ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಕಟ….!

ಮುಂಬಯಿ:

   ಭಾರತ ಸಿನಿಮಾ ಲೋಕದಲ್ಲಿ ಪ್ರತಿಷ್ಠಿತ ಎನಿಸಿರುವ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ2024 ರ (ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ 2024) ಅದ್ಧೂರಿಯಾಗಿ ನಡೆಯಿತು.

   ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳು ೨೦೨೪ ವಿಜೇತರ ಪಟ್ಟಿ ಹೊರಬಿದ್ದಿದೆ. ಅದ್ಧೂರಿ ಕಾರ್ಯಕ್ರಮಕ್ಕೆ ಶಾರುಖ್​ ಖಾನ್​, ಕರೀನಾ ಕಪೂರ್​​, ಆದಿತ್ಯ ರಾಯ್​, ರಾಣಿ ಮುಖರ್ಜಿ, ಆಟ್ಲಿ ಮತ್ತು ನಯನತಾರಾ ಸೇರಿದಂತೆ ಸಾಕಷ್ಟು ಕಲಾವಿದರು ಹಾಜರಿದ್ದರು.

    ಈ ಸಮಾರಂಭದಲ್ಲಿ ಜವಾನ್​ ಚಿತ್ರದ ಅತ್ಯುತ್ತಮ ನಟನೆಗಾಗಿ ಶಾರುಖ್​ ಖಾನ್ ಮತ್ತು ನಯನತಾರಾ ಅವರು ದಾದಾಸಾಹೇಬ್​ ಅಂತಾರಾಷ್ಟ್ರೀಯ ಫಾಲ್ಕೆ ಪ್ರಶಸ್ತಿ ಪ್ರಶಸ್ತಿ ಪಡೆದರು. ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ- 2024ರ ವಿಜೇತರ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ.

    68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಆಶಾ ಪರೇಖ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

ಉತ್ತಮ ನಟ: ಶಾರುಖ್​ ಖಾನ್​ (ಜವಾನ್​)

ಉತ್ತಮ ನಟಿ: ನಯನತಾರಾ (ಜವಾನ್​)

ಉತ್ತಮ ನಟಿ: ರಾಣಿ ಮುಖರ್ಜಿ (ಮಿಸ್ಟರ್​ ಚಟರ್ಜಿ vs ನಾರ್ವೆ)

ಉತ್ತಮ ನಿರ್ದೇಶಕ: ಸಂದೀಪ್​ ರೆಡ್ಡಿ ವಂಗಾ (ಅನಿಮಲ್​)

ಉತ್ತಮ ನಟ (ವಿಮರ್ಶೆ): ವಿಕ್ಕಿ ಕುಶಾಲ್​ (ಸ್ಯಾಮ್​ ಬಹದೂರ್​)

ಉತ್ತಮ ಸಂಗೀತ ನಿರ್ದೇಶಕ: ಅನಿರುದ್ಧ ರವಿಚಂದರ್​ (ಜವಾನ್​)

ಉತ್ತಮ ಹಿನ್ನೆಲೆ ಗಾಯಕ: ವರುಣ್​ ಜೈನ್​ ( ಝರಾ ಹಟ್ಕೆ ಝರಾ ಬಚ್ಕೆ ಸಿನಿಮಾದಿಂದ ತೇರೆ ವಸ್ತೆ)

ಉತ್ತಮ ಖಳನಟ: ಬಾಬಿ ಡಿಯೋಲ್​ (ಅನಿಮಲ್​)

ಉತ್ತಮ ನಟಿ (ಕಿರುತೆರೆ): ರೂಪಾಲಿ ಗಂಗೂಲಿ (ಅನುಪಮಾ)

ಉತ್ತಮ ನಟ (ಕಿರುತೆರೆ): ನೈಲ್​​ ಭಟ್​ (ಘಮ್​ ಹಾಯ್​ ಕಿಸಿಕೆ ಪ್ಯಾರ್​ ಮೇನ್​)

ವರ್ಷದ ಟೆಲಿವಿಷನ್​ ಸರಣಿ: ಘಮ್​ ಹಾಯ್​ ಕಿಸಿಕೆ ಪ್ಯಾರ್​ ಮೇನ್​

ಉತ್ತಮ ನಟಿ (ವೆಬ್​ ಸರಣಿ): ಕರಿಷ್ಮಾ ತನ್ನಾ (ಸ್ಕೂಪ್​)

ಚಲನಚಿತ್ರೋದ್ಯಮಕ್ಕೆ ಅತ್ಯುತ್ತಮ ಕೊಡುಗೆ: ಮೌಶುಮಿ ಚಟರ್ಜಿ

ಸಂಗೀತ ಉದ್ಯಮಕ್ಕೆ ಅತ್ಯುತ್ತಮ ಕೊಡುಗೆ: ಕೆ ಜೆ ಯೇಸುದಾಸ್​

ಇದೇ ಸಂದರ್ಭದಲ್ಲಿ ನಿರ್ದೇಶಕ ಆಟ್ಲಿ, ನಟ ಶಾಹಿದ್ ಕಪೂರ್ ಮತ್ತು ನಿರ್ದೇಶಕ ಜೋಡಿ ರಾಜ್ ಮತ್ತು ಡಿಕೆ ಕೂಡ 2023 ರಲ್ಲಿ ತಮ್ಮ ಪ್ರಯತ್ನಗಳಿಗಾಗಿ ಪ್ರಶಸ್ತಿಯನ್ನು ಪಡೆದರು

Recent Articles

spot_img

Related Stories

Share via
Copy link
Powered by Social Snap