್ದಾರೆ.

      ಸರ್ಕಾರಿ ನೌಕರರ ಸಂಘದಲ್ಲಿಯೂ ಉನ್ನತ ಸ್ಥಾನ ಪಡೆಯುವುದರ ಜೊತೆಗೆ, ಜಿಲ್ಲಾ ಪ್ರಾ.ಮಿ.ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಾಗರಾಜು (ಗುರು) ಟೀಂ ನಲ್ಲಿ ಶಿವಣ್ಣ ಹಾಗೂ ಚಂದ್ರಕಲಾ ಅವರು ಸ್ಪರ್ಧೆಯಲ್ಲಿದ್ದು ತಮ್ಮ ತಂಡದ ನಾಯಕರು ಮಾಡಿದ ಸೇವೆಯನ್ನ ಪರಿಗಣಿಸಿ ಮತನೀಡಿ ಎಂಬ ಪ್ರಚಾರದಲ್ಲಿ ತೊಡಗಿ ಮತಗಿಟ್ಟಿಸುವಲ್ಲಿ ಮುಂದಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap